ದೇವನಹಳ್ಳಿ: ಜಿಲ್ಲೆಯಾಧ್ಯಂತ ನಾಗರೀಕ ಸೌಲಭ್ಯಗಳಾದ ಕುಡಿಯುವ ನೀರು ಪ್ರತಿ ಮನೆಗೆ ಶೌಚಾಲಯ, ರಸ್ತೆ ಚರಂಡಿ ಬೀದಿ ದೀಪ ನಿರ್ಮಾಣ ಮಾಡಿ ಲೈಬ್ರರಿ ಟ್ರೈನಿಂಗ್ ಸೆಂಟರ್ಗಳನ್ನು ತೆರೆಯಬೇಕು ಎಂದು ಬಿಎಸ್ಪಿ ರಾಜ್ಯಾಧ್ಯಕ್ಷ ಮಾರಸಂದ್ರ ಮುನಿಯಪ್ಪ ತಿಳಿಸಿದರು.
ದೇವನಹಳ್ಳಿ ಪಟ್ಟಣದ ಪತ್ರಕರ್ತರ ಭವನದಲ್ಲಿ ಬಿಎಸ್ಪಿ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಪತ್ರಿಕಾ ಗೋಷ್ಟಿಯಲ್ಲಿಮಾತನಾಡಿದರು. ಸಾರ್ವಜನಿಕರ ವಿವಿದ ಬೇಡಿಕೆಗಳನ್ನು ಅಗ್ರಹಿಸಿ ನ. 6ರಂದು ಬೆಳಗ್ಗೆ 11 ಗಂಟೆಗೆ ದೊಡ್ಡಬಳ್ಳಾಪುರ ಪ್ರವಾಸಿ ಮಂದಿರದಿಂದ ಮೆರವಣಿಗೆ ಮೂಲಕ ಉಪಾವಿಭಾಗಾಧಿಕಾರಿ ಕಛೇರಿಯವರಗೆ ಮೆರವಣಿಗೆ ನಡೆಸಲಾಗುವುದು ಎಂದು ತಿಳಿಸಿದರು.
ಪರಿಶಿಷ್ಟ ಜಾತಿ, ವರ್ಗ ಹಿಂದುಳಿದವರು ಧಾರ್ಮಿಕ ಅಲ್ಪಸಂಖ್ಯಾತರ ಮತ್ತು ಮೇಲ್ಜಾತಿ ಬಡವರು ಸಣ್ಣ ಮನೆಗಳಲ್ಲಿ ಎರಡು ಮೂರು
ಕುಟುಂಬಗಳು ವಾಸವಾಗಿವೆ ಈ ಹಿನ್ನಲೆಯಲ್ಲಿ ನೂರಾರು ಎಕರೆಯನ್ನು ಉಳಿಸಿ ಇಂತಹ ಕುಟುಂಬಗಳಿಗೆ ನಿವೇಶನಗಳನ್ನು ಹಂಚಿಕೆ ಮಾಡಬೇಕು ಇತೀಚಿನ ದಿನಗಳಲ್ಲಿ ಪರಿಶಿಷ್ಟ ಪಂಗಡ ಮತ್ತು ವರ್ಗದ ಕುಟುಂಬಗಳ ಮೇಲೆ ದೌರ್ಜನ್ಯ ಹೆಚ್ಚುತಿದ್ದು ಇಂತಹವರಿ ಆಶ್ರಯ ನೀಡಬೇಕು ಎಂದುರುಪರಿಶಿಷ್ಟ ವಿದ್ಯಾವಂತ ನಿರುದೋಗಿಗಳಿಗೆ ಮಾಸಿಕ ಐದು ಸಾವಿರ ಭತ್ಯ ನೀಡಬೇಕು ಮತ್ತು ಉದ್ಯೋೀಗ ಖಾತ್ರಿ ಯೋಜನೆಯಡಿ ಉದ್ಯೋಗ ಕಲ್ಪಿಸಬೇಕು ಜಿಲ್ಯೆಯಾಧ್ಯಂತ ಪರಿಶಿಷ್ಟ ಜಾತಿ ವರ್ಗದ ಸ್ಮಶಾಣಗಳನ್ನು ಒತ್ತುವರಿ ಮಾಡಿಕೊಂಡಿದ್ದು ಈ ಒತ್ತುವರಿಯನ್ನು ತೆರವುಗೊಳಿಸಬೇಕು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮುನಿಯಪ್ಪ, ಮತ್ತು ನಂದಿಗುಂದಿ, ಬೆ.ಗ್ರಾ ಜಿಲ್ಲಾಧ್ಯಕ್ಷ ರಾಜಪ್ಪ, ಪಟ್ಟಣದ ತಾಲ್ಲೂಕು ಅಧ್ಯಕ್ಷ ಕೆ.ಸಿ ನಾಗರಾಜ್, ವಿಜಯಪುರ ಹೋಬಳಿ ಅದ್ಯಕ್ಷ ನಾಗಣ್ಣ, ಮುಖಂಡರಾದ ದೇವರಾಜ್, ರಾಮಾಂಜಿನಪ್ಪ, ಮತ್ತಿತರಿದ್ದರು.