ಬೆಂಗಳೂರು: ನಗರದ ಸಿಎಂಆರ್ ತಾಂತ್ರಿಕ ಮಹಾವಿದ್ಯಾ ಲಯ 2024 ಜೂನ್ 21 ಮತ್ತು 22 ರಂದು ಎರಡು ದಿನಗಳಸಿಎಂಆರ್ ಕಲ್ಬರಾ-24 ರಾಷ್ಟ್ರಮಟ್ಟದ ವೈವಿಧ್ಯಮಯ ಸಾಂಸ್ಕೃತಿಕ ಹಬ್ಬವನ್ನು ಆಯೋಸಿದ್ದು ಕಾಲೇಜಿನ ಪ್ರಾಂಶು ಪಾಲರಾದ ಡಾ. ಸಂಜಯ್ ಜೈನ್ ಅವರು ಜ್ಯೋತಿ ಬೆಳಗಿಸುವ ಮೂಲಕ ಸಿಎಂಆರ್ ಕಲ್ಚರಾ-24 ಸಾಂಸ್ಕೃತಿಕ ಉತ್ಸವಕ್ಕೆ ವಿದ್ಯುಕ್ತ ವಿದ್ಯುಕ್ತ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು ಸಿಎಂಆರ್ ಕಲ್ಚರಾ-24 ನಮ್ಮ ಕಾಲೇಜಿನ ಹೆಮ್ಮೆಯ ಹಬ್ಬ. ಪ್ರತಿವರ್ಷ ನಡೆಯುವಈ ಸಾಂಸ್ಕೃತಿಕ ಹಬ್ಬ ವಿದ್ಯಾರ್ಥಿಗಳಲ್ಲಿರುವ ಸಾಂಸ್ಕೃತಿಕ ಕಲಾವಂತಿಕೆಯನ್ನು ಅಭಿವ್ಯಕ್ತಪಡಿಸಲು ಒಂದು ಅತ್ಯುತ್ತಮ ವೇದಿಕೆಯಾಗಿದೆ ಎಂದರು.ಜೂನ್ 21 ಮತ್ತು 22 ಎರಡು ದಿನಗಳು ನಡೆಯುವ ಸಿಎಂಆರ್ ಕಲ್ಬರಾ-24 ಸಾಂಸ್ಕೃತಿಕ ಹಬ್ಬದಲ್ಲಿ 50 ವಿಶೇಷ ಸ್ಪರ್ಧೆಗಳು ನಡೆಯಲಿದ್ದು 70ಕ್ಕೂ ಹೆಚ್ಚು ಕಾಲೇಜುಗಳಿಂದ ಸುಮಾರು 10,000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ‘ಸಿಎಂಆರ್ ಕಲ್ಪರಾ-24’ ಮಗಾ ಸಾಂಸ್ಕೃತಿಕ ಉತ್ಸವದಲ್ಲಿ ಸ್ಪರ್ಧಿಗಳಾಗಿ ಭಾಗವಹಿಸುತ್ತಿದ್ದಾರೆ. ಫ್ಯಾಷನ್ ಶೋ, ಡಿಜೆ, ಹೆಮ್ಮೆಯ ಕನ್ನಡಿಗ, ಅಭಿನಯ ಚಕ್ರವರ್ತಿ, ಕನ್ನಡ ಕುವರ, ಮಿನ್ನರ್ ಫಿಟ್ ಸ್ಯಾಂಡಪ್ ಕಾಮಿಡಿ, ರೋಬೋ ರೇನ್, ಫಿಫಾ ಫೋಟೋಗ್ರಫಿ ಕಲೆ, ಸಂಗೀತ, ರಂಗಭೂಮಿ ಮತ್ತು ಸಾಹಿತ್ಯ ಹೀಗೆ ಸೃಜನಶೀಲ, ಕಲಾತ್ಮಕ ಹಾಗೂ ತಂತ್ರಜ್ಞಾನ ಬಿಂಬಿಸುವ ವೈವಿಧ್ಯಮಯ ಮನೋರಂಜನಾ ಕಾರ್ಯಕ್ರಮಗಳು ‘ಸಿಎಂಆರ್ ಕಲ್ಬರಾ-24’ ಸಾಂಸ್ಕೃತಿಕ ಹಬ್ಬದ ಪ್ರಮುಖ ಆಕರ್ಷಣೆಯಾಗಿವೆ.
ಜೂನ್ 22 ರಂದು ನಡೆಯುವ ಸಿಎಂಆರ್ ಕಲ್ಬರಾ-24 ಸಮಾರೋಪ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಸ್ಯಾಂಡಲ್ವುಡ್ನ ಜನಪ್ರಿಯ ನಟ, ಫಿಲ್ಮ
ಫೇರ್ ಅವಾರ್ಡ್ ವಿಜೇತ ಡಾಲಿ ಧನಂಜಯ ಅವರು ಆಗಮಿಸುತ್ತಿದ್ದು ಕಾರ್ಯ ಕ್ರಮಕ್ಕೆ ಇನ್ನಷ್ಟು ಮೆರುಗು ತುಂಬಲಿದ್ದಾರೆ ಎಂದರು.ಉದ್ಘಾಟನಾ ಕಾರ್ಯಕ್ರಮದಲ್ಲಿ ಕಾಲೇಜಿನ ಉಪಪ್ರಾಂಶುಪಾಲರಾದ ಡಾ.ಬಿ.ನರಸಿಂಹ ಮೂರ್ತಿ, ಕಲ್ಚರಾ-24 ಕಾರ್ಯಕ್ರಮ ಸಂಯೋಜಕರಾದ ಖಾಸಿಫ್ ಅಹಮ್ಮದ್ ಅವರುಗಳು ಉಪಸ್ಥಿತರಿದ್ದರು.