ಬೆಂಗಳೂರು: ಇನ್ಫೋಸಿಸ್ ಸಂಸ್ಥಾಪಕ Narayana Murthy ಬೆಂಗಳೂರಿನ ಕಿಂಗ್ ಫಿಷರ್ಸ್ ಟವರ್ಸ್ ನಲ್ಲಿ 50 ಕೋಟಿ ರೂಪಾಯಿ ಮೌಲ್ಯದ ಫ್ಲ್ಯಾಟ್ ಖರೀದಿಸಿದ್ದಾರೆ
8,400 ಚದರ ಅಡಿಯ ವಿಸ್ತೀರ್ಣ ಹೊಂದಿರುವ ಈ ಫ್ಲ್ಯಾಟ್ 16 ನೇ ಅಂತಸ್ತಿನಲ್ಲಿದ್ದು, ನಾಲ್ಕು ಬೆಡ್ ರೂಮ್ ಗಳು, 5 ಕಾರ್ ಪಾರ್ಕಿಂಗ್ ಪ್ರದೇಶವನ್ನು ಹೊಂದಿದೆ. ಪ್ರತಿ ಚದರ ಅಡಿಗೆ 59,500 ರೂಪಾಯಿ ಮೌಲ್ಯ ಹೊಂದಿದ್ದು, ನಗರದಲ್ಲಿ ಅತಿ ದುಬಾರಿ ಫ್ಲ್ಯಾಟ್ ಇದಾಗಿದೆ.
ಸೆಂಟ್ರಲ್ ಬ್ಯುಸಿನೆಸ್ ಡಿಸ್ಟ್ರಿಕ್ಟ್ (CBD) ಒಳಗೆ ಈ ಫ್ಲ್ಯಾಟ್ ಇದ್ದು, UB ಸಿಟಿ ವಸತಿ ಕ್ವಾರ್ಟರ್ಸ್ನಿಂದ ವ್ಯಾಪಾರಗಳವರೆಗೆ ಅನೇಕ ವ್ಯವಸ್ಥೆಯನ್ನು ಹೊಂದಿದೆ. ಮತ್ತು ಯೋಜನೆಯ ಪ್ರಾರಂಭದ ಹಂತದಿಂದಲೂ ಚರ್ಚೆಯಲ್ಲಿದೆ.
ಕಿಂಗ್ಫಿಶರ್ ಟವರ್ಸ್ 34-ಅಂತಸ್ತಿನ ಐಷಾರಾಮಿ ವಸತಿ ಸಂಕೀರ್ಣವಾಗಿದ್ದು, ಸುಮಾರು 81 ಘಟಕಗಳನ್ನು ಹೊಂದಿದೆ (4 BHK) 4.5 ಎಕರೆ ಪ್ರದೇಶದಲ್ಲಿ ನಿರ್ಮಾಣ ಮಾಡಲಾಗಿದೆ. ಮೇಲಿನ ಎರಡು ಮಹಡಿಗಳಲ್ಲಿ ಶ್ರೀಮಂತ ಅಪಾರ್ಟ್ಮೆಂಟ್ ಇದೆ.
ಒಂದು ಕಾಲದಲ್ಲಿ ವಿಜಯ್ ಮಲ್ಯ ಅವರ ಪೂರ್ವಜರ ಮನೆಯಾಗಿದ್ದ ಭೂಮಿಯನ್ನು 2010 ರಲ್ಲಿ ಪ್ರೆಸ್ಟೀಜ್ ಗ್ರೂಪ್ ಮತ್ತು ಮಲ್ಯ ಕಂಪನಿಯ ಜಂಟಿ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಿದೆ. ಈ ಐಷಾರಾಮಿ ಅಪಾರ್ಟ್ಮೆಂಟ್ಗಳನ್ನು ಆರಂಭದಲ್ಲಿ ಚದರ ಅಡಿಗೆ ₹ 22,000 ಗೆ ಮಾರಾಟ ಮಾಡಲಾಯಿತು.
ನಾರಾಯಣ ಮೂರ್ತಿ ಹೊಸ ಫ್ಲಾಟ್ ನ್ನು ಮುಂಬೈ ಮೂಲದ ಉದ್ಯಮಿಯೊಬ್ಬರಿಂದ ಖರೀದಿಸಿದ್ದಾರೆ ಎಂದು ವರದಿ ಹೇಳುತ್ತಿದೆ. ಮುಂಬೈ ಮೂಲದ ಉದ್ಯಮಿ ಸುಮಾರು ಒಂದು ದಶಕದಿಂದ ಈ ಆಸ್ತಿಯನ್ನು ಹೊಂದಿದ್ದರು. ಸಾಧ್ವನಿ ರಿಯಲ್ ಎಸ್ಟೇಟ್ ಹೋಲ್ಡಿಂಗ್ಸ್ ಒಪ್ಪಂದಕ್ಕೆ ಅನುಕೂಲ ಮಾಡಿಕೊಟ್ಟಿದೆ.
ನಾಲ್ಕು ವರ್ಷಗಳ ಹಿಂದೆ ಮೂರ್ತಿಯವರ ಪತ್ನಿ ಸುಧಾ ಮೂರ್ತಿ ಅವರು 23ನೇ ಮಹಡಿಯಲ್ಲಿ ₹29 ಕೋಟಿಗೆ ಫ್ಲಾಟ್ ಖರೀದಿಸಿದ್ದರು ಈ ಬಳಿಕ ಮತ್ತೊಂದು ಫ್ಲ್ಯಾಟ್ ಸೇರ್ಪಡೆಯಾಗಿದೆ. ಇಲ್ಲಿನ ಇತರ ಪ್ರಮುಖ ನಿವಾಸಿಗಳಲ್ಲಿ ಬಯೋಕಾನ್ನ ಕಿರಣ್ ಮಜುಂದಾರ್-ಶಾ ಮತ್ತು ಕರ್ನಾಟಕ ಸಚಿವ ಕೆಜೆ ಜಾರ್ಜ್ ಅವರ ಪುತ್ರ ರಾಣಾ ಜಾರ್ಜ್ ಸೇರಿದ್ದಾರೆ ಎಂದು ವರದಿ ಹೇಳಿದೆ.