ಬ್ರಿಸ್ಬೇನ್: ಟೆನಿಸ್ ಸ್ಟಾರ್, 22 ಗ್ರ್ಯಾನ್ಸ್ಲಾಮ್ ಪ್ರಶಸ್ತಿಗಳ ವಿಜೇತ ರಫೆಲ್ ನಡಾಲ್ ಬರೋಬ್ಬರಿ ಒಂದು ವರ್ಷದ ಬಳಿಕ ಸ್ಪರ್ಧಾತ್ಮಕ ಟೆನಿಸ್ ಅಂಕಣಕ್ಕೆ ಇಳಿದಿದ್ದಾರೆ. ವರ್ಷಾರಂಭದ ಆಸ್ಟ್ರೇಲಿಯನ್ ಓಪನ್ ಗ್ರ್ಯಾನ್ಸ್ಲಾಮ್ನಲ್ಲಿ ಆಡುವ ಗುರಿ ಇರಿಸಿಕೊಂಡಿರುವ ಅವರು `ಬ್ರಿಸ್ಬೇನ್ ಇಂಟರ್ನ್ಶಾಶನಲ್’ ಡಬಲ್ಸ್ನಲ್ಲಿ ಮಾರ್ಕ್ ಲೋಪೆಜ್ ಅವರೊಂದಿಗೆ ಆಡಲಿಳಿದರು.
ರವಿವಾರದ ಸ್ಪರ್ಧೆಯಲ್ಲಿ ನಡಾಲ್-ಲೋಪೆಜ್ ಆಸ್ಟ್ರೇಲಿ ಯದ ಮ್ಯಾಕ್ಸ್ ಪರ್ಸೆಲ್-ಜೋರ್ಡನ್ ಥಾಂಪ್ಸನ್ ವಿರುದ್ಧ 4-6, 4-6 ನೇರ ಸೆಟ್ಗಳ ಸೋಲಿಗೆ ತುತ್ತಾದರು. ಥೀಮ್ ವಿರುದ್ಧ ಸಿಂಗಲ್ಸ್: 37 ವರ್ಷದ ರಫೆಲ್ `ಪ್ಯಾಟ್ ರಾಫ್ಟರ್ ಅರೇನಾ’ಕ್ಕೆ ಆಗಮಿಸುವಾಗ ಅಭಿಮಾನಿಗಳು ಸ್ಪೇನ್ ಧ್ವಜ ಹಿಡಿದು ಸಂಭ್ರಮದ ಸ್ವಾಗತ ಕೋರಿದರು.
ನಡಾಲ್ ಮಂಗಳವಾರದ ಸಿಂಗಲ್ಸ್ ನಲ್ಲಿ ಡೊಮಿನಿಕ್ ಥೀಮ್ ವಿರುದ್ಧ ಮೊದಲ ಸುತ್ತಿನ ಪಂದ್ಯ ಆಡಲಿದ್ದಾರೆ. ಇವರೆದುರು ನಡಾಲ್ 9-6 ಗೆಲುವಿನ ದಾಖಲೆ ಹೊಂದಿದ್ದಾರೆ. ರಫೆಲ್ ನಡಾಲ್ ಕಳೆದ ವರ್ಷದ ಆಸ್ಟ್ರೇಲಿಯನ್ ಓಪನ್ ಪಂದ್ಯಾವಳಿಯ ವೇಳೆ ಸೊಂಟದ ನೋವಿಗೆ ಸಿಲುಕಿದ್ದರು. ಪರಿಣಾಮ, ಮೆಲ್ಬರ್ನ್ ಪಾರ್ಕ್ನಲ್ಲಿ ದ್ವಿತೀಯ ಸುತ್ತಿನಲ್ಲೇ ಎಡವಿದ್ದರು.