ಬೆಂಗಳೂರು: ತಿಪಟೂರು ಸ್ಪೋಟ್ರ್ಸ್ ಕ್ಲಬ್ಆಶ್ರಯದಲ್ಲಿ ಇಂದಿನಿಂದ ರಿಂದ 17ರವರೆಗೆ 5 ದಿನಗಳ ಕಾಲ ರಾಷ್ಟ್ರಮಟ್ಟದ ಸಬ್ ಜ್ಯೂನಿಯರ್ಸ್ ಬಾಲಕ-ಬಾಲಕಿಯರ ಖೋಖೋ ಪಂದ್ಯಾವಳಿ ನಡೆಯಲಿದೆ.ಇದೇ ಮೊದಲ ಬಾರಿಗೆ ತಿಪಟೂರಿನಲ್ಲಿ ನಡೆಯುತ್ತಿರುವ ರಾಷ್ಟ್ರಮಟ್ಟದ ಸಬ್ ಜ್ಯೂನಿಯರ್ಸ್ ಬಾಲಕ-ಬಾಲಕಿಯರ ಖೋಖೋ ಪಂದ್ಯಾವಳಿ ಇದಾಗಿದೆ. 33ನೇ ರಾಷ್ಟ್ರೀಯ ಚಾಂಪಿಯನ್ಷಿಪ್ ಪಂದ್ಯಾವಳಿಯ ಯಶಸ್ವಿಗೆ ಕಳೆದ ಎರಡು ಮೂರು ತಿಂಗಳಿಂದ ತಿಪಟೂರು ಸ್ಪೋಟ್ರ್ಸ್ ಕ್ಲಬ್ ಅಧ್ಯಕ್ಷರಾದ ನಿವೃತ್ತ ಪೊಲೀಸ್ ಅಧಿಕಾರಿ ಲೋಕೇಶ್ವರ ಅವರ ನೇತೃತ್ವದಲ್ಲಿ ಭರದ ಸಿದ್ಧತೆ ನಡೆದಿದೆ.
ಪಂದ್ಯಾವಳಿ ಯಶಸ್ಸಿಗಾಗಿ ತಿಪಟೂರು ಕಲ್ಪತರು ಕ್ರೀಡಾಂಗಣದಲ್ಲಿ 5 ಅಂಕಣಗಳನ್ನು ಸಿದ್ಧಪಡಿಸಲಾಗಿದೆ. 2 ಅಂಕಣಗಳಲ್ಲಿ ನಡೆಯುವ ಪಂದ್ಯಾವಳಿಗಳು ಹೊನಲು ಬೆಳಕಿನಲ್ಲಿ ನಡೆಯಲು ಸಕಲ ಸಿದ್ದತೆ ಮಾಡಲಾಗಿದೆ. ಹೊರರಾಜ್ಯಗಳಿಂದ ಬರುವ ಕ್ರೀಡಾಪಟುಗಳ ಆರೋಗ್ಯ, ಸುರಕ್ಷತೆ, ವಸತಿಮತ್ತಿತರ ಸೌಲಭ್ಯಗಳನ್ನು ಕಲ್ಪಿಸಲಾಗುವುದು.
ದಿನಾಂಕ : 13.12.2023 ರ ಬುಧವಾರ ಸಂಜೆ 6.00 ಗಂಟೆಗೆ ಪಂದ್ಯಾವಳಿಗಳ ಉದ್ಘಾಟನೆಯನ್ನು ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಉದ್ಘಾಟಿಸಲಿದ್ದಾರೆ. ಕ್ರೀಡಾ ಸಚಿವ ಬಿ.ನಾಗೇಂದ್ರ, ವಿಧಾನ ಪರಿಷತ್ ಸದಸ್ಯ ಹಾಗೂ ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಕೆ.ಗೋವಿಂದರಾಜು, ರಾಷ್ಟ್ರೀಯ ಖೋಖೋ ಫೆಡರೇಷನ್ನ ಸುದಾಂಷು ಮಿತ್ತಲ್, ಎಂ.ಎಸ್ತ್ಯಾಗಿ ಈ ಸಂದರ್ಭದಲ್ಲಿ ಉಪಸ್ಥಿತರಿರುವರು.
ಶಾಸಕರಾದ ಕೆ.ಷಡಾಕ್ಷರಿ, ಮಾಜಿ ಸಚಿವರಾದ ಬಿ.ಸಿ.ನಾಗೇಶ್, ಶಾಸಕ ಹಾಗೂ ಮಾಜಿ ಸಚಿವ ಎ. ಮಂಜು, ಶಾಸಕರಾದ ಬಡಾ.ಹೆಚ್.ಡಿ. ರಂಗನಾಥ್, ರಾಜೇಂದ್ರ, ದರ್ಶನ್ ಪುಟ್ಟಣ್ಣಯ್ಯ, ಚಿಕ್ಕಬಳ್ಳಾಪುರದ ಎಸ್.ಕೆ.ವಿ ಟ್ರಸ್ಟ್ನ ಅಧ್ಯಕ್ಷರಾದ ನವೀನ್ ಕಿರಣ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಮಾಜಿ ಸಂಸದಎಸ್.ಪಿ ಮುದ್ದಹನುಮೇಗೌಡ, ಮಾಜಿ ಶಾಸಕರಾದ ಕಿರಣ್ಕುಮಾರ್, ಮಸಾಲಾ ಜಯರಾಂ, ಜಿಲ್ಲಾಧಿಕಾರಿ ಶ್ರೀನಿವಾಸ್, ಜಿಲ್ಲಾ ರಕ್ಷಣಾಧಿಕಾರಿ ಅಶೋಕ್ ಉಪಸ್ಥಿತರಿರುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ಖೋಖೋ ಅಸೋಸಿಯೇಷನ್ ಮತ್ತು ತಿಪಟೂರು ಸ್ಪೋಟ್ರ್ಸ್ ಕ್ಲಬ್ ಅಧ್ಯಕ್ಷರಾದ ಲೋಕೇಶ್ವರ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.