ವಿಜಯವಾಡ: ಆಂಧ್ರಪ್ರದೇಶದ ನೂತನ ಮುಖ್ಯಮಂತ್ರಿಯಾಗಿ ತೆಲುಗು ದೇಶಂ ಪಕ್ಷದ ನಾರಾ ಚಂದ್ರಬಾಬು ನಾಯ್ಡು ಅವರು ಪ್ರಮಾಣವಚನ ಸ್ವೀಕರಿಸಿದ್ದಾರೆ.
ಆಂಧ್ರಪ್ರದೇಶದ ವಿಜಯವಾಡದ ಗನ್ನವರಂ ವಿಮಾನನಿಲ್ದಾಣದ ಸಮೀಪವಿರುವ ಕೇಸರ್ ಪಲ್ಲಿ ಬಳಿ ನಡೆದ ಸಮಾರಂಭದಲ್ಲಿ ರಾಜ್ಯಪಾಲರು ಚಂದ್ರಬಾಬು ನಾಯ್ಡು ಅವರಿಗೆ ಇಂದು ಬೆಳಿಗ್ಗೆ 11.27 ನಿಮಿಷಕ್ಕೆ ಪ್ರಮಾಣವಚನ ಭೋದಿಸಿದ್ದಾರೆ.
ಚಂದ್ರಬಾಬು ನಾಯ್ಡು ಅವರು ನಾಲ್ಕನೇ ಬಾರಿಗೆ ಆಂಧ್ರ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.ಅವರೊಟ್ಟಿಗೆ ಎನ್ಡಿಎ ಮೈತ್ರಿಕೂಟದ ಜನಸೇನಾ ಪಕ್ಷದ ಮುಖ್ಯಸ್ಥ ಪವನ್ಕಲ್ಯಾಣ್ ಸೇರಿದಂತೆ 25 ಮಂದಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.ಚಂದ್ರಬಾಬು ನಾಯ್ಡು ಅವರ ಪುತ್ರ ನಾ.ರಾ. ಲೋಕೇಶ್ ಅವರು ಸಹ ಸಚಿವರಾಗಿ ಇಂದಿನ ಸಂಪುಟಕ್ಕೆ ಪ್ರಮಾಣವಚನ ಸ್ವೀಕರಿಸುವ ಮೂಲಕ ಸೇರ್ಪಡೆಯಾಗಿದ್ದಾರೆ.
ಮೊದಲಿಗೆ ಚಂದ್ರಬಾಬು ನಾಯ್ಡು ದೈವ ಸಾಕ್ಷಿಯಾಗಿ ಪ್ರಮಾಣ ವಚನ ಸ್ವೀಕರಿಸಿದರೆ ತದನಂತರ ಪ್ರಮಾಣವಚನ ಸ್ವೀಕರಿಸಿದರೆ ಪವನ್ ಕಲ್ಯಾಣ್ ನಾ.ರಾ.ಲೋಕೇಶ್ ಮತ್ತಿತರರು ನಾಯ್ಡು ಮಾದರಿಯನ್ನೇ ಅನುಸರಿಸಿದರು. ಇಂದಿನ ಸಮಾರಂಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಸಚಿವರಾದ ಅಮಿತ್ ಶಾ, ಜೆ.ಪಿ.ನಡ್ಡಾ, ಮೆಗಾಸ್ಟಾರ್ ಚಿರಂಜೀವಿ ಕುಟುಂಬ ಸೇರಿ ಅನೇಕ ರಾಷ್ಟ್ರಮಟ್ಟದ ಹಾಗೂ ರಾಜ್ಯದ ಗಣ್ಯರು ಪಾಲ್ಗೊಂಡರು.
ನಾಯ್ಡು ಅವರ ಸಂಪುಟಕ್ಕೆ 22 ತೆಲುಗುದೇಶಂ ಪಕ್ಷದ ಶಾಸಕರು ಮೂವರು ಜನಸೇನಾ ಪಕ್ಷ ಹಾಗೂ ಓರ್ವ ಬಿಜೆಪಿ ಪಕ್ಷದ ಶಾಸಕರು ಸಚಿವರಾಗಿ ಸೇರ್ಪಡೆಗೊಂಡರು.