ತಿ.ನರಸೀಪುರ: ಕರ್ನಾಟಕ ಶಾಲಾ ಶಿಕ್ಷಣ ಇಲಾಖೆಯ ಆಶ್ರಯದಲ್ಲಿ ವಿಜಯನಗರ ಜಿಲ್ಲೆಯ, ಮರಿಯಮ್ಮನಹಳ್ಳಿ, ಹೊಸಪೇಟೆ ತಾಲ್ಲೂಕಿನ ವಿನಾಯಕ ಪ್ರೌಢಶಾಲೆ ಆವರಣದಲ್ಲಿ ನಡೆದ ರಾಜ್ಯ ಮಟ್ಟದ ಶಾಲಾ ಮಕ್ಕಳ ಆಟೋಟಗಳ ಸ್ಪರ್ಧೆಯಲ್ಲಿ ತಿ.ನರಸೀಪುರ ತಾಲ್ಲೂಕಿನ ಸೋಸಲೆ ಸರ್ಕಾರಿ ಆದರ್ಶ ಶಾಲೆಯ ಪ್ರತಿಭಾವಂತ ಕ್ರೀಡಾಪಟುವಾದ ಶಿಕ್ಷಾ. ಎ. ಅವರು ೩೦ ಕೆಜಿ ಕುಸ್ತಿ ವಿಭಾಗದಲ್ಲಿ ಅಪ್ರತಿಮ ಕ್ರೀಡಾ ಪ್ರದರ್ಶನ ನೀಡಿ ಪ್ರಥಮ ಸ್ಥಾನ ಪಡೆಯುವ ಮೂಲಕ ರಾಜ್ಯ ಮಟ್ಟದಿಂದ ರಾಷ್ಟçಮಟ್ಟದ ಕುಸ್ತಿ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ಶಿಕ್ಷಾ.ಎ ರವರು ಬಾಗಲಕೋಟೆ ಜಿಲ್ಲೆಯ ಕಲಾವತಿ ವಿರುದ್ಧ ಕೇವಲ ೨ ನಿಮಿಷ ೧೫ ಸೆಕೆಂಡ್ಗಳಲ್ಲಿ ಶ್ರೇಷ್ಠ ಆಟವನ್ನು ತೋರಿ ವಿಜಯ ಸಾದಿಸಿದ್ದಾರೆ ವಿದ್ಯಾರ್ಥಿನಿ ಆತ್ಮವಿಶ್ವಾಸ ಹಾಗೂ ಕೌಶಲ್ಯದಿಂದ ಎಲ್ಲರ ಮೆಚ್ಚುಗೆ ಗಳಿಸಿದ್ದಾರೆ.
ಈ ಸಾಧನೆಯನ್ನು ಶ್ಲಾಘಿಸಿದ ಶಾಲೆಯ ಮುಖ್ಯಶಿಕ್ಷಕರು, ವಿದ್ಯಾರ್ಥಿನಿಯ ಪರಿಶ್ರಮ, ತರಬೇತಿದಾರರ ಮಾರ್ಗದರ್ಶನ ಮತ್ತು ಪೋಷಕರ ನಿಸ್ವಾರ್ಥ ಬೆಂಬಲದಿಂದ ಈ ಮಹತ್ವದ ಸಾಧನೆ ಸಾಧ್ಯವಾಗಿದೆ. ರಾಷ್ಟ್ರಮಟ್ಟದಲ್ಲಿಯೂ ಕರ್ನಾಟಕದ ಕೀರ್ತಿಯನ್ನು ಮತ್ತಷ್ಟು ಉನ್ನತ ಮಟ್ಟಕ್ಕೆ ಏರಿಸಲಿ ಎಂದು ಶುಭ ಹಾರೈಸಿದ್ದಾರೆ. ಶಾಲಾ ಸಿಬ್ಬಂದಿ, ತರಬೇತಿದಾರರು, ಎಸ್.ಡಿ.ಎಂ.ಸಿ ಸಮಿತಿ ಮತ್ತು ಪೋಷಕರು ವಿದ್ಯಾರ್ಥಿನಿಗೆ ಹಾರ್ದಿಕ ಅಭಿನಂದನೆಗಳನ್ನು ಅರ್ಪಿಸಿ, ಮುಂದಿನ ಸ್ಪರ್ದೆಗೆ ಪ್ರೋತ್ಸಾಹಿಸಿದ್ದಾರೆ.



