This is the title of the web page
This is the title of the web page

ಕಂಠೀರವ ನಗರವನ್ನು ಕಟ್ಟಿ ಬೆಳೆಸುವಲ್ಲಿ ನಾರಾಯಣಪ್ಪನವರ ಪಾತ್ರ ಅಪಾರ: ಅಬಕಾರಿ ಸಚಿವ ಕೆ.ಗೋಪಾಲಯ್ಯ

ಬೆಂಗಳೂರು: ನಾರಾಯಣಪ್ಪನವರು ಕಂಠೀರವ ಬಡಾವಣೆಗೆ ಮಾಡಿದಂತಹ ಉತ್ತಮ ಕೆಲಸಗಳು ಹಾಗೂ ನೀಡಿದಂತಹ ಮೂಲಸೌಕರ್ಯಗಳನ್ನು ಮರೆಯಲು ಸಾಧ್ಯವಿಲ್ಲ. ಕಂಠೀರವನಗರವನ್ನು ಕಟ್ಟಿ ಬೆಳೆಸುವಲ್ಲಿ ನಾರಾಯಣಪ್ಪನವರ ಪಾತ್ರ ಅಪಾರವಾದದ್ದು ಎಂದು ಸ್ಥಳೀಯ ಶಾಸಕರು ಹಾಗೂ ಅಬಕಾರಿ ಸಚಿವರಾದ ಕೆ.ಗೋಪಾಲಯ್ಯ ಅವರು ತಿಳಿಸಿದರು.

ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ಕಂಠೀರವ ನಗರದಲ್ಲಿ ಆರ್.ನಾರಾಯಣಪ್ಪ ಫೌಂಡೇಶನ್ ವತಿಯಿಂದ ಆಯೋಜಿಸಿದ ಆರ್.ನಾರಾಯಣಪ್ಪ ಅವರ ಆರನೇ ವರ್ಷದ ಪುಣ್ಯ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು. ಆರ್.ನಾರಾಯಣಪ್ಪ ಅವರು ಕಂಠೀರವ ನಗರದ ಜನರ ಪರವಾಗಿ ಉತ್ತಮ ಕೆಲಸ ಕಾರ್ಯಗಳನ್ನು ಮಾಡಿ ನಮ್ಮೆಲ್ಲರಿಗೂ ಮಾರ್ಗದರ್ಶಕರಾಗಿದ್ದರು. ಚುನಾವಣೆಯಲ್ಲಿ ನಾನು ಗೆಲ್ಲಲು ನಾರಾಯಣಪ್ಪರವರು ಸಹ ಉತ್ತಮವಾದ ಬೆಂಬಲವನ್ನು ನೀಡಿದ್ದರು. ಕಂಠೀರವ ನಗರವೆಂದರೆ ಇದೊಂದು ದೊಡ್ಡ ಊರಿಗೆ ಸಮ ಎಂದರು.

ಕಂಠೀರವನಗರದಲ್ಲಿ ಜನರು ನೆಮ್ಮದಿ ಜೀವನವನ್ನು ನಡೆಸುತ್ತಿದ್ದಾರೆ. ಅವರಿಗೆ ಕುಡಿಯುವ ನೀರು, ರಸ್ತೆ ಹಾಗೂ ಇನ್ನಿತರ ಮೂಲ ಸೌಕರ್ಯವನ್ನು ವ್ಯವಸ್ಥೆಯನ್ನು ಮಾಡಿದ್ದೇವೆ ಎಂದರು. ಇದೇ ಸಂದರ್ಭದಲ್ಲಿ ಸ್ಥಳೀಯ ಮಹಿಳೆಯರಿಗೆ ಸೀರಿಯನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಮಂಡಲದ ಅಧ್ಯಕ್ಷ ರಾಘವೇಂದ್ರ ಶೆಟ್ಟಿ, ಹನುಮಂತರಾಯಪ್ಪ, ಬೆಟ್ಟಯ್ಯ, ಅಂಬರೀಶ್ ಸುರಭಿ ನಾಗರಾಜು ಸೇರಿದಂತೆ ಆರ್.ನಾರಾಯಣಪ್ಪ ಅವರ ಕುಟುಂಬಸ್ಥರು ಉಪಸ್ಥಿತರಿದ್ದರು.