ದೇವನಹಳ್ಳಿ: ರಾಷ್ಟ್ರಕವಿ ಕುವೆಂಪು ಅವರ ಸೃಜನಶೀಲ ಪ್ರತಿಭೆ ಪೂರ್ವ ಪಶ್ಚಿಮಗಳ ಚಿಂತನೆಗಳಿಂದ ಶ್ರೀಮಂತವಾಗಿದೆ ಎಂದು ಗ್ರೇಟ್ ಟು ತಾಸಿಲ್ದಾರ್ ಉಷಾ ತಿಳಿಸಿದರು.
ಪಟ್ಟಣದ ತಾಲೂಕು ಕಚೇರಿ ನ್ಯಾಯಾಲಯ ಸಭಾಂಗಣದಲ್ಲಿ ತಾಲೂಕು ಆಡಳಿತ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವಮಾನವ ದಿನಾಚರಣೆಯಲ್ಲಿ ರಾಷ್ಟ್ರಕವಿ ಕುವೆಂಪು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು ಕುವೆಂಪು ಅವರ ಬಹುತೇಕ ಪಾತ್ರಗಳು ಅರಣ್ಯ ಸಂಸ್ಕೃತಿಯ ಪ್ರತೀಕ ನಿಸರ್ಗದ ಕುರಿತ ಉತ್ಕಟವಾದ ಹಂಬಲ ಕೇವಲ ಸೌಂದರ್ಯವಾದುದು ಮಾತ್ರವಲ್ಲ ಅದನ್ನು ಮೀರಿದ ಆಧ್ಯಾತ್ಮಿಕ ಅನ್ವೇಷಣೆಯು ಆಗಿದೆ ಎಂದು ಹೇಳಿದರು.
ಜಿಲ್ಲಾ ಕಾಂಗ್ರೆಸ್ ಎಸ್ ಸಿ ಘಟಕದ ಅಧ್ಯಕ್ಷ ಎಂ ಲೋಕೇಶ್ ಮಾತನಾಡಿ ಸ್ತ್ರೀಯರನ್ನು ಸಮಾನವಾಗಿ ಗೌರವಿಸಿ ಸಮಯವನ್ನು ಸರಿಯಾಗಿ ಪಾಲಿಸಿ ಎಂದು ರಾಷ್ಟ್ರಕವಿ ಕುವೆಂಪು ಸಂದೇಶ ನೀಡಿದ್ದಾರೆ. ಈ ಸಂದೇಶ ವನ್ನು ಪ್ರತಿಯೊಬ್ಬರು ಪಾಲಿಸಬೇಕು ಎಂದು ತಿಳಿಸಿದರು.ನಿರ್ವಾಹಕ ಮಹೇಶ್ ಮುಜರಾಯಿ ಇಲಾಖೆ ಕಾವ್ಯ ತಾಲೂಕು ಕಚೇರಿ ಸಿಬ್ಬಂದಿ ಉಪಸ್ಥಿತರಿದ್ದರು.