ಯಲಹಂಕ: ಹೆಸರಘಟ್ಟ ಗ್ರಾಮದಲ್ಲಿರುವ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ (ಐ ಐ ಹೆಚ್ ಆರ್ )ವತಿಯಿಂದ ಮಾ.5 ರಿಂದ 7 ರ ವರೆಗೆ ರಾಷ್ಟ್ರೀಯ ತೋಟಗಾರಿಕಾ ಮೇಳವನ್ನು ಆಯೋಜಿಸಲಾಗಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಐಐಎಚ್ಆರ್ ನಿರ್ದೇಶಕ ಪ್ರಕಾಶ್ ಪಾಟೀಲ್ ಸುಸ್ಥಿರ ಅಭಿವೃದ್ಧಿಗಾಗಿ ನವೀನ ಪೀಳಿಗೆಯ ತೋಟಗಾರಿಕೆ ತಂತ್ರಜ್ಞಾನಗಳ ಪರಿಕಲ್ಪನೆಯಡಿ ಜರುಗುವ ಈ ಮೇಳದಲ್ಲಿ 327 ಪ್ರಭೇದಗಳು ಮತ್ತು 154 ತಂತ್ರಜ್ಞಾನಗಳು 350ಕ್ಕೂ ಅಧಿಕ ಮಳಿಗೆಗಳನ್ನು ತೆರೆಯಲಾಗಿದೆ, ಪ್ರತಿನಿತ್ಯ ಮೇಳದಲ್ಲಿ ಸುಮಾರು 50,000 ರೈತರು ಭಾಗವಹಿಸುವ ನಿರೀಕ್ಷೆ ಇದೆ ಎಂದು ತಿಳಿಸಿದರು.
ಈ ಮೇಳದ ಆಯೋಜನ ಕಾರ್ಯದರ್ಶಿ ಡಾಕ್ಟರ್ ಎಂ ವಿ ಧನಂಜಯ್ ಮಾತನಾಡಿ ಮೇಳದಲ್ಲಿ 7 ಹೊಸ ತಂತ್ರಜ್ಞಾನವನ್ನು ಪರಿಚಯಲಾಗುತ್ತಿದೆ. ರೋಗನಿರೋಧಕ ಮೆಣಸಿನಕಾಯಿ ತಿಳಿಯಾದ ಆರ್ಕ ನಿಹಿರ, ಆರ್ಕ ಬೃಂಗರಾಜ್,ಆರ್ಕಾಲಂಬ ಕೃಷಿ ಮಾದರಿ ಈರುಳ್ಳಿ ನಾಟಿ ಮಾಡುವ ಯಂತ್ರ, ವಿಟಮಿನ್ ಡಿ ಪುಷ್ಟಿಕರಣ ತಂತ್ರಜ್ಞಾನ ಹೊಂದಿರುವ ಅಣಬೆ ಬೆಳೆಯನ್ನು ರೈತರಿಗೆ ಪರಿಚಯಸಲಾಗುತ್ತದೆ ಎಂದರು.