ದೇಶದ ಪ್ರಧಾನಿ ನರೇಂದ್ರ ಮೋದಿ ಈ ಬಾರಿ ಚುನಾವಣೆಯ ಮುಕ್ತಾಯಕ್ಕೂ ಮುನ್ನಾ ಬರೋಬ್ಬರಿ 48 ಘಂಟೆಗಳ ಕಾಲ, ಭಾರತದ ತುಟ್ಟ ತುದಿ ಕನ್ಯಾಕುಮಾರಿಯಲ್ಲಿ ಧ್ಯಾನ ಮಗ್ನರಾಗಲಿದ್ದಾರೆ. ಕಳೆದ 2019 ರ ಲೋಕಸಭಾ ಕ್ಷೇತ್ರದ ಚುನಾವಣೆಯನ್ನು ಎದುರಿಸಿದ್ದಾಗ ಹಿಮಾಚಲ ಪ್ರದೇಶದಲ್ಲಿ ಧ್ಯಾನ ಮಗ್ನರಾಗಿದ್ದ ಅವರು, ಈ ಬಾರಿ ಧ್ಯಾನಕ್ಕಾಗಿ ಆಯ್ಕೆ ಮಾಡಿಕೊಂಡಿರುವುದು ದಕ್ಷಿಣದ ತುಟ್ಟ ತುದಿ ಕನ್ಯಾಕುಮಾರಿಯನ್ನ.
ಅಷ್ಟಕ್ಕೂ ನರೇಂದ್ರ ಮೋದಿ ಪ್ರತಿ ಬಾರಿಯೂ ಚುನಾವಣೆ ಸಂದರ್ಭದಲ್ಲಿ ಅಥವಾ ಚುನಾವಣೆ ಮುಗಿದ ಬಳಿಕ ಧ್ಯಾನಕ್ಕಾಗಿ ಮುಂದಾಗುವುದು ಏಕೆ? ಇಲ್ಲಿದೆ ನೋಡಿ ಅದರ ಕಂಪ್ಲೀಟ್ ಡೀಟೈಲ್ಸ್.
ಪ್ರಧಾನಿ ನರೇಂದ್ರ ಮೋದಿ. “ವಿಶ್ವಗುರು” ಎಂಬ ಕೀರ್ತಿಗೆ ಭಾಜನರಾದವರು. ಪ್ರತಿ ಬಾರಿಯೂ ಚುನಾವಣೆಯನ್ನು ಎದುರಿಸುವ ಮುನ್ನಾ, ಚುನಾವಣೆ ಮುಕ್ತಾಯವಾಗುವ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಧ್ಯಾನ ಮಗ್ನರಾಗುತ್ತಾರೆ. ಚುನಾವಣೆಯ ಸಂದರ್ಭದಲ್ಲಿ ವಿವಿಧ ಪಕ್ಷಗಳ ನಾಯಕರನ್ನು ತಮ್ಮ ಮಾತಿನ ಬಾಣಗಳಿಂದಲೇ ಕಟ್ಟಿ ಹಾಕುವ ಸಾಮರ್ಥ್ಯವಿರುವ ನರೇಂದ್ರ ಮೋದಿ ಮೌನ ವ್ರತವನ್ನು ಆಚರಿಸುವ ವಾಡಿಕೆ ಇಟ್ಟುಕೊಂಡಿದ್ದಾರೆ.
ಎಷ್ಟೋ ಮಂದಿಗೆ ಈ ಮೌನವ್ರತದ ಆಚರಣೆ ಬಗ್ಗೆ ಮಾಹಿತಿಯೇ ಇಲ್ಲ. ಮೌನವ್ರತವನ್ನು ಯಾರೂ ಆಚರಿಸುತ್ತಾರೋ, ಅವರಿಗೆ ವಾಕ್ಸಾರ್ಮಥ್ಯ ಹೆಚ್ಚಾಗುತ್ತದೆ. ನೆನಪಿನ ಶಕ್ತಿ ಜೊತೆಗೆ ವೈರಿಗಳನ್ನು ಹಿಮ್ಮೆಟ್ಟಿಸುವ ಕಲೆ ಕೂಡ ಕರಗತವಾಗುತ್ತದೆ. ಈ ನಿಟ್ಟಿನಲ್ಲಿ ಸ್ವಾಮಿ ವಿವೇಕಾನಂದರು ಧ್ಯಾನದಲ್ಲಿ ಮಗ್ನರಾದ ಭಾರತದ ತುಟ್ಟ ತುದಿ ಕನ್ಯಾಕುಮಾರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಎರಡು ದಿನಗಳ ಕಾಲ ಧ್ಯಾನದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಲಿದ್ದಾರೆ.
ಇನ್ನು ಇದರ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಚುನಾವಣೆಯ ಆಖಾಡದಲ್ಲಿ ವಿಪಕ್ಷಗಳ ನಾಯಕರನ್ನು ತರಾಟೆಗೆ ತೆಗೆದುಕೊಂಡಿದ್ದರ ಪ್ರಾಯಶ್ಚಿತ್ತ ಕೂಡ ಮಾಡಿಕೊಳ್ಳಲಿದ್ದು, ಅವರ ಆರಾಧ್ಯ ದೈವ ಶಿವನಾಮ ಸ್ಮರಣೆಯಲ್ಲಿ ಕಾಲವನ್ನು ಕಳೆಯಲಿದ್ದಾರೆ.ಇಷ್ಟು ಮಾತ್ರವಲ್ಲದೇ ಇಂತಹ ಧ್ಯಾನದಿಂದ ಅನೇಕ ಫಲಗಳು ಕೂಡ ಲಭಿಸಲಿದ್ದು, ಮತ್ತೊಮ್ಮೆ ದೇಶದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ವೇದಿಕೆಯನ್ನು ಸೃಷ್ಟಿಸಿಕೊಳ್ಳಲಿದ್ದಾರೆ ಮೋದಿ
ಸ್ವಾಮಿ ವಿವೇಕಾನಂದರು ಜಪಕ್ಕೆ ಕುಳಿತಿದ್ದ ಜಾಗವನ್ನು ಪ್ರಧಾನಿ ಆಯ್ಕೆ ಮಾಡಿಕೊಂಡಿದ್ದು, ಕನ್ಯಾಕುಮಾರಿ ಧ್ಯಾನ ಮಂದಿರದಲ್ಲಿ ಇದಕ್ಕಾಗಿ ವಿಶೇಷ ಮಂಟಪ ನಿರ್ಮಾಣವಾಗಿದೆ. ಭಾರತದ ತುಟ್ಟ ತುದಿ ಕನ್ಯಾಕುಮಾರಿ ವಿಶೇಷವಾದ ಶಕ್ತಿ ಹೊಂದಿರುವ ಕ್ಷೇತ್ರವಾಗಿದ್ದು, ತಾಯಿ ಕನ್ಯಾಕುಮಾರಿಯ ಆಶೀರ್ವಾದವನ್ನು ಮೋದಿ ಪಡೆದುಕೊಳ್ಳುವವರಿದ್ದಾರೆ. ಇತ್ತ ಮೂರು ಸಮುದ್ರಗಳ ಸಂಗಮದ ಸ್ಥಳವು ಕೂಡ ಕನ್ಯಾಕುಮಾರಿ ನೀರು ಅರಿಶಿನ ಕುಂಕುಮ ಬಣ್ಣದಲ್ಲಿ ಕಾಣಸಿಗಲಿದೆ.
ಹೀಗಾಗಿ, ಪ್ರಧಾನಿ ನರೇಂದ್ರ ಮೋದಿ, ಈ ಬಾರಿ ಧ್ಯಾನಕ್ಕಾಗಿ ಕನ್ಯಾಕುಮಾರಿ ಆಯ್ಕೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.