ದೇವನಹಳ್ಳಿ: ಒಂದು ವಾರದಿಂದ ನಡೆದಂತ ಜೇಸಿ ಸಪ್ತಾಹದ ಮೂದಲನೇ ದಿನದ ನಡೆದ ಕಾರ್ಯಕ್ರಮಕ್ಕೆ ಜೇಸಿಐ ದೇವನಹಳ್ಳಿ ಸಂಸ್ಥೆಗೆ ರಾಷ್ಟ್ರಮಟ್ಟದ ನ್ಯಾಷನಲ್ ಅವಾರ್ಡ್ ಪಡೆದಿದೆ ಎಂದು ವಲಯ ಉಪಾಧ್ಯಕ್ಷೆ ಜೇಸಿ ಆಶಾ ಜೈನ್ ಹೇಳಿದರು.ಪಟ್ಟಣದ ಶಾಂತಿನಿಕೇತನ್ ಪಬ್ಲಿಕ್ ಶಾಲೆಯ ಆವರಣದಲ್ಲಿ ಜೇಸಿ ಸಪ್ತಾಹದ ಸಮಾರೋಪ ಸಮಾರಂಭ ಹಾಗೂ ಜೇಸಿ ಕುಟುಂಬ ಸಮ್ಮಿಲನದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು.
ನಾವು ಒಂದು ದಿನದಲ್ಲಿ ಹಗಲು ರಾತ್ರಿ ಎಲ್ಲವನ್ನು ನೊಡುತ್ತೇವೆ ಆದರೆ ಬೆಳಗ್ಗೆ ಎದ್ದು ನೊಡಿದಾಗ ಸೂರ್ಯ ಪ್ರಕಾಶಮಾನವಾಗಿ ಕಾಣಿಸುತ್ತೆ ಮದ್ಯಾನ್ನ ಹುರಿ ಬಿಸಿಲು ಕಾಣಿಸುತ್ತೆ ಸಂಜೆ ಆದ ನಂತರ ಕತ್ತಲು ಬರುತ್ತೆ ಹಾಗೆ ಕತ್ತಲು ಬಂತು ಅಂತ ಅದು ಮುಕ್ತಾಯವಲ್ಲಾ ಆದರೆ ಮತ್ತೆ ಬೆಳಗ್ಗೆ ಸೂರ್ಯೋದಯವಾಗುತ್ತೆ ಅದೆ ರೀತಿ ನಮ್ಮ ಜೇಸಿಐ ದೇವನಹಳ್ಳಿ ಸಂಸ್ಥೆಯು ಹಗಲು ಇರಳು ಅನ್ನದೆ ನಿರಂತರವಾಗಿ ಕಾರ್ಯನಿರತವಾಗಿದೆ ಅದರಲ್ಲೂ ಜೇಸಿಐ ದೇವನಹಳ್ಳಿ ಸಂಸ್ಥೆಯನ್ನು ಒಂದು ವಜ್ರಕ್ಕೆ ಹೊಲಿಸಬಹುದು ವಜ್ರವನ್ನು ಬೆಳಕಲ್ಲೆ ಹಾಗೆ ಕತ್ತಲಲ್ಲೆ ನೊಡಿ ಪ್ರಕಾಶಮಾನವಾಗಿ ಕಾಣಿಸುತ್ತೆ ಹಾಗೆ ನಮ್ಮ ಜೇಸಿಐ ದೇವನಹಳ್ಳಿ ಸಂಸ್ಥೆ ನಿರಂತರವಾಗಿ ಇಪ್ಪತ್ತು ವರ್ಷಗಳಿಂದ ನೂರುಕಿಂತ ಹೆಚ್ಚು ಸದಸ್ಯರಗಳನ್ನು ಹೊಂದು ಒಗ್ಗಟ್ಟಿನಿಂದ ವಜ್ರದಂದೆ ಹೊಳೆಯುತ್ತಿದೆ ಎಂದರು.
ಈ ಕಾರ್ಯಕ್ರಮದಲ್ಲಿ ತಾಲ್ಲೂಕಿನ ಜಾಲಿಗೆ ಗ್ರಾಪಂ ಅಧ್ಯಕ್ಷ ಎಸ್.ಎಮ್ಆನಂದ ಮತ್ತು ಅಣ್ಣೇಶ್ವರ ಗ್ರಾಪಂ ಉಪಾಧ್ಯಕ್ಷ ಮುನಿಕೃಷ್ಣಪ್ಪ ರವರಿಗೆ ಸನ್ಮಾನಿಸಲಾಯಿತು ಜೇಸಿಐ ದೇವನಹಳ್ಳಿ ಪೌಂಡೇಶನ ಅಧ್ಯಕ್ಷ ಜಿ.ಎ ರವೀಂದ್ರ ಉದ್ಘಾಟಿಸಿ ಮಾತನಾಡಿದರು, ಕಾರ್ಯದರ್ಶಿ ಎಂ.ಆನಂದ, ಖಾಜಾಂಚಿಎಸ್.ವಿ ಮಂಜುನಾಥ್, ಪೂರ್ವ ವಲಯ ಉಪಾಧ್ಯಕ್ಷ ಎಸ್.ವಿಜಯಕುಮಾರ್, ಜೇಸಿಐ ಅಧ್ಯಕ್ಷ ವೇಣುಗೋಪಾಲ್, ಕಾರ್ಯದರ್ಶಿ ಅಮರ್, ನಿಕಟ ಪೂರ್ವಾಧ್ಯಕ್ಷ ಪ್ರವೀಣ್ ಕುಮಾರ್, ನಿಯೋಜಿತ ಅಧ್ಯಕ್ಷ ಕಿರಣ್, ಯೋಜನಾ ನಿರ್ದೇಶಕ ಎನ್. ಶಿವಕುಮಾರ್.ಮತ್ತು ಡಿ.ಎಸ್ ದರ್ಶನ್ ಉಪಸ್ಥಿತರಿದ್ದರು.
Leave a Review