ಬೆಂಗಳೂರು: ಅನೈತಿಕ ಸಂಬAಧದ ಹಿನ್ನೆಲೆಯಲ್ಲಿ ಶ್ರೀನಿವಾಸ್ ಎಂಬಾತನು ನಿನ್ನೆ ರಾತ್ರಿ ರಂಜಿತ್(25) ಎಂಬ ಯುವಕನಿಗೆ ಕಬ್ಬಿಣದ ರಾಡ್ನಿಂದ ಹೊಡೆದು ಕೊಲೆ ಮಾಡಿರುತ್ತಾನೆ.
ಬನ್ನೇರುಘಟ್ಟ ಪೊಲೀಸ್ ಠಾಣಾ ವ್ಯಾಪ್ತಿಯ ಬಿಲ್ವಾರ ಲೇಔಟ್ ನಲ್ಲಿ ಶ್ರೀನಿವಾಸ್ ಹಲೋ ಬ್ರಿಕ್ಸ್ ಫ್ಯಾಕ್ಟರಿ ನಡೆಸುತ್ತಿದ್ದು ರಂಜಿತ್ ಮತ್ತು ಆರೋಪಿ ಶ್ರೀನಿವಾಸ್ ನಡುವೆ ಮಹಿಳೆಯ ವಿಷಯಕ್ಕೆ ಸಂಬAಧಪಟ್ಟ ಹಾಗೆ ಗಲಾಟೆಯಾಗುತ್ತಿತ್ತು. ಬನ್ನೇರುಘಟ್ಟ ಪೊಲೀಸರು ಕೊಲೆ ಮೊಕದ್ದಮೆ ದಾಖಲು ಮಾಡಿಕೊಂಡು ಶ್ರೀನಿವಾಸರನ್ನ ವಶಕ್ಕೆ ಪಡೆದು ತನಿಖೆ ಕೈಗೊಂಡಿರುತ್ತಾರೆ.



