ಹಳಿಯಾಳ (ಉತ್ತರ ಕನ್ನಡ): ಬಾಗಲಕೋಟೆ ಕ್ರೀಡಾ ಶಾಲೆಯ ಮುತ್ತು ಆಡಿನ ಅವರು ಜಿಲ್ಲಾ ಕುಸ್ತಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಾಷ್ಟ್ರಮಟ್ಟದ ಕುಸ್ತಿ ಸ್ಪರ್ಧೆಯ 38 ಕೆ.ಜಿ ವಿಭಾಗದಲ್ಲಿ ಗೆದ್ದರು.
ಟೂರ್ನಿಯ ಎರಡನೇ ದಿನವಾದ ಭಾನುವಾರ ಮುತ್ತು ಅವರು ಧಾರವಾಡ ಕ್ರೀಡಾ ವಸತಿ ಶಾಲೆಯ ಭಜರಂಗಿ ದೊಡಮನಿ ವಿರುದ್ಧ 12-2 ಅಂಕಗಳಿಂದ ಗೆದ್ದು ಬಂಗಾರದ ಪದಕ ಗಳಿಸಿದರು.
38 ಕೆ.ಜಿ.: ಮುತ್ತು ಆಡಿನ, ಬಾಗಲಕೋಟೆ (ಚಿನ್ನ), ಭಜರಂಗಿ ದೊಡಮನಿ (ಬೆಳ್ಳಿ), ವೆಂಕಟೇಶ ಸಿ.ಜಿ. ಹರಿಹರ, ಅಮೋಘ ಬಿ.ಎಸ್. ಹಳಿಯಾಳ (ಕಂಚು). 25 ಕೆ.ಜಿ ವಿಭಾಗ: ಗಣೇಶ ದೇಶೂರಕರ (ಬಂಗಾರ), ಶರದ ಚಕ್ರಸಾಲಿ (ಬೆಳ್ಳಿ), ಜಿಗರ ಪವಾರ, ರೋಹಿತ (ಕಂಚು). 29 ಕೆ.ಜಿ ವಿಭಾಗ: ಮಂಜುನಾಥ ದಾನವೆನವರ (ಬಂಗಾರ), ಅಮೂಲ್ಯಾ ಡಿ. (ಬೆಳ್ಳಿ), ಅನಿಕುಮಾರ ಎನ್.ಎಸ್., ಸಂಪತ್ ಕುಮಾರ ಎನ್.ವೈ. (ಕಂಚು).
32 ಕೆ.ಜಿ. ವಿಭಾಗ: ಪವನ್ ಕಟ್ಟಿಮನಿ (ಬಂಗಾರ), ಮೋಹನ (ಬೆಳ್ಳಿ), ತೇಜಸ್ ದಾವಣಗೇರೆ, ವಿಲಾಸ ಗೋಕಾಕ (ಕಂಚು). 35 ಕೆ.ಜಿ.ವಿಭಾಗ: ಗಜಾನನ ಪಿ.ಸಿ. (ಬಂಗಾರ), ನಿಂಗಪ್ಪಾ ಘಾಡೇಕರ (ಬೆಳ್ಳಿ), ಮಾದೇಶಾ ಎಮಂ.ಬಿ., ಅಭಿ ಕುರಬರ (ಕಂಚು).
42 ಕೆ.ಜಿ. ಬಾಲಕರ ವಿಭಾಗ: ಸುದೀಪ ನೆಸರ್ಗಿ ದಾವಣಗೆರೆ (ಬಂಗಾರ), ಶುಭಂ ಗೌಡಾ ಚಿಕ್ಕೊಡಿ (ಬೆಳ್ಳಿ), ಶಿವಾಜಿ ಆರ್.ಜಿ. ಧಾರವಾಡ, ಶ್ಯಾಮ ಪೆಟೋಲಿ ಅಳ್ನಾವರ (ಕಂಚು). 45 ಕೆ.ಜಿ.ವಿಭಾಗ: ಮೋಹನರಾಜ ದಾವಣಗೆರೆ (ಬಂಗಾರ), ಶುಭಂ ಗೌಡಾ ಹಳಿಯಾಳ (ಬೆಳ್ಳ), ದೀಪ ಹಿಪ್ಪರಗಿ ರಬಕವಿ, ಹನುಮಂತ ತುಗಲ ಬಾಗಲಕೋಟೆ (ಕಂಚು).
48 ಕೆ.ಜಿ.ವಿಭಾಗ:ವರುಣ ಕುಂಕಾಳೆ ಹಳಿಯಾಳ (ಬಂಗಾರ), ಪ್ರಜ್ವಲ ಪಾಟೀಲ ಬೆಳಗಾವಿ (ಬೆಳ್ಳಿ), ಕೀರ್ತನ ಡಿ.ಸಿ. ದಾವಣಗೆರೆ, ಯುವರಾಜ ಪಾಟೀಲ ಮುರ್ಕವಾಡ (ಕಂಚು).
Leave a Review