ಗುಂಡ್ಲುಪೇಟೆ: ಪಟ್ಟಣದ ನಿರ್ಮಲ ಕಾನ್ವೆಂಟ್ ನಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ನಿರ್ಮಲ ಕಾನ್ವೆಂಟ್ ಸಂಯುಕ್ತ ಆಶ್ರಯದಲ್ಲಿ ನಡೆದ ರಾಷ್ಟ್ರೀಯ ಯುವ ದಿನಾಚರಣೆಯ ಅಂಗವಾಗಿ ನಡೆದ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಯುವಕನೊಬ್ಬ ಕೊಲ್ಕತ್ತದ ಬೀದಿಯಲ್ಲಿ ನಡೆದು ಹೋಗುತ್ತಿದ್ದ ಇದ್ದಕ್ಕಿದ್ದಂತೆ ಜೋರಾದ ಶಬ್ದ ಕೇಳಿಸಿತು ಕುದುರೆ ಗಾಡಿಯಿಂದ ವೇಗವಾಗಿ ಧಾವಿಸುತ್ತಿದ್ದನ್ನು ನೋಡಿದನು ಕುದುರೆ ಎಷ್ಟು ವೇಗವಾಗಿ ಓಡಲು ಸಾಧ್ಯವೊ ಅಷ್ಟು ವೇಗವಾಗಿ ಓಡುತ್ತಿತ್ತು. ಕುದುರೆ ಬೆದರಿದಂತಿತ್ತು. ಗಾಡಿಯಲ್ಲಿ ಕುಳಿತಿದ್ದ ಮಹಿಳೆಯು ಬಹಳ ಹೆದರಿದಳು ಆಕೆ ಅಪಾಯದಲ್ಲಿದ್ದಳು ಏಕೆಂದರೆ ಗಾಡಿ ಯಾವಾಗ ಬೇಕಾದರೂ ಉರುಳಿ ಬೀಳಬಹುದಾಗಿತ್ತು.
ಯಾರು ಅವಳಿಗೆ ಸಹಾಯ ಮಾಡುವಂತಿರಲಿಲ್ಲ ಇದನ್ನು ಆ ಯುವಕ ನೋಡುತ್ತಿದ್ದ ಆತ ಬಹು ಧೈರ್ಯಶಾಲಿ ಕುದುರೆ ಹತ್ತಿರ ಬರುತ್ತಿದ್ದಂತೆ ಓಡಿ ತನ್ನ ಪ್ರಾಣಪಾಯವನ್ನು ಲೆಕ್ಕಿಸದೆ ಅದರ ಲಗಾಮನ್ನು ಹಿಡಿದು ಕುದುರೆ ನಿಲ್ಲುವಂತೆ ಹೇಳಿದ ಆತ ಯಾರು ಆತನೇ ನರೇಂದ್ರ ಮುಂದೆ ಸ್ವಾಮಿ ವಿವೇಕಾನಂದ ರೆಂದು ಪ್ರಸಿದ್ಧರಾದರು ಅವರಜನ್ಮ ದಿನವನ್ನು ರಾಷ್ಟ್ರೀಯ ಯುವ ದಿನ ವನ್ನಾಗಿ ಪ್ರಮುಖವಾಗಿ ಶಾಲೆ ಕಾಲೇಜಿನಲ್ಲಿ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ,
ಎಳಿ ಎದ್ದೆಳಿ ಗುರಿ ಮುಟ್ಟುವ ತನಕ ನಿಲ್ಲದಿರಿ ಎಂಬುವುದು ಸರ್ವಕಾಲಕ್ಕೂ ನೆನೆಯುವ ಯುವಕರನ್ನ ಒಳ್ಳೆಯ ಕೆಲಸಗಳಿಗೆ ಬಡಿದೆಚ್ಚರ ಮಾಡುವ ವಾಕ್ಯವಾಗಿದೆ ಹೀಗೆ ಇಂತಹ ಹಲವು ಕೊಡುಗೆಗಳಿಂದ ಅವರ ಸ್ಮರಣಾರ್ಥ ಅವರ ಕೊಡುಗೆ ಸೇವೆಗಳ ನೆನಪಿಗಾಗಿ ಸದಾ ಸ್ಪೂರ್ತಿಯಾಗಿರಲು ಅವರ ಜನ್ಮದಿನವನ್ನು ರಾಷ್ಟ್ರೀಯ ಯುವ ದಿನ ಎಂದು ಆಚರಣೆ ಮಾಡುತ್ತಾರೆಇವರು ಧರ್ಮ,ತತ್ವಶಾಸ್ತ್ರ, ಕಲೆ,ಇತಿಹಾಸ ಸೇರಿದಂತೆ ಎಲ್ಲಾ ವಿಷಯಗಳನ್ನು ಬಲ್ಲವರಾಗಿದ್ದರು ಎಂದು ಹೇಳಿದರು.
ಯುವಕರಿಗೆ ಹೆಚ್ಚಿನ ಆದ್ಯತೆ ನೀಡುತಿದ್ದ ಇವರು ಯುವಕರು ಯಾವುದರು ಕಡಿಮೆ ಇಲ್ಲ ಯುವಕರು ಮನಸ್ಸು ಮಾಡಿದರೆ ಏನನ್ನಾದರೂ ಸಾಧಿಸುವ ಇಚ್ಛಾಶಕ್ತಿಯುಳ್ಳ ಯುವ ಜನಾಂಗವನ್ನು ಸಶಕ್ತ ರಾಷ್ಟ್ರ ನಿರ್ಮಾಣ ಮಾಡಲು ಬಳಸಿಕೊಳ್ಳಬಹುದು ಎಂದು ಹೇಳುತಿದ್ದರು ಎಂದರು.
1893 ಸೆಪ್ಟೆಂಬರ್ 11ರಂದು ಅಮೆರಿಕದ ಚಿಕಾಗೋನಲ್ಲಿ ನಡೆದ ಧರ್ಮ ಸಮ್ಮೇಳನದಲ್ಲಿ ವಿವೇಕಾನಂದರು ಅಮೆರಿಕದ ಸೋದರ ಸೋದರಿಯರು ಎಂದು ಆತ್ಮೀಯತೆಯಿಂದ ಸಂಬೋಧಿಸಿದರು ಕೇಳಿದೊಡನೆಯೇ ಸಭೆ ತನ್ನ ಅಪಾರ ಮೆಚ್ಚುಗೆಯನ್ನು ಪ್ರಚಂಡ ಕರುಡತಾನ ಮಾಡುವ ಮೂಲಕ ಸಂತೋಷದಾಯಕವಾಗಿತ್ತು ಪುಟ್ಟ ಭಾಷಣ ಮಾಡಿ ಎಲ್ಲರ ಮನಸ್ಸು ಹಿಂದೂ ಧರ್ಮದ ಆಚಾರ ವಿಚಾರ ಮತ್ತು ಸಂಪ್ರದಾಯಗಳನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ತಿಳಿಸಿ ಎಲ್ಲಾ ಧರ್ಮಗಳಿಗಿಂತ ಹಿಂದೂ ಧರ್ಮಕ್ಕೆ ತನ್ನದೆ ಆದ ಹಿನ್ನೆಲೆಯಿದೆ ಎಂದು ಸಾರಿದ ಸಂತ ಸ್ವಾಮಿ ವಿವೇಕಾನಂದರು ಭಾರತಕ್ಕೆ ಮಾತ್ರವಲ್ಲದೆ ಪ್ರಪಂಚದ ಇತರ ದೇಶಗಳಿಗೂ ಸಹ ಅವರ ತತ್ವಗಳು ಬದುಕಿದ ಹಾದಿ ಯುವಜನತೆಗೆ ಪೂರ್ತಿದಾಯಕ ಎಂದು ತಿಳಿಸಿದರು.
ಬಲಿಷ್ಠ ಭಾರತದ ಕಟ್ಟಲು ಮಾನಸಿಕವಾಗಿ ಮತ್ತು ದೈಹಿಕವಾಗಿ ಸಮರ್ಥ ಯುವ ಪಡೆಯನ್ನು ಕಟ್ಟುವ ನಿಟ್ಟಿನಲ್ಲಿ ಸ್ವಾಮಿ ವಿವೇಕಾನಂದರು ಯುವಕರಿಗೆ ಮೊದಲ ಪ್ರಾಶಸ್ತ್ಯ ನೀಡುತಿದ್ದರು ಹಾಗಾಗಿ ಇವರ ಜನ್ಮದಿನವನ್ನು ರಾಷ್ಟ್ರೀಯ ಯುವ ದಿನಚಾರಣೆಯನ್ನು ಆಚರಣೆ ಮಾಡಲಾಗುತ್ತಿದೆ ಎಂದರು.
ಕಾರ್ಯಕ್ರಮವನ್ನುದಲ್ಲಿ ಪ್ರಧಾನ ಸಿವಿಲ್ ಮತ್ತು ಜೆ.ಎಂ.ಎಫ್. ಸಿ ನ್ಯಾಯಾಧೀಶರು ಹಾಗೂ ತಾಲ್ಲೂಕು ಕಾನೂನು ಸೇವಾ ಸಮಿತಿಯ ಸದಸ್ಯರಾದ ಶಿವಕುಮಾರ್. ಜಿ.ಜೆ, ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷರಾದ ಟಿ.ಎಸ್ ವೆಂಕಟೇಶ್, ಮತ್ತು ನಿರ್ಮಲ ಕಾನ್ವೆಂಟಿನ ಸಹ ಶಿಕ್ಷಕರಾದ ಸಿಸ್ಟರ್ ಸ್ವೀಡಲ್ ಉಪಸ್ಥಿತರಿದ್ದರು.