ಬೆಂಗಳೂರು: ಫೆಬ್ರವರಿ ೧ ರಂದು ಕೇಂದ್ರ ಬಜೆಟ್ ಮಂಡನೆ ಆಗುತ್ತಿರುವ ಬೆನ್ನಲ್ಲೇ, ಎಲ್ಲರ ಚಿತ್ತ ರಾಜ್ಯ ಬಜೆಟ್ನತ್ತ ನೆಟ್ಟಿತ್ತು. ಇದೀಗ ರಾಜ್ಯ ಸರ್ಕಾರ ಮಾರ್ಚ್ ೬ ರಂದು ಬಜೆಟ್ ಮಂಡನೆ ಮಾಡಲು ನಿರ್ಧಾರ ಮಾಡಿಕೊಂಡಿದೆ ಎಂಬ ಮಹತ್ವದ ವಿಚಾರ ಹೊರಬಿದ್ದಿದೆ.
ದಿ.ದೇವರಾಜು ಅರಸು ಅವರ ದಾಖಲೆಯನ್ನು ಸರಿಗಟ್ಟಿರುವ ಸಿಎಂ ಸಿದ್ಧರಾಮಯ್ಯ, ಇದೀಗ ಮತ್ತೊಂದು ದಾಖಲೆ ಬರೆಯಲು ಮುಂದಾಗಿದ್ದಾರೆ. ೧೬ ಬಾರಿ ರಾಜ್ಯ ಬಜೆಟ್ ಮಂಡನೆ ಮಾಡಿರುವ ಹೆಗ್ಗಳಿಕೆ ಸಿದ್ಧರಾಮಯ್ಯರ ಹೆಸರಿನಲ್ಲಿದ್ದು, ಇದೀಗ ೧೭ ನೇ ಬಜೆಟ್ ಮಂಡನೆಗೆ ಅವರು ತಯಾರಿ ಆರಂಭಿಸಿದ್ದಾರೆ. ಇದರ ಜೊತೆಗೆ ಇಡೀ ರಾಜ್ಯದಲ್ಲಿ ಯಾರೂ ಕೂಡ ಮಾಡದ ೧೭ ಬಜೆಟ್ ಮಂಡನೆ ಮಾಡಿದ ಸಿಎಂ ಎಂಬ ದಾಖಲೆ ಸಿದ್ಧರಾಮಯ್ಯರ ಹೆಸರಿನಲ್ಲಿರಲಿದೆ.
ಮಾ.೬ಕ್ಕೆ ರಾಜ್ಯ ಬಜೆಟ್ಗೆ ಮುಹೂರ್ತ



