ಕನಕಪುರ: ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಅಧೀನದಲ್ಲಿ ಬರುವ ರಾಮನಗರ ಜಿಲ್ಲೆಯ ಕನಕಪುರ ನಗರದಲ್ಲಿರುವ ಶ್ರೀ ನಿರ್ವಾಣ ಸ್ವಾಮಿ ನರ್ಸಿಂಗ್ ಕಾಲೇಜ್ ಇಲ್ಲಿ ಪ್ರವೇಶಾತಿ ಹಾಗೂ ಪರೀಕ್ಷಾ ವಿಷಯಗಳಲ್ಲಿ ಭಾರಿ ಅವ್ಯವಹಾರ ಹಾಗೂ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಶ್ರೀ ರಾಮ ಸೇನೆಯ ಜಿಲ್ಲಾಧ್ಯಕ್ಷ ನಾಗಾರ್ಜುನ್ ಆರೋಪಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಶ್ರೀ ನಿರ್ವಾಣ ಸ್ವಾಮಿ ಕಾಲೇಜ್ ಆಫ್ ನರ್ಸಿಂಗ್ ಈ ಸಂಸ್ಥೆಗೆ ಪ್ರವೇಶ ಪಡೆಯಲು ಶಾಲೆಯ ಕೆಲ ಪ್ರೊಫೆಸರ್ ಗಳು ಸೇರಿದಂತೆ ಹಲವರು ಮಧ್ಯವರ್ತಿಗಳಿದ್ದು,ಈ ಮಧ್ಯವರ್ತಿಗಳು ಉತ್ತರ ಕರ್ನಾಟಕ ಭಾಗ ಅಥವಾ ಮಹಾರಾಷ್ಟ್ರ ಭಾಗಗಳಿಂದ ವಿದ್ಯಾರ್ಥಿಗಳಿಂದ ಲಕ್ಷಾಂತರ ಹಣ ಪಡೆದು ಈ ಸಂಸ್ಥೆಯಲ್ಲಿ ದಾಖಲಾತಿ ಮಾಡಿಸಿ ಕೇವಲ ಮೂವತ್ತು ಸಾವಿರ ರೂಪಾಯಿ ಶುಲ್ಕವನ್ನು ಸಂಸ್ಥೆಗೆ ಸಂದಾಯ ಮಾಡುತ್ತಿರುವುದರಿಂದ ವರ್ಷಕ್ಕೆ ಕೋಟ್ಯಾಂತರ ರೂಗಳ ಅವ್ಯವಹಾರ ನಡೆಯುತ್ತಿದೆ ಎಂದು ಆರೋಪಿಸಿದರು.
ಪ್ರವೇಶಾತಿ ಪಡೆದ ವಿದ್ಯಾರ್ಥಿಗಳಲ್ಲಿ ಯಾರು ಕಾಲೇಜಿಗೆ ಬರುವುದಿಲ್ಲವೂ ಅವರಿಂದ ಮತ್ತೆ ಹಣವನ್ನು ಪಡೆದು ಕಾಲೇಜಿಗೆ ಬರುವ ವಿದ್ಯಾರ್ಥಿಗಳಿಗೆ ಅಸೆಸ್ಮೆಂಟ್ ಮಾರ್ಕ್ಸ್, ಅಟೆಂಡೆನ್ಸ್ ನೀವು ಪರೀಕ್ಷೆಯಲ್ಲಿ ಅಕ್ರಮ ಮಾಡಿದ್ದೀರಿ ಎಂದು ಬಿಂಬಿಸುತ್ತೇವೆ ಎಂದೆಲ್ಲ ಹೆದರಿಸಿ ಅವರ ಭಾವ ಚಿತ್ರಗಳನ್ನು ಕಾಲೇಜಿಗೆ ಬಾರದ ವಿದ್ಯಾರ್ಥಿಗಳಿಂದ ಹಣ ಪಡೆದು ಅವರ ಪರೀಕ್ಷಾ ಪ್ರವೇಶ ಪತ್ರದಲ್ಲಿ ಅಂಟಿಸಿ ಈ ಅಮಾಯಕ ವಿದ್ಯಾರ್ಥಿಗಳಿಂದ ಅವರ ಪರೀಕ್ಷೆಯನ್ನು ಬಳಸುತ್ತಿದ್ದಾರೆ ಎಂದರು.
ಈ ರೀತಿ ಅಕ್ರಮವಾಗಿ ಸರ್ಟಿಫಿಕೇಟ್ಗಳನ್ನು ಸಂಪಾದಿಸಿದ ವಿದ್ಯಾರ್ಥಿಗಳು ಮುಂದೆ ವೈದ್ಯಕೀಯ ಕ್ಷೇತ್ರದಲ್ಲಿ ಕೆಲಸ ಮಾಡುವುದರಿಂದ ಸಂಸ್ಥೆ ಹಣ ಮಾಡುವ ದುರುದ್ದೇಶದಿಂದ ಸಮಾಜವನ್ನು ಸಾವಿನಡಗೆ ತಳ್ಳುವಂತಾಗುತ್ತಿದೆ ಕಾರಣ ಇವರುಗಳು ಮುಂದೆ ಪ್ರತಿಷ್ಠಿತ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಕೆಲಸ ನಿರ್ವಹಿಸುತ್ತಿರುತ್ತಾರೆ,
ಇಂದಿನ ವ್ಯವಸ್ಥೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರುಗಳ ಕೊರತೆಯಿಂದಾಗಿ ಅಲ್ಲಿನ ನರ್ಸ್ಗಳೇ ಆಸ್ಪತ್ರೆ ನಡೆಸುತ್ತಿರುವುದರಿಂದ ರೋಗಿಗಳ ಆರೋಗ್ಯಕ್ಕೆ ಹಾಗೂ ಪ್ರಾಣಕ್ಕೆ ಕುತ್ತು ತರಬಹುದು.ಈ ಸಂಬಂಧ ಕೆಲ ವಿದ್ಯಾರ್ಥಿಗಳೇ ರಾಮನಗರ ಜಿಲ್ಲಾ ಶ್ರೀರಾಮ ಸೇನಾ ಸಂಪರ್ಕಿಸಿ ಅಲ್ಲಿ ನಡೆಯುತ್ತಿರುವ ಬೃಹತ್ ಭ್ರಷ್ಟಾಚಾರವನ್ನು ವಿವರಿಸಿದ್ದಾರೆ.
ಇದನ್ನು ತಿಳಿದ ನಂತರ 2023 ಆಗಸ್ಟ್ ತಿಂಗಳಿನಲ್ಲಿ ಕಾಲೇಜಿನ ಪ್ರಾಂಶುಪಾಲರನ್ನು ಭೇಟಿ ಮಾಡಿ ಈ ಸಂಬಂಧ ಸಂಪೂರ್ಣ ವಿಷಯ ತಿಳಿಸಲಾಯಿತು. ವಿಷಯ ತಿಳಿದ ಪ್ರಾಂಶುಪಾಲರು ಯಾಕೆ ಸಂಬಂಧಿಸಿದ ದಾಖಲಾತಿಗಳು ಕೊಡಿ ಇದನ್ನು ಸಂಸ್ಥೆಯ ಹಿರಿಯರ ಗಮನಕ್ಕೆ ತಂದು ಪರಿಶೀಲಿಸುತ್ತೇವೆ ಎಂದು ತಿಳಿಸಿದರು.
ತದನಂತರ ಒಂದು ವಾರ ಬಿಟ್ಟು ಕರೆ ಮಾಡಿ ಈ ರೀತಿ ಅಕ್ರಮಗಳು ನಡೆದಿರುವುದು ಸತ್ಯ ಎನಿಸುತ್ತಿದೆ ಹಾಗಾಗಿ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು ಕೆಲ ದಿನದವರೆಗೂ ಕಾದು ನೋಡಿ ಯಾವುದೇ ಕ್ರಮ ಕೈಗೊಳ್ಳದ ಕಾರಣ,ರಾಜೀವ್ ಗಾಂಧಿ ಆರೋಗ್ಯ ವಿಶ್ವ ವಿದ್ಯಾನಿಲಯದ ಉಪಕುಲಪತಿಗಳನ್ನು ಭೇಟಿ ಮಾಡಿ ಸಂಸ್ಥೆಯ ವಿರುದ್ಧ ದಾಖಲಾತಿಗಳ ಸಮೇತ ದೂರು ದಾಖಲಿಸಲಾಯಿತು.
ಈ ವಿಷಯವನ್ನು ಪರಿಶೀಲಿಸಿ ವರದಿ ನೀಡಲು ಮೌಲ್ಯಮಾಪನ ವಿಭಾಗಕ್ಕೆ ನಮ್ಮ ದೂರನ್ನು ವರ್ಗಾಯಿಸಿದ್ದರು ಅಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಶಿಲ್ಪಾ ಪಾಟೀಲ್ ಎಂಬ ಅಧಿಕಾರಿಗಳನ್ನು ಈಗ ಉತ್ತರ ಕರ್ನಾಟಕದ ಯಾವುದೋ ಭಾಗಕ್ಕೆ ವರ್ಗಾಯಿಸಿ ತನಿಖೆಯನ್ನು ಸಂಪೂರ್ಣವಾಗಿ ಹಳ್ಳ ಹಿಡಿಯುವಂತೆ ಮಾಡಿದ್ದಾರೆ . ಎಲ್ಲ ವ್ಯವಸ್ಥೆಗಳನ್ನು ನೋಡಿದರೆ ನ್ಯಾಯ ದೊರೆಯುವ ಯಾವುದೇ ಭರವಸೆ ಇಲ್ಲದಂತಾಗುತ್ತದೆ.
ಆದ್ದರಿಂದ ಉಪಕುಲಪತಿಗಳು ಶ್ರೀ ನಿರ್ವಾಣ ಸ್ವಾಮಿ ಕಾಲೇಜ್ ಆಫ್ ನರ್ಸಿಂಗ್ ಸಂಸ್ಥೆಯ ಮಾನ್ಯತೆಯನ್ನು ರದ್ದು ಮಾಡಿ ತಪ್ಪಿತಸ್ಥರ ಕೂಡಲೇ ಪ್ರಕರಣ ದಾಖಲಿಸಿ ಈ ಸಂಸ್ಥೆಯ ಉತ್ತರ ಪತ್ರಿಕೆಗಳನ್ನು ಮರುಪರಿಶೀಲಿಸಿ ಕ್ರಮ ಕೈಗೊಳ್ಳಲು ಶ್ರೀರಾಮ ಸೇನೆ ಆಗ್ರಹಿಸುತ್ತದೆ.ಶ್ರೀ ರಾಮ ಸೇನೆಯ ಜಿಲ್ಲಾ ಸಹ ಕಾರ್ಯದರ್ಶಿ ಉದಾರಹಳ್ಳಿ ಅರುಣ್ ತಾಲೂಕು ಉಪಾಧ್ಯಕ್ಷರಾದ ಮಹೇಶ್ ಗೌಡ ಸೋಶಿಯಲ್ ಮೀಡಿಯಾ ಪ್ರಮುಖ ಪವನ್ ಕುಮಾರ್ ವಕೀಲರಾದಂತಹ ವಿನೋದ್ ಕುಮಾರ್ ರಾಜಗೋಪಾಲ್ ಈ ಸಂದರ್ಭದಲ್ಲಿ ಹಾಜರಿದ್ದರು.