ಕನಕಪುರ: ವಿದ್ಯಾರ್ಥಿಗಳ ಜೀವನದಲ್ಲಿ ವಿಜ್ಞಾನ ಅತ್ಯಂತ ಪ್ರಮುಖವಾದ ವಿಷಯವಾಗಿದೆ ಎಂದು ಶಿಕ್ಷಣ ಇಲಾಖೆ ಸಂಯೋಜಕ ಮಹೇಶ್ ತಿಳಿಸಿದರು.ನಗರದ ಅಂಬೇಡ್ಕರ್ ಭವನದಲ್ಲಿ ಶಿಕ್ಷಣ ಪೌಂಡೇಶನ್ ಹಾಗೂ ಬ್ರಿಲಿಯೋ ಸಂಸ್ಥೆ ವತಿಯಿಂದ ಆಯೋಜಿಸಿದ್ದ.
ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಉದ್ಘಾಟಿಸಿಮಾತನಾಡಿ ಅವರು ತಾಲ್ಲೂಕಿನ ಆಯ್ದ ಸುಮಾರು 67 ಶಾಲೆಗಳಿಂದ ವಿಜ್ಞಾನ ವಿಷಯದಲ್ಲಿ ವಿಶೇಷ ಆಸಕ್ತಿವುಳ್ಳ ವಿದ್ಯಾರ್ಥಿಗಳು ಬಂದು ಇಲ್ಲಿ ಆಯೋಜಿಸಿರುವ ವಿಜ್ಞಾನ ಮಾದರಿ, ಪೋಸ್ಟರ್ ತಯಾರಿಕೆ, ಕನ್ನಡ ನುಡಿ ಬರವಣಿಗೆ ಹಾಗೂ ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸಿರುವುದು ತುಂಬಾ ಸಂತೋಷದ ವಿಷಯವಾಗಿದೆ,
ಈ ಆಧುನಿಕ ಜಗತ್ತಿನಲ್ಲಿ ವಿಜ್ಞಾನ-ತಂತ್ರಜ್ಞಾನ ಕಲಿಕೆ ಪಾಲಿಗೆ ಮಹತ್ವದ ಸಾಧನ ವಾಗಿದೆ, ವ್ಯಾಸಂಗದಲ್ಲಿ ವಿಜ್ಞಾನವಿಷಯವನ್ನ ಪ್ರೀತಿಸಿದವರ ಸಂಪಾದನೆಯ ದಾರಿ ಮತ್ತು ಅವರ ಜೀವನ ಶೈಲಿಯು ಬೇರೆ ರೀತಿ ಇರುತ್ತದೆ ಎಂಬುದು ಗಮನಾರ್ಹ ಎಂದು ತಿಳಿಸಿದರು.
ಬ್ರಿಲಿಯೋ ಸಂಸ್ಥೆಯು ಶಾಲಾಮಕ್ಕಳ ವಿದ್ಯಾಭ್ಯಾಸಕ್ಕೆ ಲ್ಯಾಪ್ ಟಾಪ್, ಅಭ್ಯಾಸ ಪುಸ್ತಕಗಳನ್ನು ಮತ್ತು ವಿಜ್ಞಾನ ಪರಿಕರಗಳನ್ನು ನೀಡಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನು ಆಚರಿಸುತ್ತಿರುವುದು ಶ್ಲಾಘನಿಯವಾದುದು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಬ್ರಿಲಿಯೋ ಸಂಸ್ಥೆಯ ವ್ಯವಸ್ಥಾಪಕ ಡಾ.ಮೇಘನಾ ಶಶಿಧರ್ ಮಾತನಾಡಿ ಬ್ರಿಲಿಯೋದ ಸಿಇಓ ಆದ ರಾಜು ಮೋದಿಯರವರು ರಾಜಸ್ಥಾನದ ಜೈಪುರ್ನ ಒಂದು ಸಣ್ಣ ಹಳ್ಳಿಯಲ್ಲಿ ಜನಿಸಿ ಸರ್ಕಾರಿ ಶಾಲೆಯಲ್ಲಿ ತಮ್ಮ ವಿದ್ಯಾಭ್ಯಾಸ ಮುಗಿಸಿಮುಂದೆ ಇಂಜಿನಿಯರಿಂಗ್ ಪದವಿ ಮಾಡಿ ಬ್ರಿಲಿಯೊ ಐ.ಟಿ ಕಂಪನಿ ಸ್ಥಾಪಿಸಿ.
ಉದ್ಯೋಗ ನೀಡುವುದರ ಜೊತೆಗೆ ಸಮಾಜಮುಖಿ ಕೆಲಸ ಮಾಡುತ್ತಿದ್ದು ಪ್ರಸ್ತುತ 1000 ಸರ್ಕಾರಿ ಶಾಲೆಗಳ ಜೊತೆ ಕೆಲಸ ಮಾಡುತ್ತಿದ್ದು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಶಾಲೆಯನ್ನು ತಲುಪಲು ಗುರಿಯನ್ನು ಹೊಂದಲಾಗಿದೆ, ನಾವುನೀಡುವ ಸಂಪನ್ಮೂಲಗಳನ್ನು ಶಿಕ್ಷಕರು ಮತ್ತು ಮಕ್ಕಳು ಹೊಂದಾಣಿಕೆಯಿಂದ ಕಲಿತರೆ ಮಾತ್ರ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ ಎಂದು ತಿಳಿಸಿದರು.
ಡೈರೆಕ್ಟರ್ ಪಾರ್ಟ್ನರ್ಶಿಪ್ಸ್ ಶಿಕ್ಷಣ ಫೌಂಡೇಶನ್ ನವೀನ್ ಚಿಕ್ಕಣ್ಣ ಮಾತನಾಡಿ ಮಕ್ಕಳಿಗೆ ಏಕೆ, ಏನು, ಯಾವಾಗ ಎಂಬ ಪ್ರಶ್ನಿಸುವ ಕುತೂಹಲ ಮೂಡುತ್ತದೆಯೋ ಅದರ ಲ್ಲಿಯೇ ವಿಜ್ಞಾನ ಅಡಗಿರುತ್ತದೆ ಶಿಕ್ಷಣ ಎನ್ನುವುದು ಎಲ್ಲಾ ವಿಷಯಗಳ ಮಿಶ್ರಣವಾಗಿದ್ದು ಪ್ರತಿದಿನ ಶುರುವಾಗುವುದ ರಲ್ಲಿಯೂ ವಿಜ್ಞಾನವಿದ್ದು ದಿನ ಮುಗಿಯುವುದರಲ್ಲಿಯೂ ವಿಜ್ಞಾನ ಅಡಗಿದೆ ಆದರೆ ಅದನ್ನು ನಾವು ಆಳವಾಗಿ ಅಭ್ಯಾಸಿಸಬೇಕು ಎಂದು ತಿಳಿಸಿದರು.
ಶಿಕ್ಷಣ ಪೌಂಡೇಶನ್ನ ರಜತ್ ಕುಮಾರ್, ಸಂಜೀವ ತೇಜಸ್ವಿನಿ, ಸ್ಟಾಲಿನ್ ಜಗನ್, ರಾಜೇಶ್ ಟಿ.ಡಿ , ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಉಮೇಶ್ ಬಾಬು, ಶಿಕ್ಷಕರ ಸಂಘದ ನಟರಾಜ್ ವೈ. ಸಿ, ರಮೇಶ್ ಸರ್ಕಾರಿ ನೌಕರರ ಸಂಘದ SP ಗೌಡ, ಸಿ.ಆರ್.ಪಿ. ಗಳಾದ ಮಂಜುನಾಥ, ರವೀಂದ್ರ ದೊಡ್ಡಮನಿ, ಶಿವನಂಜಪ್ಪ , ಶಿವಕುಮಾರ್, ಅಶ್ವಿನಿ, ಹೊನಗಂಗಪ್ಪ 67 ಶಾಲೆಯ ಶಿಕ್ಷಕರು ಮತ್ತು ವಿದ್ಯಾರ್ಥಿ ಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.