ಮೈಸೂರು: ಬೆಂಗಳೂರು-ಮೈಸೂರು ಹೆದ್ದಾರಿ ವಾಹನ ಸಂಚಾರಕ್ಕೆ ಆರಂಭಗೊಂಡಾಗಿನಿಂದ ಒಂದಲ್ಲ ಒಂದು ಕಾರಣಕ್ಕೆ ವಿವಿಧದ ಕೇಂದ್ರವಾಗಿ ಪರಿಣಮಿಸುತ್ತಿದೆ.
ಪ್ರಧಾನಿ ಮೋದಿಯವರು ರಸ್ತೆಯನ್ನು ಲೋಕಾರ್ಪಣೆ ಮಾಡಿದ ದಿನದಿಂದ ಒಂದಲ್ಲ ಒಂದುಕಾರಣಕ್ಕೆ ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗುತ್ತಿದೆ.
ವಾಹನ ಸಂಚಾರ ಆರಂಭ ಆದಾಗಿನಿಂದ ಟೋಲ್ ವಿಚಾರವಾಗಿ ವಾಹನ ಸವಾರರು ಹಾಗೂ ಟೋಲ್ ಸಿಬ್ಬಂದಿ ನಡುವೆ
ವಾಗ್ವಾದ, ಕೈಕೈ ಮಿಲಾಯಿಸುವ ಘಟನೆಗಳು ನಡೆಯುತ್ತಿವೆ.
ಇದೀಗ ಏಕಾಏಕಿ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟ ಬೆನ್ನಲ್ಲೆ ವಾಹನಗಳಟೋಲ್ಕ್ ಶುಲ್ ಹೆಚ್ಚಳ ಮಾಡಲಾಗಿದೆ.
ಟೋಲ್ ಮೊತ್ತ ಹೆಚ್ಚಿಸಲು ಹೆದ್ದಾರಿ ಪ್ರಾಧಿಕಾರ ನಿರ್ಧರಿಸಿದೆ. ಹೆಚ್ಚಳವಾಗುವ ಟೋಲ್ ದರವು ನಾಳೆಯಿಂದ ಜಾರಿ ಮಾಡುತ್ತಿದ್ದು, ಹಾಲಿ ಇರುವ ದರದ ಜತೆಗೆ ಶೇ. 22ರಷ್ಟು ದರ ಹೆಚ್ಚಳ ಮಾಡಲಾಗಿದೆ.
ಹೆಚ್ಚಳವಾಗಿರುವ ದರದ ವಿವರ
ಕಾರು, ವ್ಯಾನ್, ಜೀಪ್: 165 ರೂ., ದ್ವಿಮುಖ ಸಂಚಾರ 250 ರೂ. ಮತ್ತು ಒಂದು ಬಾರಿ 30 ರೂ., ಮತ್ತೊಂದು ಬಾರಿ 45 ರೂ. ಹೆಚ್ಚಳ ಮಾಡಲಾಗಿದೆ.
ಟ್ರಕ್, ಬಸ್, ಟ್ಯಾಕ್ಸಿ: 565 ರೂ., ದ್ವಿಮುಖ ಸಂಚಾರಕ್ಕೆ 850 ರೂ. ಹಾಗೆಯೇ ಒಂದು ಬಾರಿ 165 ರೂ., ಮತ್ತೊಂದು ಬಾರಿ 160 ರೂ. ಹೆಚ್ಚಳ ಮಾಡಲಾಗಿದೆ.
ಲಘು ವಾಹನಗಳು, ಮಿನಿ ಬಸ್: 270 ರೂ., ದ್ವಿಮುಖ ಸಂಚಾರಕ್ಕೆ 405 ರೂ. ಆಗಿದೆ. ಅಲ್ಲದೇ ಒಂದು ಬಾರಿ 50 ರೂ. ಎರಡನೇ ಬಾರಿ 75 ರೂ. ಹೆಚ್ಚಳ ಮಾಡಲಾಗಿದೆ.
ತ್ರಿ ಆಕ್ಸೆಲ್ ವಾಣಿಜ್ಯ ವಾಹನಗಳು: 615 ರೂ., ದ್ವಿಮುಖ ಸಂಚಾರಕ್ಕೆ 925 ರೂ. ಆಗಿದೆ. ಮೊದಲ ಬಾರಿ 115 ರೂ. ಹೆಚ್ಚಳ ಮಾಡಿದ್ದು, ಎರಡನೇ ಬಾರಿ 225 ರೂ. ಹೆಚ್ಚಳ ಮಾಡಲಾಗಿದೆ.
ಭಾರಿ ವಾಹನಗಳು: 885 ರೂ., ದ್ವಿಮುಖ ಸಂಚಾರಕ್ಕೆ 1,330 ರೂ. ಆಗಿದೆ. ಹಾಗೆಯೇ ಮೊದಲ ಬಾರಿ 165 ರೂ. ಎರಡನೇ ಬಾರಿ 250 ರೂ. ಹೆಚ್ಚಳ ಮಾಡಲಾಗಿದೆ.
7 ಅಥವಾ ಎಕ್ಸೆಲ್ ವಾಹನಗಳಿಗೆ 1,080 ರೂ., ದ್ವಿಮುಖ ಸಂಚಾರಕ್ಕೆ 1,620 ರೂ. ಆಗಿದೆ. ಮೊದಲ ಬಾರಿ 200 ರೂ. ಎರಡನೇ ಬಾರಿ 305 ರೂ. ಹೆಚ್ಚಳ ಮಾಡಲಾಗಿದೆ.
Leave a Review