ಬೆಂಗಳೂರು: ಶಾಲಾ ಮಕ್ಕಳಿಗೆ ಬಿಸಿಯೂಟದ ಮೂಲಕ ಹಸಿವು ನೀಗಿಸುವ ದಿಟ್ಟ ಹೆಜ್ಜೆ ಇಟ್ಟಿರುವ ಅಕ್ಷಯ ಪಾತ್ರ ಫೌಂಡೇಶನ್, ಭಾರತ ಸರ್ಕಾರದ ಪಿಎಂ ಪೋಷಣ್ ಅಭಿಯಾನ್ನ ಕಾರ್ಯಾಚರಣಾ ಪಾಲುದಾರರಾಗಿ, ರಾಷ್ಟ್ರದಾದ್ಯಂತ 4 ಶತಕೋಟಿ ಮಕ್ಕಳಿಗೆ ಪೌಷ್ಟಿಕಾಂಶದ ಊಟವನ್ನು ಈತನಕ ನೀಡಿದೆ.
ಐದು ಶಾಲೆಗಳಲ್ಲಿ 1,500 ಮಕ್ಕಳಿಗೆ ಊಟ ಬಡಿಸುವಿಕೆಯೊಂದಿಗೆ 2000 ರಲ್ಲಿ ಸ್ಥಾಪನೆಯಾದ ಅಕ್ಷಯ ಪಾತ್ರವು ಈಗ 16 ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳಲ್ಲಿ 24,000+ ಶಾಲೆಗಳಲ್ಲಿ ಪ್ರತಿದಿನ 2.2 ಮಿಲಿಯನ್ ಮಕ್ಕಳಿಗೆ ಊಟ ಪೂರೈಸುತ್ತಿದೆ.
ಅಕ್ಷಯ ಪಾತ್ರ ಫೌಂಡೇಶನ್ನ ಉಪಾಧ್ಯಕ್ಷರಾದ ಶ್ರೀ ಚಂಚಲಪತಿ ದಾಸ್ ಮಾತನಾಡಿ, ?ಈ ಮಹತ್ವದ ಮೈಲಿಗಲ್ಲನ್ನು ತಲುಪಿರುವುದಕ್ಕೆ ಹೆಮ್ಮೆಯಾಗುತ್ತಿದೆ ಮತ್ತು ಭಾರತದಲ್ಲಿ ಯಾವುದೇ ಮಗು ಹಸಿವಿನಿಂದ ಶಿಕ್ಷಣದಿಂದ ವಂಚಿತನಾಗಬಾರದು ಎಂಬ ಧ್ಯೇಯದೊಂದಿಗೆ ಕೆಲಸ ಮಾಡುತ್ತಿದ್ದೇವೆ.
ನಮ್ಮ ಪ್ರಯಾಣಕ್ಕೆ ಪಾಲುದಾರರು, ದಾನಿಗಳು ಮತ್ತು ಸ್ವಯಂಸೇವಕರ ಬೆಂಬಲವನ್ನು ಪಡೆಯುವುದನ್ನು ಮುಂದುವರಿಸುತ್ತೇವೆ. ಒಟ್ಟಾಗಿ, ನಾವು ದೇಶಾದ್ಯಂತ ಲಕ್ಷಾಂತರ ಮಕ್ಕಳ ಜೀವನದಲ್ಲಿ ಶಾಶ್ವತವಾದ ಬದಲಾವಣೆಯನ್ನು ಮಾಡುತ್ತಿದ್ದೇವೆ? ಎಂದರು.
2012 ರ ವೇಳೆಗೆ 1 ಶತಕೋಟಿ ಊಟವನ್ನು ಪೂರೈಸಿತ್ತು. 2016 ರ ವೇಳೆಗೆ 2 ಶತಕೋಟಿ, ಮತ್ತು 2019 ರ ಹೊತ್ತಿಗೆ 3 ಶತಕೋಟಿ ಊಟ ಪೂರೈಕೆ ಪ್ರತಿಷ್ಠಾನದ ಮೈಲುಗಲ್ಲಾಗಿತ್ತು. ರಾಷ್ಟ್ರಪತಿ ಶ್ರೀ ಪ್ರಣಬ್ ಮುಖರ್ಜಿ ಮತ್ತು ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಇದನ್ನು ಶ್ಲಾಘಿಸಿದ್ದರು.
ವಿಶೇಷವಾಗಿ ಆಸಿಯಾನ್-ಇಂಡಿಯಾ ಮಿಲೆಟ್ ಫೆಸ್ಟಿವಲ್ 2023 ರಲ್ಲಿ ಸೂಚಿಸಿದ ರಾಗಿ ಊಟವನ್ನು ಈ ಯೋಜನೆಯಲ್ಲಿ ಸೇರಿಸಿರುವುದು ಸುಸ್ಥಿರ ಪೋಷಣೆ ಮತ್ತು ಆಹಾರ ಭದ್ರತೆಗೆ ಫೌಂಡೇಶನ್ನ ಬದ್ಧತೆಯನ್ನು ಸೂಚಿಸುತ್ತದೆ.ಫೌಂಡೇಶನ್ನ ಬೆಳವಣಿಗೆಯ ಕುರಿತು ಮಾತನಾಡಿದ ಅಕ್ಷಯ ಪಾತ್ರ ಫೌಂಡೇಶನ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಧರ್ ವೆಂಕರ್, ?ನಮ್ಮ ಬೆಳವಣಿಗೆಯಲ್ಲಿ ನಾವೀನ್ಯತೆಯು ಅವಿಭಾಜ್ಯ ಪಾತ್ರವನ್ನು ವಹಿಸಿದೆ.
ಇಂದು, ನಾವು 17 ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳಲ್ಲಿ 9000 ಉದ್ಯೋಗಿಗಳು ಮತ್ತು 72 ಅಡಿಗೆಮನೆಗಳನ್ನು ಹೊಂದಿದ್ದೇವೆ. ನಾವು ‘ಅಂತರರಾಷ್ಟ್ರೀಯ ಮಿಲ್ಲೆಟ್ ವರ್ಷ’ ದೊಂದಿಗೆ ಅನನ್ಯ ಪಾಕವಿಧಾನಗಳನ್ನು ಹೊಂದಿದ್ದೇವೆ. ?ಊಟಕ್ಕಾಗಿ ಸಂಗೀತ? ಎಂಬ ವಿನೂತನ ಯೋಜನೆ ಘೋಷಿಸಲು ಸಂತೋಷಪಡುತ್ತೇವೆ ಮತ್ತು ನಮ್ಮ ದಾನಿಗಳು, ಬೆಂಬಲಿಗರು ಮತ್ತು ಹಿತೈಷಿಗಳಿಗೆ ಮೆಚ್ಚುಗೆ ಸೂಚಿಸಲು ಪ್ರವೀಣ್ ಗೋಡ್ಖಿಂಡಿ ಮತ್ತು ವಿಜಯ್ ಪ್ರಕಾಶ್ ಅವರಂತಹ ಹೆಸರಾಂತ ಕಲಾವಿದರನ್ನು ನಮ್ಮ ಪಯಣದ ಭಾಗವಾಗುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ಅಕ್ಷಯ ಪಾತ್ರ ಫೌಂಡೇಶನ್ ಮಾರ್ಚ್.1, 2024 ರಂದು ಊಟಕ್ಕಾಗಿ ಸಂಗೀತ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ. ಹೆಸರಾಂತ ಕಲಾವಿದರಾದ ವಿಜಯ್ ಪ್ರಕಾಶ್ ಮತ್ತು ಪ್ರವೀಣ್ ಗೋಡ್ಖಿಂಡಿ ಭಾಗಿಯಾಗಲಿದ್ದಾರೆ. ಕಾರ್ಪೋರೇಟ್ ಮತ್ತು ವೈಯಕ್ತಿಕ ದಾನಿಗಳ ಬೆಂಬಲದೊಂದಿಗೆ, ತಾಜ್ ವಿವಾಂತಾ ಯಶವಂತಪುರ ಮತ್ತು ರೇಡಿಯೋ ಸಿಟಿ 91.1ಈಒ ಸಹಭಾಗಿತ್ವದಲ್ಲಿ ಯಶವಂತಪುರದ ತಾಜ್ ವಿವಾಂತದಲ್ಲಿ ಸಂಜೆ 5ರಿಂದ ಕಾರ್ಯಕ್ರಮ ನಡೆಯಲಿದೆ ಎಂದರು.
ಪೌಷ್ಠಿಕಾಂಶ ಮತ್ತು ಸುರಕ್ಷತೆಯಲ್ಲಿ ಉತ್ಕೃಷ್ಟತೆಗಾಗಿ ಫೌಂಡೇಶನ್ಗೆ ಅII ಆಹಾರ ಸುರಕ್ಷತಾ ಪ್ರಶಸ್ತಿ 2023 ಸೇರಿದಂತೆ ಅನೇಕ ಗೌರವ, ಪ್ರಶಸ್ತಿಗಳು ಲಭಿಸಿದೆ. ಊಟ ಒದಗಿಸುವ ಅಡುಗೆ ಕೋಣೆ ವಿಸ್ತರಣೆಯಂತಹ ದಿಟ್ಟ ಯೋಜನೆಗಳು ಪ್ರತಿಷ್ಠಾನದ ಎದುರಿಗಿದೆ.