ಇದು ನಿಜಕ್ಕೂ ನಂಬಲಸಾಧ್ಯವಾದ ಸುದ್ದಿ! ದಕ್ಷಿಣ ಆಫ್ರಿಕಾ ತಂಡ ಸೋಲುವುದೇನೂ ದೊಡ್ಡ ಸಂಗತಿಯಲ್ಲ. ವಿಶ್ವದ ಘಟನಾಘಟಿ ತಂಡಗಳಾದ ಭಾರತ, ಆಸ್ಟೆçÃಲಿಯಾ, ಇಂಗ್ಲೆAಡ್, ನ್ಯೂಜಿಲೆಂಡ್ ತAಡಗಳೂ ಹರಿಣಗಳನ್ನು ಸೋಲಿಸಬೇಕೆಂದರೆ ಹರ ಸಾಹಸ ಪಡಬೇಕು. ಅಂಥದದ್ದರಲ್ಲಿ ಐಸಿಸಿ ಟಿ೨೦ ಫೈನಲಿಸ್ಟ್ ತಂಡವನ್ನು ವಿಶ್ವ ರ್ಯಾಂಕಿAಗ್ ನಲ್ಲಿ ೧೬ನೇ ಸ್ಥಾನದಲ್ಲಿರುವ ನಮೀಬಿಯಾ ಸೋಲಿಸುವುದೆಂದರೆ! ಹೀಗೂ ಒಂದು ಘಟನೆ ನಡೆದೇ ಹೋಗಿದೆ!
ಅಕ್ಟೋಬರ್ ೧೧ ರಂದು, ವಿಂಡ್ಹೋಕ್ನ ಈಓಃ ನಮೀಬಿಯಾ ಕ್ರಿಕೆಟ್ ಮೈದಾನದಲ್ಲಿ ನಡೆದ ಏಕೈಕ ಟಿ೨೦ಐ ಪಂದ್ಯದಲ್ಲಿ ನಮಾಬಿಯಾ ತಂಡ ೪ ವಿಕೆಟ್ಗಳ ಐತಿಹಾಸಿಕ ಗೆಲುವು ಸಾಧಿಸಿತು. ೧೩೫ ರನ್ಗಳ ಸಾಧಾರಣ ಗುರಿಯನ್ನು ಬೆನ್ನಟ್ಟಿದ ಆತಿಥೇಯರು, ಪಂದ್ಯದ ಕೊನೇ ಎಸೆತದಲ್ಲಿ ರೋಚಕ ಗೆಲುವು ಸಾಧಿಸಿ ಕ್ರಿಕೆಟ್ ವಿಶ್ವಕ್ಕೇ ಅಚ್ಚರಿ ಉಂಟುಮಾಡಿದರು. ಆಲ್ರೌಂಡ್ ಪ್ರದರ್ಶನ ನೀಡಿದ ನಾಯಕ ಗೆರ್ಹಾರ್ಡ್ ಎರಾಸ್ಮಸ್ ಅವರು ನಮೀಬಿಯಾ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಟಾಸ್ ಗೆದ್ದ ವಿಶ್ವದ ೫ನೇ ಶ್ರೇಯಾಂಕಿತ ಟಿ೨೦ ದಕ್ಷಿಣ ಆಫ್ರಿಕಾ ತಂಡದ ನಾಯಕ ಡೊನೊವನ್ ಫೆರೆರಾ ಅವರು ಸ್ಕೋರ್ ಬೋರ್ಡ್ ನಲ್ಲಿ ದೊಡ್ಡ ಮೊತ್ತ ಕಲೆ ಹಾಕುವ ಗುರಿಯೊಂದಿಗೆ ಬ್ಯಾಟಿAಗ್ ಆಯ್ದುಕೊಂಡಿತು. ಆದರೆ ಪ್ರವಾಸಿಗರ ಲೆಕ್ಕಾಚಾರವನ್ನು ಬುಡಮೇಲು ಮಾಡಿದ ರುಬೆನ್ ಟ್ರಂಪೆಲ್ಮನ್ ನೇತೃತ್ವದ ವೇಗದ ಬೌಲಿಂಗ್ ಪಡೆ ನಿಧಾನಗತಿಯ ಪಿಚ್ ನಲ್ಲಿ ಸಾಧಾರಣ ಮೊತ್ತಕ್ಕೆ ಕಟ್ಟಿಹಾಕಿತು. ದಕ್ಷಿಣ ಆಫ್ರಿಕಾ ೨೦ ಓವರ್ಗಳಲ್ಲಿ ೮ ವಿಕೆಟ್ ಕಳೆದುಕೊಂಡು ಗಳಿಸಲು ಸಾಧ್ಯವಾಗಿದ್ದು ಕೇವಲ ೧೩೪ ರನ್ ಮಾತ್ರ.
ದಕ್ಷಿಣ ಆಫ್ರಿಕಾ ತಂಡದ ಪರ ಮಧ್ಯಮ ಕ್ರಮಾಂಕದಲ್ಲಿ ಜೇಸನ್ ಸ್ಮಿತ್ (೩೦ ಎಸೆತಗಳಲ್ಲಿ ೩೧ ರನ್) ಮತ್ತು ಆರಂಭಿಕ ಹರ್ಮನ್ (೧೮ ಎಸೆತಗಳಲ್ಲಿ ೨೩ ರನ್) ಮಾತ್ರ ಸ್ವಲ್ಪ ಪ್ರತಿರೋಧ ಒಡ್ಡಿದರು. ಹೀಗಾಗಿ ದಕ್ಷಿಣ ಆಫ್ರಿಕಾಗೆ ಸವಾಲಿನ ಮೊತ್ತವನ್ನೂ ಕಲೆ ಹಾಕಲು ಸಾಧ್ಯವಾಗಲಿಲ್ಲ. ಮತ್ತೊಂದೆಡೆ ನಮೀಬಿಯಾದ ಬೌಲಿಂಗ್ ದಾಳಿ ಮಾತ್ರ ಬಹಳ ಅದ್ಭುತವಾಗಿತ್ತು. ಎಡಗೈ ಮಧ್ಯಮ ವೇಗಿ ರುಬೆನ್ ಟ್ರಂಪೆಲ್ಮನ್ ೨೮ ರನ್ಗಳಿಗೆ ೩ ವಿಕೆಟ್ ಪಡೆದರು. ರೀಜಾ ಹೆಂಡ್ರಿಕ್ಸ್ ಮತ್ತು ರುಬಿನ್ ಹರ್ಮನ್ ಅವರಂತಹ ಪ್ರಮುಖ ದಕ್ಷಿಣ ಆಫ್ರಿಕಾ ಬ್ಯಾಟರ್ಗಳನ್ನು ಔಟ್ ಮಾಡಿದರು. ಯುವ ವೇಗಿ ಮ್ಯಾಕ್ಸ್ ಹೀಂಗೊ ಕೂಡ ೩೨ ರನ್ಗಳಿಗೆ ೨ ವಿಕೆಟ್ ಪಡೆದು, ದಕ್ಷಿಣ ಆಫ್ರಿಕಾ ನಾಯಕ ಡೊನೊವನ್ ಫೆರೇರಾ ಅವರ ವಿಕೆಟ್ ಪಡೆದು ಗಮನ ಸೆಳೆದರು. ನಾಯಕ ಗೆರ್ಹಾರ್ಡ್ ಎರಾಸ್ಮಸ್ ತಮ್ಮ ಆಫ್-
ಸ್ಪಿನ್ ಬೌಲಿಂಗ್ನಲ್ಲಿ ಕ್ವಿಂಟನ್ ಡಿ ಕಾಕ್ ಅವರನ್ನು ಕೇವಲ ೧ ರನ್ಗೆ ಔಟ್ ಮಾಡಿದರು.