ನೆಲಮಂಗಲ: ಸತತವಾಗಿ ಎರಡು ವಾರ ಮೇಲ್ಪಟ್ಟು ಕೆಮ್ಮು ಜ್ವರ ತೂಕ ಕಡಿಮೆಯಾಗುವುದು ಸುಸ್ತು ಹಸಿವಾಗದಿರುವ ಲಕ್ಷಣ ಕಂಡುಬoದಲ್ಲಿ ಕೂಡಲೇ ಸರಕಾರಿ ಆಸ್ಪತ್ರೆಗೆ ಬಂದು ಕಫ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಸರಕಾರಿ ಆಸ್ಪತ್ರೆ ಅರೋಗ್ಯಸಹಾಯಕ ಕುಮಾರಸ್ವಾಮಿ ತಿಳಿಸಿದರು.
ಪಟ್ಟಣದ ಸುಭಾಷ್ ನಗರದಲ್ಲಿ ಆರೋಗ್ಯಮತ್ತು ಕುಟುಂಬ ಕಲ್ಯಾಣ ಇಲಾಖೆ ಜಿಲ್ಲಾ ಕ್ಷಯರೋಗ ನಿಯಂತ್ರಣ ಕೇಂದ್ರದ ಸಹಯೋಗದಲ್ಲಿ ರಾಷ್ಟ್ರೀಯ ಕ್ಷಯ ರೋಗ ನಿರ್ಮೂಲನೆ ಕಾರ್ಯಕ್ರಮ ದಡಿ ಕ್ಷಯರೋಗ ಪತ್ತೆ ಆಂದೋಲನದಲ್ಲಿ ಬಾಗವಹಿಸಿ ಮಾತನಾಡಿದರು.
ಕ್ಷಯ ರೋಗ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ ರೋಗ ಪತ್ತೇಯಾದ ಆರಂಭದಲ್ಲಿ ಸೂಕ್ತ ಚಿಕಿತ್ಸೆ ಪಡೆದರೆ ರೋಗ ಸಂಪೂರ್ಣ ಗುಣವಾಗಲಿದೆ ಎಂದರು.
ಈ ವರ್ಷ ತಾಲ್ಲೂಕಿನಲ್ಲಿ 350ಮಂದಿ ಗೇ ಕ್ಷಯ ರೋಗ ಕಾಣಿಸಿಕೊಂಡಿದ್ದು ಈ ಪೈಕಿ 242ಕ್ಕೂ ಹೆಚ್ಚು ಮಂದಿ ಗುಣ ಮುಖರಾಗಿದ್ದಾರೆ ಉಳಿಕೆ 108 ಮಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದರು ಸುಭಾಷ್ ನಗರ ಪಟೇಲ್ ಚನ್ನಪ್ಪ ಬಡಾವಣೆ ಎಂ ಜಿ ರಸ್ತೆ ಸೇರಿದಂತೆ ವಿವಿಧ ಬಡಾವಣೆ ಗಳಲ್ಲಿ ಜಾಗೃತಿ ಮೂಡಿಸಲಾಯಿತು.ಈ ಸಂದರ್ಭದಲ್ಲಿ ಹಿರಿಯ ಸಹಾಯಕ ಪುಟ್ಟರಂಗೇಗೌಡ ಮಹಿಳಾ ಆರೋಗ್ಯ ಸಹಾಯಕಿಯರಾದ ಮಂಜುಳಾ, ಇಂದುಮತಿ ಇದ್ದರು.