ಬೆಂಗಳೂರು: ಜಿಎಸ್ಟಿ ದರ ಇಳಿಕೆ ಸಂಭ್ರಮದಲ್ಲಿದ್ದ ಜನತೆಗೆ ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳ (ಏಒಈ) ಶಾಕ್ ಕೊಟ್ಟಿದೆ. ನಂದಿನಿ ತುಪ್ಪದ ಏಕಾಏಕಿ ೯೦ ರೂ. ಏರಿಕೆ ಮಾಡಿದೆ. ನಂದಿನಿ ತುಪ್ಪದ ದರ ಪ್ರತಿ ಕೆಜಿಗೆ ೯೦ ರೂ. ಏರಿಕೆ ಮಾಡಿ ಆದೇಶ ಹೊರಡಿಸಿದ್ದು, ಇಂದಿನಿAದಲೇ ನೂತನ ದರ ಜಾರಿಗೆ ಬರಲಿದೆ ಎಂದು ತಿಳಿಸಿದೆ.
ಈ ಹಿಂದೆ ೧ ಕೆಜಿ ತುಪ್ಪಕ್ಕೆ ೬೧೦ ರೂ. ಇತ್ತು, ಸದ್ಯ ೯೦ ರೂ. ಏರಿಕೆಯಿಂದ ೭೦೦ ರೂ.ಗೆ ಏರಿಕೆಯಾಗಿದೆ. ತುಪ್ಪ ಹೊರತುಪಡಿಸಿ ಇತರೇ ನಂದಿನಿ ಉತ್ಪನ್ನಗಳಲ್ಲಿ ಯಾವುದೇ ಬದಲಾವಣೆ ಇಲ್ಲ.
“ನಂದಿನಿ ತುಪ್ಪದ ದರ ಏರಿಕೆ”



