ಮತ್ತಿಕರೆಯಜೆಪಿ ಪಾರ್ಕ್ನಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಅವರ ಬೆಂಗಳೂರು ನಡಿಗೆಕಾರ್ಯಕ್ರಮದಲ್ಲಿ ಭಾರೀ ಹೈಡ್ರಾಮಾ ನಡೆದಿದೆ.ರಾಜರಾಜೇಶ್ವರಿ ನಗರದ ಬಿಜೆಪಿ ಶಾಸಕ ಮುನಿರತ್ನಅವರು ವೇದಿಕೆ ಕಾರ್ಯಕ್ರಮದಲ್ಲಿ ಡಿಕೆಶಿ ಮತ್ತು ಸರ್ಕಾರದ ವಿರುದ್ಧ ಬಹಿರಂಗವಾಗಿಯೇಆಕ್ರೋಶ ಹೊರಹಾಕಿದ್ದಾರೆ.
ಆರ್ಎಸ್ಎಸ್ಡ್ರೆಸ್, ಟೋಪಿ ಧರಿಸಿ ಜೆಪಿ ಪಾರ್ಕ್ಗೆ ಬಂದ ಬಿಜೆಪಿ ಶಾಸಕ ಮುನಿರತ್ನಅವರನ್ನುಡಿಕೆ ಶಿವಕುಮಾರ್ ನಿರ್ಲಕ್ಷಿ÷್ಯಸಿದರು.ಡಿಕೆಶಿ ವೇದಿಕೆಯಲ್ಲಿ ಕುಳಿತಾಗಲೂ ಶಾಸಕ ಮುನಿರತ್ನ ಕೆಳಗೆ ಜನರ ಮಧ್ಯೆಕುರ್ಚಿಯಲ್ಲಿ ಕುಳಿತರು.ಆಗ ಡಿಸಿಎಂ `ಹೇಯ್, ಕಪುö್ಪಟೋಪಿ ಎಂಎಲ್ಎ ಬಾರಯ್ಯ’ ಎಂದುಕರೆದರು.ಆದರೆ, ಅದಕ್ಕೆಒಪ್ಪದ ಮುನಿರತ್ನ `ನಾನು ಜನರ ಮಧ್ಯದಲ್ಲೇಕೂರುತ್ತೇನೆ’ ಎಂದು ಹೇಳಿದರು.ಇದಾದ ನಂತರಇದ್ದಕ್ಕಿದ್ದAತೆಎದ್ದು ನಿಂತುಡಿಕೆ ಶಿವಕುಮಾರ್ ಅವರ ವಿರುದ್ಧ ಮುನಿರತ್ನ ಪ್ರತಿಭಟನೆ ನಡೆಸಿದರು.
`ಬೆಂಗಳೂರು ನಡಿಗೆ ಸರ್ಕಾರದಕಾರ್ಯಕ್ರಮವಾದರೂ ಶಾಸಕನಾದ ನನಗೆ ಆಹ್ವಾನ ನೀಡದೆಅಗೌರವತೋರಿದ್ದಾರೆ.ಈ ಕಾರ್ಯಕ್ರಮದಲ್ಲೆಲ್ಲೂ ಶಾಸಕನ ಒಂದು ಫೋಟೋಕೂಡ ಹಾಕಿಲ್ಲ, ನನಗೆ ಆಹ್ವಾನ ನೀಡಿಲ್ಲ’ ಎಂದು ಮುನಿರತ್ನಆಕ್ರೋಶ ವ್ಯಕ್ತಪಡಿಸಿದ್ದಾರೆ.
`ಸರ್ಕಾರದಕಾರ್ಯಕ್ರಮಕ್ಕೆ ಸಂಸದರು, ಶಾಸಕರಿಗೆಆಹ್ವಾನ ನೀಡದಿರುವುದುತಪುö್ಪ.ಸರ್ಕಾರದಕಾರ್ಯಕ್ರಮದಲ್ಲಿ ಸಂಸದ, ಶಾಸಕರ ಫೋಟೋಇಲ್ಲ. ಇದು ಸಾರ್ವಜನಿಕಕಾರ್ಯಕ್ರಮಅಲ್ಲ, ಕಾಂಗ್ರೆಸ್ಕಾರ್ಯಕ್ರಮ’ ಎಂದು ಮುನಿರತ್ನ ಆರೋಪಿಸಿದ್ದಾರೆ.ಈ ವೇಳೆ ಮಧ್ಯಪ್ರವೇಶಿಸಿದ ಮುನಿರತ್ನ ಬೆಂಬಲಿಗರು ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಬೆಂಬಲಿಗರ ನಡುವೆ ವಾಗ್ವಾದ ನಡೆಯಿತು.ವೇದಿಕೆಯಲ್ಲೇಗಲಾಟೆ ನಡೆಸಿದ ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರಿಂದಾಗಿ ಹೈಡ್ರಾಮಾ ಸೃಷ್ಟಿಯಾಯಿತು.ಅಲ್ಲಿ ಸೇರಿದ್ದಜನರು ಮೂಕಪ್ರೇಕ್ಷಕರಾಗಿ ನೋಡುತ್ತಾ ನಿಂತರು.
ರಾಜಕೀಯ ಮಾಡಲುಇಲ್ಲಿಗೆ ಬರಬೇಡಿಎಂದುಕಾAಗ್ರೆಸ್ಕಾರ್ಯಕರ್ತರು ಮುನಿರತ್ನ ಬೆಂಬಲಿಗರಿಗೆಎಚ್ಚರಿಕೆ ನೀಡಿದರು. ಕಾರ್ಯಕರ್ತರು ಪರಸ್ಪರ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು.`ರೇಪಿಸ್ಟ್ ಮುನಿರತ್ನ’ ಎಂದುಕಾAಗ್ರೆಸ್ಕಾರ್ಯಕರ್ತರುಘೋಷಣೆಕೂಗಿದರು.ಗಲಾಟೆ ಹೆಚ್ಚಾಗುತ್ತಿದ್ದಂತೆ ಮುನಿರತ್ನಅವರನ್ನು ಪೊಲೀಸರುಜೆಪಿ ಪಾರ್ಕ್ನಿಂದಕರೆದೊಯ್ದರು.