This is the title of the web page
This is the title of the web page

ಬಿಬಿಎಂಪಿ, ಬೆಂಗಳೂರು ಜಲಮಂಡಳಿ ನಿರ್ಲಕ್ಷ್ಯಕ್ಕೆ ಸಂಗೀತ ಮಾಂತ್ರಿಕ ವಿವೇಕ್ ಮೌರ್ಯ ವಿಧಿವಶ

ಬೆಂಗಳೂರು: 29 ವಯಸ್ಸಿನ ವಿವೇಕ್ ಮೌರ್ಯ ಭೂಮ್ತಾಯಿ ಬಳಗದಲ್ಲಿ ಕೀಬೋರ್ಡ್ ಕಲಾವಿದರಾಗಿ ಪ್ರಸಿದ್ಧಿ ಪಡೆದಿರುವ ಇವರು ಪಕ್ಕ ಬಾಬಾ ಸಾಹೇಬ್ ಡಾ.ಬಿ ಆರ್ ಅಂಬೇಡ್ಕರ್ ರವರ ಅನುಯಾಯಿ. ಅಸಾಮಾನ್ಯ ಕಲಾ ಪ್ರತಿಭೆ, ಸರಸ್ವತಿಯ ವರಪುತ್ರ. ವಿಜಯನಗರ ವಿಧಾನಸಭಾ ಕ್ಷೇತ್ರದ ಕಸ್ತೂರಬಾ ಕಾಲೋನಿ, ಈರಣ್ಣಗುಟ್ಟೆಯಲ್ಲಿ ಹುಟ್ಟಿ ಚಿಕ್ಕ ವಯಸ್ಸಿನಲ್ಲೇ ತನ್ನ ತಂದೆ ಧರ್ಮಣ್ಣ ನವರನ್ನ ಕಳೆದುಕೊಂಡು ತನ್ನ ತಾಯಿ ತಮ್ಮನ ಜೊತೆ ಅಜಾತ ಶತ್ರುವಾಗಿ ಬೆಳೆದು,

ತನ್ನ ವಿದ್ಯಾ ಬುದ್ದಿ ಮತ್ತು ಕಲೆಯಲ್ಲಿ ತನ್ನದೆ ಆದ ಕಲಾ ಚಥುರನಾಗಿ ಗಿರಿನಗರದಿಂದ ಜಪಾನ್, ದುಬೈ ಮತ್ತಿತರ ವಿದೇಶಗಳಲ್ಲಿಯು ತನ್ನ ಕಲೆಯನ್ನು ಪಸರಿಸಿ, ತನ್ನ ತಾಯಿ ತಮ್ಮ ಮತ್ತು ತುಂಬು ಗರ್ಭಿಣಿಯಾದ ತನ್ನ ಮಡದಿಯನ್ನ ಅಗಲಿದ್ದಾರೆ, ಇವರು ಪ್ರಸ್ತುತ ಬೆಸ್ಕಾಂ ನಲ್ಲಿ ಗುತ್ತಿಗೆ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದರು.

ನಿನ್ನೆ ಮಧ್ಯಾಹ್ನ ಫೀಲ್ಡ್‍ನಲ್ಲಿ ಕೆಲಸ ಮುಗಿಸಿ ಕೋರಮಂಗಲದ ಕಛೇರಿಗೆ ತೆರಳುವ ಮಾರ್ಗದಲ್ಲಿ ಬಿಬಿಎಂಪಿ ಮತ್ತು ಬೆಂಗಳೂರು ಜಲ ಮಂಡಳಿ ಅವೈಜ್ಞಾನಿಕ ರೀತಿಯಲ್ಲಿ ನಿರ್ಮಿಸಿರುವ ಚೇಂಬರ್ ನಿಂದ ವಿದಿಯಾಟಕ್ಕೆ ಬಲಿಯಾಗಿ ಪಣತ್ತೂರು ಬಳಿ ರಸ್ತೆ ಅಪಘಾತದಲ್ಲಿ ವಿಧಿವಶರಾಗಿದ್ದಾರೆ. ನಮ್ಮನ್ನೆಲ್ಲ ಅಗಲಿದ ಭರವಸೆಯ ಅಧ್ಬುತ ಕಲಾ ಪ್ರತಿಭೆಗೆ ಭಾವಪೂರ್ಣ ಶ್ರದ್ಧಾಂಜ