ನವದೆಹಲಿ: ರಾಷ್ಟ್ರಪತಿಗಳಾದ ದ್ರೌಪದಿ ಮುರ್ಮುಜಿಯವರ ನಿಯೋಗದಲ್ಲಿ ಆಪ್ರಿಕಾ ದೇಶಗಳ ಪ್ರವಾಸದ ಕೊನೆಯ ಹಂತದಲ್ಲಿ ಬೊಟ್ಸಾವಾನ್ ದೇಶಕ್ಕೆ ದಿನಾಂಕ ೧೨.೧೧.೨೦೨೫ರಂದು ಕೇಂದ್ರ ರೇಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ವಿ.ಸೋಮಣ್ಣ ಭೇಟಿ ನೀಡಿದ್ದಾರೆ. ಗ್ಯಾಬೊರೋನ್ನ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಸಂದರ್ಬದಲ್ಲಿ ಬೊಟ್ಸಾವಾನದ ಅಧ್ಯಕ್ಷ ಎಚ್.ಇ.ದುಮಾ ಬೊಕೊ ಅವರು ಗೌರವಾನ್ವಿತ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರಿಗೆ ಗೌರವ ರಕ್ಷಕ ದಳದ ಗೌರವ ಹಾಗೂ ಸಾಂಪ್ರದಾಯಿಕ ಸ್ವಾಗತ ನೀಡಿದ ನೀಡಿದರು. ಇದು ಭಾರತ ಮತ್ತು ಬೊಟ್ಸಾವಾನ್ ದೇಶದ ಸದ್ಬಾವನೆ ಮತ್ತು ಪರಸ್ಪರ ಗೌರವದ ಸಾಕ್ಷಿಯಾಗಿತ್ತು ಎಂದು ಕೇಂದ್ರ ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ.
ಬೋಟ್ಸವಾನದ ಗ್ಯಾಬೊರೊನ್ನ ರಾಷ್ಟ್ರಪತಿ ಕಛೇರಿಯಲ್ಲಿ ಭಾರತದ ಗೌರವಾನ್ವಿತ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮುಜೀಯವರ ನಿಯೋಗದಲ್ಲಿ ಬೊಟ್ಸಾವಾನದ ರಾಷ್ಟ್ರಪತಿಗಳಾದ ಹೆಚ್.ಇ. ದುಮಾ ಬೊಕೊ ಅವರೊಂದಿಗಿನ ಮಾತುಕತೆಯ ಸಭೆಯಲ್ಲಿ ಕೇಂದ್ರ ಸಚಿವ ವಿ.ಸೋಮಣ್ಣ ಭಾಗವಹಿಸಿದ್ದರು. ನಿಯೋಗವು ಬೊಟ್ಸಾವಾನದ ರಾಷ್ಟ್ರೀಯ ಸಂಸತ್ತಿಗೆ ಭೇಟಿ ನೀಡಿದ್ದು, ಗೌರವಾನ್ವಿತ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮುಜಿಯವರು ಬೊಟ್ಸಾವಾನದ ಸಂಸತ್ ಸಭೆಯನ್ನು ಉದ್ದೇಶಿಸಿ ಮಾತಾನಾಡಿದರು, ಭಾರತದ ಗೌರವಾನ್ವಿತ ರಾಷ್ಟ್ರಪತಿಗಳು ನ್ಯಾಯಯುತ, ಸುಸ್ಥಿರ ಅಭಿವೃದ್ದಿ ಮತ್ತು ಶಕ್ತಿಯುತ ಭಾರತ ಮತ್ತು ಬೊಟ್ಸಾವಾನದ ಸಂಬಂದ ಹಾಗೂ ಗುರಿಗಳ ಬಗ್ಗೆ ನಡೆಸಿದ ಸಭೆಯಲ್ಲಿ ಕೇಂದ್ರ ಸಚಿವ ವಿ. ಸೋಮಣ್ಣ ಭಾಗಿಯಾಗಿದ್ದರು.
ವ್ಯಾಪಾರ, ಹೂಡಿಕೆ, ಕೃಷಿ, ನವೀಕರಣಿಯ ಇಂಧನ, ಆರೋಗ್ಯ, ಶಿಕ್ಷಣ,ಕೌಶಲ್ಯ ಅಭಿವೃದ್ಧಿ, ರಕ್ಷಣೆ ಮತ್ತು ಡಿಜಿಟಲ್ ತಂತ್ರಜ್ಷಾನದಂತಹ ಪ್ರಮಖ ಕ್ಷೇತ್ರಗಳಲ್ಲಿ ಎರಡೂ ದೇಶಗಳ ಪರಸ್ಪರ ಸಹಕಾರ ಬಲಪಡಿಸುವಲ್ಲಿ ಸಹಕಾರಿಯಾಗುವಂತಹ ಭಾರತದ ಗೌರವಾನ್ವಿತ ರಾಷ್ಟ್ರಪತಿಗಳೊಂದಿಗಿನ ನಿಯೋಗದಲ್ಲಿ ಬೊಟ್ಸವಾನ್ ದೇಶದ ಪ್ರವಾಸದಲ್ಲಿ ಕೇಂದ್ರ ರೇಲ್ವೆ ಮತ್ತು ಜಲಶಕ್ತಿ ರಾಜ್ಯ ಖಾತೆಯ ಸಚಿವ ವಿ. ಸೋಮಣ್ಣ ಭಾಗಿಯಾಗಿದ್ದಾರೆ.ದಿನಾಂಕ ೧೪.೧೧.೨೦೨೫ರಂದು ಬೆಳಿಗ್ಗೆ ವಿದೇಶ ಪ್ರವಾಸದಿಂದ ಕೇಂದ್ರ ಸಚಿವ ವಿ.ಸೋಮಣ್ಣ ದೆಹಲಿಗೆ ತಲುಪಲಿದ್ದಾರೆ.



