ತಿ.ನರಸೀಪುರ:ನೆರಗ್ಯಾತನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ನಟರಾಜು ಉಪಾಧ್ಯಕ್ಷರಾಗಿ ಮಂಜುಳ ಅವಿರೋಧವಾಗಿ ಆಯ್ಕೆಯಾದರು.
ತಾಲ್ಲೂಕಿನ ನಾರಾಗ್ಯತನಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿಯ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ನೆಡದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ನಟರಾಜು ,ಉಪಾಧ್ಯಕ್ಷ ಸ್ಥಾನಕ್ಕೆ ಮಂಜುಳ ವರೆತು ಪಡೆಸಿ ಮತ್ಯಾರು ನಾಮಪತ್ರ ಸಲ್ಲಿಸದ ಕಾರಣ ನಟರಾಜು ಅಧ್ಯಕ್ಷ ಉಪಾಧ್ಯಕ್ಷರಾಗಿ ಮಂಜುಳ ಅವಿರೋಧವಾಗಿ ಆಯ್ಕೆಯಾದರೆಂದು ಚುನಾವಣೆ ಅಧಿಕಾರಿ ಸಿ ಡಿ ಓ ರಾಜಣ್ಣ ಘೋಷಣೆ ಮಾಡಿದರು.
ತದ ನಂತರ ಮಾಡಿದ ನೂತನ ನಟರಾಜು ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿಯಿಂದ ಹಾಲು ಉತ್ಪಾದಕರಿಗೆ ಸಿಗವ ಸೌಲಭ್ಯಗಳನ್ನು ಪ್ರಾಮಾಣಿಕವಾಗಿ ಕೂಡಿಸ ಲಾಗುವುದು ರೈತರು ಸಹ ವ್ಯವಸಾಯದ ಜೊತೆ ಜೊತೆಯಲ್ಲಿ ಹೈನುಗಾರಿಕೆ ಮಾಡಿದರೆ ಆರ್ಥಕವಾಗಿ ಬಲಿಷ್ಟರಾಗಬಹುದು. ಹಾಗೂ ಎಲ್ಲಾ ನಿರ್ದೇಶಕರು, ಉತ್ಪಾದಕರು,ಗ್ರಾಮಸ್ಥರ ಸಹಕಾರದೊಂದಿಗೆ ಸಂಘವನ್ನು ಉನ್ನತ ಮಟ್ಟಕ್ಕೆ ತೆಗೆದು ಕೊಂಡು ಹೋಗಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು .
ಚುನಾವಣೆಯಲ್ಲಿ ನಿರ್ದೇಶಕರಾದ ದುಂಡಪ್ಪ, ನಂದೀಶ, ಎನ್ ಆರ್. ಚಂದ್ರಶೇಖರ್, ಶಿವಕುಮಾರ್, ಮಹೇಶ, ಚಂದ್ರು, ಗುರುಸ್ವಾಮಿ, ರತ್ನಮ್ಮ, ಮಹದೇವಮ್ಮ, ಹಾಗೂ ಮುಖಂಡರುಗಳಾದ ಡೈರಿ ಗುರುಮೂರ್ತಿ, ಕುಮಾರಸ್ವಾಮಿ, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಜಯಪ್ಪ, ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷ ಮಹದೇವಸ್ವಾಮಿ, ಎನ್ ವಿ ಕುಮಾರ್, ಪ್ರಭು, ಎನ್. ಜಿ ಬಸವರಾಜು, ಮನು, ಗುಣ,ಕುಮಾರ್, ಸಿದ್ದಯ್ಯ, ರಮೇಶ, ದೊಳ್ಳಯ್ಯ, ಹಲವಾರ ಮಾದೇಶ್, ಸ್ವಾಮಿ, ಮಹೇಶ,ಗಿರೀಶ, ಕೊಳತೂರು ಗ್ರಾಮ ಪಂಚಾಯತಿ ಅಧ್ಯಕ್ಷ ರವಿ ಗ್ರಾಮಸ್ಥರು ಹಾಗೂ ಮುಖಂಡರು ಹಾಜರಿದ್ದರು.