ಮ್ಯಾಡ್ರಿಡ್: ರಫೆಲ್ ನಡಾಲ್ ಅವರ ತವರಿನ `ಮ್ಯಾಡ್ರಿಡ್ ಓಪನ್’ ಆಟ ಸೋಲಿನೊಂದಿಗೆ ಮುಗಿದಿದೆ. ಕೊನೆಯ ಸಲ ಈ ಪಂದ್ಯಾವಳಿಯಲ್ಲಿ ಆಡಲಿಳಿದ ಸ್ಪೇನಿಗನ ಆಟ 4ನೇ ಸುತ್ತಿಗೇ ಮುಗಿದಿದೆ.
ಮ್ಯಾಡ್ರಿಡ್ನಲ್ಲಿ 5 ಸಲ ಚಾಂಪಿಯನ್ ಆಗಿ ಮೂಡಿಬಂದಿದ್ದ ರಫೆಲ್ ನಡಾಲ್ ಅವರನ್ನು ಜೆಕ್ ಆಟಗಾರ ಜಿರಿ ಲೆಹೆಕ 7-5, 6-4 ಅಂತರದಿಂದ ಮಣಿಸಿದರು.
ಅನಂತರದ ಭಾವುಕರಾಗಿ ಮಾತನಾಡಿದ ನಡಾಲ್, `ಇದೊಂದು ಕಠಿನ ದಿನ.
ಆದರೆ ಅನಿವಾರ್ಯ. ನನ್ನ ದೇಹ ಕಳೆದ ಕೆಲವು ದಿನಗಳಿಂದ ಋಣಾತ್ಮಕ ಸಂದೇಶವನ್ನು ರವಾನಿಸುತ್ತಲೇ ಇದೆ. ತವರಿನ ಕೋರ್ಟ್ಗೆ ಗುಡ್ಬೈ ಹೇಳಲು ಸೂಚಿಸುತ್ತಿದೆ. ನನ್ನ ಪಾಲಿನ ಅತ್ಯಂತ ಭಾವುಕ ಕ್ಷಣ ಇದಾಗಿದೆ. ನನ್ನ ಗ್ರ್ಯಾನ್ಸ್ಲಾಮ್ ಗೆಲುವುಗಳಲ್ಲಿ ಮಾಡ್ರಿಡ್ ಪಾತ್ರ ಮಹತ್ವದ್ದಾಗಿದೆ. ಇಲ್ಲಿನ ನೆನಪುಗಳು ನನ್ನೊಂದಿಗೆ ಸದಾ ಉಳಿಯಲಿವೆ ಎಂದರು.