ಭಾರತದಲ್ಲಿ ಉತ್ಪಾದನಾ ಸಂಸ್ಕೃತಿಯನ್ನು ಹೆಚ್ಚಿಸುವ ಸಲುವಾಗಿ ಫೆಬ್ರವರಿ 12ನೇ ತಾರೀಖಿನಂದು ರಾಷ್ಟ್ರೀಯ ಉತ್ಪಾದನಾ ದಿನವನ್ನಾಗಿ ರಾಷ್ಟ್ರೀಯ ಉತ್ಪಾದನಾ ಕೌನ್ಸಿಲ್ನವರು ಆಚರಿಸಲು ಆರಂಭಿಸಿದರು. 1958ರಲ್ಲಿ ಭಾರತದ ಕೈಗಾರಿಕಾ ಮಂತ್ರಾಲಯವು ಈ ಕೌನ್ಸಿಲ್ನ್ನು ಆರಂಭಿಸಿದ್ದು ಇದರಲ್ಲಿ ಎಲ್ಲ ಪಕ್ಷಗಳ ಸದಸ್ಯರಿಂದ ಕೂಡಿದ ಹಾಗೂ ಲಾಭರಹಿತ ಸಂಸ್ಥೆಯಾಗಿದ್ದು ಎನ್ಪಿಸಿಗೆ ಮೂಲ ಪ್ರೇರಣೆ ಏಷಿಯನ್ ಪ್ರೊಡಕ್ಟಿವ್ ಕೌನ್ಸಿಲ್ ಆಗಿದೆ.
ದೇಶದ ಆರ್ಥಿಕ ಅಭಿವೃದ್ಧಿ ಇಲ್ಲಿಯ ಉದ್ಯಮಗಳಲ್ಲಿ ಉತ್ಪಾದನೆ ಹೆಚ್ಚಿಸಿ ಹೊಸ ತಂತ್ರಜ್ಞಾನ ಹಾಗೂ ಪ್ರಸ್ತುತ ಅವಶ್ಯಕತೆಗಳನ್ನು ಆಧರಿಸಿ ಉತ್ಪಾದಕತೆಯನ್ನು ಹೆಚ್ಚಿಸಿಕೊಳ್ಳುವುದರ ಮೂಲಕ ಪಡೆಯಲಾಗುತ್ತದೆ. ಹೀಗೆ 1958ರಲ್ಲಿ ಸ್ಥಾಪಿತವಾದ ಎನ್ಪಿಸಿಯು ದೇಶದ ಜನರಲ್ಲಿ ಕೈಗಾರಿಕೆಗಳ ಮತ್ತು ಇತರೇ ಉದ್ಯಮಗಳ ಮಹತ್ವವನ್ನು ತಿಳಿ ಹೇಳುವ ಸಲುವಾ 1962ರಿಂದ ಈ ರಾಷ್ಟ್ರೀಯ ಉತ್ಪಾದನಾ ವಾರವನ್ನು ಫೆಬ್ರವರಿ ತಿಂಗಳ 12ನೇ ತಾರೀಖಿನಿಂದ 18ನೇ ತಾರೀಖಿನವರೆಗೂ ನಡೆಸಲು ಪ್ರಾರಂಭಿಸಿದರು.
ಆರಂಭದಲ್ಲಿ ಪ್ರಾಥಮಿಕವಾಗಿ ಕೈಗಾರಿಕೆಗಳು ಹಾಗೂ ಉದ್ಯಮಗಳ ಹೆಚ್ಚಳಕ್ಕಾಗಿ ಮೀಸಲಿದ್ದ ಥೀಮ್ಗಳು ಉದ್ಯಮಗಳು ಬೆಳೆಯುತ್ತಾ ಬೇರೆ ಬೇರೆ ಘೋಷವಾಕ್ಯ ಹಾಗೂ ಗುರಿಯನ್ನು ಇಟ್ಟುಕೊಂಡು ಆಚರಿಸುತ್ತಾ ಬಂದಿದ್ದಾರೆ. ಮೊದಲಿಗೆ ಉದ್ಯಮಗಳ ಆರಂಭ ಮತ್ತು ಬೆಳವಣಿಗೆಗೆ ಮೀಸಲಾಗಿದ್ದ ಗುರಿ ಕಾಲಾಂತರದಲ್ಲಿ ವಿಶೇಷ ಗುರಿಗಳನ್ನು ಹೊಂದಿದವು. ಇತ್ತೀಚಿಗೆ ಸೃಜಶೀಲ, ಕ್ರಿಯಾತ್ಮಕ, ತಾಂತ್ರಿಕ ಹಾಗೂ ಮಾನವ ಸಂಪನ್ಮೂಲಗಳ ಗುರಿಗಳನ್ನಿಟ್ಟುಕೊಂಡು ಘೋಷ ವಾಕ್ಯದೊಂದಿಗೆ ಗುರಿ ಸಾಧಿಸುತ್ತಾ ಬರುತ್ತಿದ್ದಾರೆ.
ಎನ್ಪಿಡಿಯ ಪ್ರಯಾಸವು ಮಾಹಿತಿಯನ್ನು ಮತ್ತು ಇದರ ಕುರಿತಾದ ಶಿಕ್ಷಣವನ್ನು ನೀಡಿ ಉತ್ಪಾದನೆಯಲ್ಲಿ ಅಭಿವೃದ್ಧಿಯನ್ನು ತರುವುದರ ಜೊತೆಗೆ ಸಮುದಾಯಗಳಲ್ಲಿ ಹಾಗೂ ವೈಯಕ್ತಿಕವಾಗಿ ಜನರು ಉದ್ಯಮವನ್ನು ಆರಂಭಿಸಿ ಉತ್ತಮ ಉತ್ಪನ್ನಗಳನ್ನು ತಯಾರಿಸಿ ಅದರ ಮೂಲಕ ಯಶಶ್ಸು ಪಡೆಯುವಲ್ಲಿ ಸಹಾಯಕವಾಗಿದೆ, ಈ ವರ್ಷದ ಘೋಷವಾಕ್ಯ ” ಕೃತಕ ಬುದ್ಧಿಮತ್ತೆ (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್) – ಆರ್ಥಿಕ ಅಭಿವೃದ್ಧಿಗೆ ಉತ್ಪಾದನೆಯ ಕಾರ್ಯಕ್ಕೆ ಇಂಜಿನ್ನ ಕೆಲಸ ಮಡುತ್ತದೆ” ಎಂಬುದಾಗಿದೆ.
ಪ್ರಸ್ತುತ ತಂತ್ರಜ್ಞಾನ ಹಾಗೂ ಕ್ರಿಯಾತ್ಮಕ ಅಭ್ಯಾಸಗಳನ್ನು ಅಳವಡಿಸಿ ಕೊಂಡು ಉತ್ಪಾದನೆಯನ್ನು ಹೆಚ್ಚಿಸಿಕೊಂಡು ನಮ್ಮ ದೇಶದ ಮತ್ತು ಆರ್ಥಿಕ ಅಭಿವೃದ್ಧಿಗೆ ನಮ್ಮ ಕೊಡುಗೆ ಕೊಡುವ ಮಹತ್ವವನ್ನು ಸಾರುವ ಈ ಥೀಮ್ ಕೃತಕ ಬುದ್ಧಿಮತ್ತೆಯ ಬಗೆಗೆ ಮಾಹಿತಿ ಹಾಗೂ ಅದನ್ನು ಉಪಯೋಗಿಸಿಕೊಂಡು ನಮ್ಮ ಉತ್ಪಾದನಾ ಸಾಮಥ್ರ್ಯವನ್ನು ಹೆಚ್ಚಿಸಿಕೊಳ್ಳಲು ಪ್ರೋತ್ಸಾಹಿಸುತ್ತದೆ.
ಉತ್ಪಾದನೆಯಲ್ಲಿ ಹೆಚ್ಚಳವಾಗುವುದರಿಂದ ಉತ್ಪಾದನಾ ದಿನದ ಮಹತ್ವ ಹೆಚ್ಚುತ್ತದೆ. ಉತ್ಪಾದನೆಯು ಹೆಚ್ಚು ಮತ್ತು ಪರಿಣಾಮಕಾರಿಯಾದಾಗ ಉದ್ಯೋಗದ ಅವಕಾಶಗಳು ಹೆಚ್ಚಾಗುತ್ತದೆ. ಉತ್ಪಾದನೆಯು ಹೆಚ್ಚಾದಂತೆ ದೇಶದ ಆರ್ಥಿಕತೆಗೆ ದೊಡ್ಡ ಕೊಡುಗೆಯಾಗುತ್ತದೆ, ಬಹಳಷ್ಟು ವಲಯಗಳಲ್ಲಿ ವಿಶೇಷವಾದ ಸವಲತ್ತುಗಳನ್ನು ಪರಿಚಯಿಸಲು ಹೊಸ ಹೊಸ ತಂತ್ರಜ್ಞಾನವನ್ನು ಅಳವಡಿಸಿ ಆಧುನಿಕ ಸೇವೆಗಳನ್ನು ಪಡೆಯಲು ಅನುಕೂಲವಾಗುತ್ತದೆ ಇದರಿಂದ ಜನರ ಜೀವನದ ಗುಣಮಟ್ಟವೂ ಹೆಚ್ಚುತ್ತದೆ.
ಹೆಚ್ಚು ಪ್ರಮಾಂಣದ ಕೌಶಲ್ಯಾಭಿವೃದ್ಧಿ, ಶಿಕ್ಷಣ, ಆರೋಗ್ಯ ರಕ್ಷಣೆಯ ಕಡೆಗೆ ಗಮನ ಕೊಡುವುದರಿಂದ ಉತ್ತಮ ಗುಣಮಟ್ಟದ ಕೆಲಸವನ್ನು ಹೆಚ್ಚು ಪರಿಣಾಮಕಾರಿಯಾದ ಕೆಲಸಗಾರರನ್ನು ಉದ್ಯಮದಲ್ಲಿ ಪಾಲದಾರರನ್ನಾಗಿ ಮಾಡಿಕೊಳ್ಳಲು ಸಹಾಯಕವಾಗುತ್ತದೆ. ಇದರಿಂದ ಜಾಗತೀಕರಣಕ್ಕೆ ಅನುಕೂಲವಾಗಿ ನಮ್ಮ ದೇಶದ ಉತ್ಪನ್ನಗಳು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿಯೂ ಸ್ಪರ್ಧೆ ಮಾಡಲು ಅನುಕೂಲವಾಗುತ್ತದೆ. ಒಟ್ಟಾರೆ ದೇಶದ ಮತ್ತು ಪ್ರಜೆಗಳ ಸರ್ವಾಂಗೀಣ ಬೆಳವಣಿಗೆಯ ಉದ್ದೇಶದಿಂದ ರಾಷ್ಟ್ರೀಯ ಉತ್ಪಾದನಾ ದಿನ / ವಾರವನ್ನು ಆಚರಿಸಲಾಗುತ್ತದೆ.
-ಮಾಧುರಿ ದೇಶಪಾಂಡೆ, ಬೆಂಗಳೂರು