ಮೊದಲ ಪಂದ್ಯದಲ್ಲಿ ಸೋಲುವುದರಲ್ಲಿ ಖ್ಯಾತವಾಗಿದ್ದ ಮುಂಬೈ ಇಂಡಿಯನ್ಸ್ ತಂಡ ಇದೀಗ ಕೋಲ್ಕತಾ ನೈಟ್ ರೈರ್ಸ್ ತಂಡವನ್ನು 6 ವಿಕೆಟ್ ಗಳಿಂದ ಸೋಲಿಸುವ ಮೂಲಕ 13 ರ್ಷಗಳ ಬಳಿಕ ಶುಭಾರಂಭ ಮಾಡಿದೆ. ರೋಹಿತ್ ರ್ಮಾ ಮತ್ತು ರಿಯಾನ್ ರಿಕೆಲ್ಟನ್ ಅವರ ರ್ಜರಿ ರ್ಧಶತಕಗಳ ನೆರವಿನಿಂದ ಎದುರಾಳಿಗಳ ಮೇಲೆ ಸವಾರಿ ಮಾಡಿದ 5 ಬಾರಿಯ ಚಾಂಪಿಯನ್ ತಂಡ 224 ರನ್ ಗಳ ಬೃಹತ್ ಮೊತ್ತವನ್ನು ಬೆನ್ನಟ್ಟಿ ಗೆಲುವು ಸಾಧಿಸಿತು.
ವಾಂಖೆಡೆ ಕ್ರೀಡಾಂಗಣದಲ್ಲಿ ಮರ್ಚ್ 29 ಭಾನುವಾರದಂದು ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕೋಲ್ಕತಾ ನೈಟ್ ರೈರ್ಸ್ ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 220 ರನ್ ಗಳಿಸಿತು. ಇದಕ್ಕುತ್ತರವಾಗಿ ಮುಂಬೈ ಇಂಡಿಯನ್ಸ್ ತಂಡ ಇನ್ನೂ 5 ಎಸೆತಗಳು ಬಾಕಿ ಉಳಿದಿರುವಾಗಲೇ 4 ವಿಕೆಟ್ ಕಳೆದುಕೊಂಡು ಗುರಿ ತಲುಪಿತು.
2012 ರಲ್ಲಿ ಋತುವಿನ ಆರಂಭದ ಪಂದ್ಯವನ್ನು ಗೆದ್ದದ್ದೇ ಕೊನೆ. ಆ ಬಳಿಕ ಒಂದೇ ಒಂದು ಬಾರಿಯೂ ಮುಂಬೈ ಇಂಡಿಯನ್ಸ್ ಪ್ರಥಮ ಪಂದ್ಯ ಗೆದ್ದು ಶುಭಾರಂಭ ಮಾಡಿದ್ದಿಲ್ಲ. ಇದೀಗ ಗೆಲ್ಲುವ ಮೂಲಕ 13 ರ್ಷಗಳ ಸೋಲಿನ ಅಪವಾದಕ್ಕೆ ಮುಕ್ತಿ ದೊರಕಿದೆ. ಇನ್ನು 2021ರ ಐಪಿಎಲ್ ಸೀಸನ್ ನಲ್ಲಿ ಚೆನ್ನೈ ವಿರುದ್ಧ ದಿಲ್ಲಿಯಲ್ಲಿ 219 ರನ್ ಬೆಂಬತ್ತಿ ಗೆಲುವು ಸಾಧಿಸಿದ್ದು ಮುಂಬೈ ತಂಡದ ಈವರೆಗಿನ ಅತಿದೊಡ್ಡ ರನ್ ಚೇಸ್ ಆಗಿತ್ತು. ಇದೀಗ ಆ ದಾಖಲೆಯನ್ನು ವಾಂಖೆಡೆಯಲ್ಲಿ ಅಳಿಸಿದೆ. ರೋಹಿತ್ ರ್ಮಾ ಮತ್ತು ರಿಯಾನ್ ರಿಕೆಲ್ಟನ್ ಮೊದಲ ವಿಕೆಟ್ ಗೆ 11.5 ಓವರ್ ಗಳಲ್ಲಿ 148 ರನ್ ಗಳ ಜೊತೆಯಾಟವಾಡಿ ಕೋಲ್ಕತಾ ಕೈಯಿಂದ ಪಂದ್ಯವನ್ನು ಸಂಪರ್ಣವಾಗಿ ಕಸಿದುಕೊಂಡರು. ಹೀಗಾಗಿ ಉಳಿದ ಬ್ಯಾಟರ್ ಗಳಿಗೆ ದೊಡ್ಡ ಮಟ್ಟದ ಕೆಲಸ ಉಳಿಯಲಿಲ್ಲ.
2021ರ ಐಪಿಎಲ್ ಸೀಸನ್ ನಲ್ಲಿ ಚೆನ್ನೈ ವಿರುದ್ಧ ದಿಲ್ಲಿಯಲ್ಲಿ 219 ರನ್ ಬೆಂಬತ್ತಿ ಗೆಲುವು ಸಾಧಿಸಿದ್ದು ಮುಂಬೈ ತಂಡದ ಈವರೆಗಿನ ಅತಿದೊಡ್ಡ ರನ್ ಚೇಸ್ ಆಗಿತ್ತು. ಇದೀಗ ಆ ದಾಖಲೆಯನ್ನು ವಾಂಖೆಡೆಯಲ್ಲಿ ಅಳಿಸಿದೆ. ರೋಹಿತ್ ರ್ಮಾ ಮತ್ತು ರಿಯಾನ್ ರಿಕೆಲ್ಟನ್ ಮೊದಲ ವಿಕೆಟ್ ಗೆ 11.5 ಓವರ್ ಗಳಲ್ಲಿ 148 ರನ್ ಗಳ ಜೊತೆಯಾಟವಾಡಿ ಕೋಲ್ಕತಾ ಕೈಯಿಂದ ಪಂದ್ಯವನ್ನು ಸಂಪರ್ಣವಾಗಿ ಕಸಿದುಕೊಂಡರು. ಹೀಗಾಗಿ ಉಳಿದ ಬ್ಯಾಟರ್ ಗಳಿಗೆ ದೊಡ್ಡ ಮಟ್ಟದ ಕೆಲಸ ಉಳಿಯಲಿಲ್ಲ.
23 ಎಸೆತಗಳಲ್ಲಿ ರ್ಧಶತಕ ಗಳಿಸಿದ ರೋಹಿತ್ ರ್ಮಾ ಔಟಾಗುವ ಮುನ್ನ 38 ಎಸೆತಗಳಲ್ಲಿ 78 ರನ್ ಗಳಿಸಿದರು. ಅವರ ಇನ್ನಿಂಗ್ಸ್ ನಲ್ಲಿ ತಲಾ 6 ಬೌಂಡರಿ ಮತ್ತು 6 ಸಿಕ್ಸರ್ ಗಳಿದ್ದವು. ಇನ್ನು 24 ಎಸೆತಗಳಲ್ಲಿ ರ್ಧಶತಕ ಪೂರೈಸಿದ ರಿಯಾನ್ ರಿಕೆಲ್ಟನ್ ಅವರು 43 ಎಸೆತಗಳಲ್ಲಿ 81 ರನ್ ಗಳಿಸಿದರು. ಇಧರಲ್ಲಿ 4 ಬೌಂಡರಿ ಮತ್ತು 8 ಸಿಕ್ಸರ್ ಗಳನ್ನು ಒಳಗೊಂಡಿದ್ದವು. ರೋಹಿತ್ ವಿಕೆಟ್ ಪತನದ ಬಳಿಕ ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿದ ಸೂರ್ಯಕುಮಾರ್ ಯಾದವ್ ಅವರು ಕೇವಲ 8 ಎಸೆತಗಳಲ್ಲಿ 3ಬೌಂಡರಿಗಳಿದ್ದ 16 ರನ್ ಗಳಿಸಿ ಔಟಾದರು. ನಾಯಕ ಹರ್ದಿಕ್ ಪಾಂಡ್ಯ(11 ಎಸೆತದಲ್ಲಿ 18) ತಂಡವನ್ನು ಗೆಲುವಿನ ದಡ ಸೇರಿಸಿದರು.
ಮುಂಬೈ ಇಂಡಿಯನ್ಸ್ಗೆ ಅಂಟಿದ್ದ ಅಪವಾದಕ್ಕೆ ಮುಕ್ತಿ



