ಈ ದಿನ ಕಾರ್ಮಿಕರರಿಗೆ ಸಂಬಂಧಿಸಿದ ದಿನವಾಗಿದೆ. ಸಾಮಾನ್ಯವಾಗಿ ದೇಶದ ಎಲ್ಲ ವಿಷಯಗಳಿಗೆ ಸಂಬಂಧಿಸಿದಂಥೆ ಸುರಕ್ಷತೆಯ ಬಗೆಗೆ ಎಚ್ಚರಿಕೆಯಿಂದ ಇರುವುದರ ಜೊತೆಗೆ ಮುಖ್ಯವಾಗಿ ಕೆಲಸದ ಸ್ಥಳದಲ್ಲಿ ಎಚ್ಚರಿಕೆಯಿಂದಿರುವುದರ ಬಗೆಗೆ ತಿಳುವಳಿಕೆಯನ್ನು ನೀಡಲು ಭಾರತೀಯ ರಾಷ್ಟ್ರೀಯ ಸುರಕ್ಷತಾ ಕೌನ್ಸಿಲ್, ಇದೊಂದು ಅರೆ ಸರಕಾರಿ ಲಾಭರಹಿತ ಸಂಸ್ಥೆ ಇವರು 1966ರಲ್ಲಿ ಕಾರ್ಮಿಕ ಸಚಿವಾಲಯದಿಂದ ಆರಂಭಿಸಲ್ಪಟ್ಟಿತು.
ಈ ಸಂಸ್ಥೆಯು 1972ರಲ್ಲಿ ಮಾರ್ಚ 4ನೇ ತಾರೀಖಿನಂದು ಮೊದಲ ಬಾರಿಗೆ ರಾಷ್ಟ್ರೀಯ ಸುರಕ್ಷತಾ ದಿನವನ್ನು ಆಚರಿಸಲಾಯಿತು.
ದೇಶದಲ್ಲಿ ಎಲ್ಲ ವಿಷಯಗಳಲ್ಲೂ ಸುರಕ್ಷತೆಯು ಮಹತ್ವವನ್ನು ಪಡೆಯುತ್ತದೆ. ಅರ್ಥ ಜನರು ರೈತರಾದರೆ ಇನ್ನೂ ಹೆಚ್ಚಿನ ಜನರು ಕಾರ್ಮಿಕರು ಮತ್ತು ಇತರೇ ಕೆಲಸಗಳಲ್ಲಿ ತೊಡಗಿಸಿಕೊಂಡವರು ಅದಕ್ಕೆ ಕೆಲಸದ ಸ್ಥಳದ ಸುರಕ್ಷತೆ ಬಹಳ ಮಹತ್ವವನ್ನು ಪಡೆಯುತ್ತದೆ.
ಆದ್ದರಿಂದ ಈ ರೀತಿಯಲ್ಲಿ ಕೆಲಸದ ಸ್ಥಳದ ಅಪಾಯ ಗುರುತಿಸಿ ಸುರಕ್ಷತೆಯನ್ನು ಕಾಪಾಡಿಕೊಳ್ಳುವ ಸಲುವಾಗಿ ಆಡಳಿತ ವರ್ಗದವರಿಗೂ ಸಿಬ್ಬಂದಿಗಳಿಗೂ ತಿಳುವಳಿಕೆಯನ್ನು ನೀಡಿ ಉತ್ಪಾದನೆಯನ್ನು ದ್ವಿಗುಣಗೊಳಸಬಹುದು, ನೀತಿ ನಿಯಮಗಳನ್ನು ಅನುಸರಿಸುವುದರಿಂದ ಸಂಸ್ಥೆಯಲ್ಲಿ ಅನುಶಾಸನಬದ್ಧವಾಗಿ ಕಾನೂನಾತ್ಮಕವಾಗಿ ಸುರಕ್ಷತೆಯನ್ನು ಕಾಪಾಡಿಕೊಳ್ಳಬಹುದು,
ಆಕಸ್ಮಿಕವಾಗಿ ಬರುವ ಅಪಾಯಗಳಿಗೆ ಸಮರ್ಥವಾಗಿ ಎದುರಿಸುವ ತಯಾರಿ ಇದ್ದರೆ ಉಂಟಾಗಬಹುದಾದ ಅಪಾಯದಲ್ಲಿ ಸಿಬ್ಬಂದಿಗಳು ಸುರಕ್ಷಿತವಾಗಿ ಹೊರಬರಲು ಮತ್ತು ಕಡಿಮೆ ಪ್ರಮಾಣದ ಹಾನಿಯನ್ನು ಹೊಂದಬಹುದೆಂದು ಈ ರೀತಿಯ ಆಚರಣೆಯ ಮೂಲಕ ಎಲ್ಲರಿಗೂ ತಿಳಿಸಿ ಕೊಡಬಹುದಾಗಿದೆ.
ರಾಷ್ಟ್ರೀಯ ಸುರಕ್ಷತಾ ಕೌನ್ಸಿಲ್ನವರು ದಿನದ ಆಚರಣೆಯನ್ನು ವಿವಿಧ ಉದ್ಯಮಗಳ ಆಡಳಿತ ವರ್ಗದವರಿಗೆ ಸಿಬ್ಬಂದಿಗಳಿಗೆ ಕಾರ್ಯಾಗಾರ, ಸಮ್ಮೇಳನ, ಸ್ಪರ್ಧೆ, ತರಬೇತಿ ಕಋಯಕ್ರಮ, ಸುರಕ್ಷತೆಯ ಸಲುವಾಗಿ ಬದ್ಧತೆಯನ್ನು ಪಡೆಯುವುದು, ಸುರಕ್ಷತೆ ಸಲುವಾಗಿ ವ್ಯಾಯಾಮಗಳನ್ನು ವಿವಿಧ ಉದ್ಯಮಗಳು ವಲಯದಲ್ಲಿ ಅನೇಕ ಸಂಶ್ಥೆಗಳಲ್ಲಿ ಆಯೋಜಿಸಿ ಸುರಕ್ಷತೆಯ ಮಹತ್ವವನ್ನು ತಿಳಿಸುತ್ತಾರೆ. ಸುರಕ್ಷಿತವಾಗಿ ಬದುಕಲು ಪ್ರೇರೆಪಿಸುತ್ತಾರೆ.
ಈ ಬಾರಿಯ ರಾಷ್ಟ್ರೀಯ ಸುರಕ್ಷತಾ ದಿನದ ಥೀಮ್” ಸುರಕ್ಷತೆಯ ಕಡೆಗೆ ಗಮನಸ ಹರಿಸಿ ಪರಿಸರ,ಸಾಮಾಜಿಕ ಮತ್ತು ಆಡಳಿತಾತ್ಮಕ ನಾಯಕತ್ವದಲ್ಲಿ ಶ್ರೇಷ್ಠತೆಯನ್ನು ಪಡೆಯುವುದು” (ಇಎಸ್ಜಿ)” ಎಂದಾಗಿದೆ. ಮತ್ತು “ಯಾವಾಗಲೂಝಸುರಕ್ಷತೆ ಮೊದಲು” ಎನ್ನುವುದು 2024ರ ಘೋಷವಾಕ್ಯವಾಗಿದೆ. ಯಾವಾಗಲೂ ಎಚ್ಚರದಿಂದ ಇರಿ, ಅಪಾಯ ಅಪಘಾತಗಳು ನೋವುಂಟು ಮಾಡುತ್ತವೆ, ಸುರಕ್ಷಿತವಾಗಲು ಯೋಚಿಸಿ, ಸುರಕ್ಷಿತವಾಗಿ ಕೆಲಸ ಮಾಡಿರಿ”.
ಸುರಕ್ಷತೆಯ ಬಗೆಗೆ ಕೇವಲ ಕೆಲಸಗಾರರು ಮಾತ್ರವಲ್ಲದೇ ಸಾಮಾನ್ಯ ಜನರಿಗೂ ತಿಳುವಳಿಕೆಯನ್ನು ನೀಡಬೇಕು ಏಕೆಂದರೆ ಅಪಾಯವನ್ನುಂಟು ಮಾಡುವ ವಿಷಯಗಳ ತಿಳುವಳಿಕೆ ಇರದೇ ಹೋದರೆ ಯಾರಿಂದ ಬೇಕಾದರೂ ತೊಂಧರೆ ಸಂಭವಿಸದ ಬಹುದಾಗಿದೆ ಹೀಗಾಗಿ ಸಾರ್ವಜನಿಕರಿಗೆ ಕೂಡ ಪರಿಸರ, ಸಮಾಜ ಹಾಗೂ ನಮ್ಮ ದೇಶದ ಆದಾಯದ ಮೂಲವಾದ ಸ್ಥಳಗಳ ಸುರಕ್ಷತೆಯ ಮಹತ್ವವನ್ನು ಸಮಸ್ತ ದೆಶವಾಸಿಗಳಿಗೆ ತಿಳಿಸಬೇಕು ಅದಕ್ಕೆಂದು ಎನ್ ಎಸ್ ಜಿಯು ಅನೇಕ ಕಾರ್ಯಕ್ರಮಗಳನ್ನು ಸಿದ್ಧಪಡಿಸಿಕೊಂಡು ಜನಸಾಮಾನ್ಯರನ್ನು ತಲುಪಿ ಅವರಿಗೆ ಮಾಹಿತಿ ನೀಡುತ್ತಿದೆ.
ನಾವುಗಳು ಕೂಡ ನಮಗೆ ತಿಳಿದ ಸುರಕ್ಷತಾ ವಿಷಯಗಳನ್ನು ಇತರರೊಂದಿಗೆ ವಿಷಯ ವಿನಿಯೋಗ ಮಾಡಿಕೊಂಡು ರಾಷ್ಟ್ರೀಯ ಸುರಕ್ಷತಾ ದಿನವನ್ನು, ನಾವು ನಮ್ಮವರು ಸುರಕ್ಷಿತವಾಗಿರಲು ಕೊಡುಗೆಯನ್ನು ಕೊಡಬಹುದು.
ಮಾಧುರಿ ದೇಶಪಾಂಡೆ, ಬೆಂಗಳೂರು