ಪೀಣ್ಯ ದಾಸರಹಳ್ಳಿ: ಪರಿಪೂರ್ಣ ಪ್ರತಿಷ್ಠಾನ ಫೌಂಡೇಶನ್, ಕರ್ನಾಟಕ ನೇತಾಜಿ ಚಾರಿಟಬಲ್ ಟ್ರಸ್ಟ್ ಮತ್ತು ಕನ್ನಡ ಮತ್ತು ಸಾಂಸ್ಕೃತಿಕ ಇಲಾಖೆ ಸಹಾಯಯೋಗದೊಂದಿಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಲಾದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರಿಗೆ ಸನ್ಮಾನ ಸಮಾರಂಭ ನಡೆಯಿತು.
ಈ ಸಂದರ್ಭದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿಯನ್ನು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ ಹೆಗಡೆ ಅವರು ಮುಖ್ಯ ಅತಿಥಿಯಾಗಿ ಆಗಮಿಸಿ ಗಾಯಕ, ಚಲನಚಿತ್ರ ನಿರ್ದೇಶಕ ನಂದನ್ ಶಿವರುದ್ರಪ್ಪ ಅವರಿಗೆ ನೀಡಲಾಯಿತು. ಪರಿಪೂರ್ಣ ಪ್ರತಿಷ್ಠಾನ ಫೌಂಡೇಶನ್ ಸಂಸ್ಥಾಪಕ ರವಿ ಕೋಟಿಸೂರ್ಯ, ಕರ್ನಾಟಕ ನೇತಾಜಿ ಚಾರಿಟಬಲ್ ಟ್ರಸ್ಟ್ ಸಂಸ್ಥಾಪಕ ರವಿಕುಮಾರ್ ಮತ್ತು ಪದಾಧಿಕಾರಿಗಳು ಇದ್ದರು.