ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಸಿಂಗಾಪುರದಲ್ಲಿ ಆಯೋಜಿಸಿರುವ “ಎರಡನೇ ವಿಶ್ವ ಕನ್ನಡ ಹಬ್ಬ”ದಲ್ಲಿ ಭರತನಾಟ್ಯದಲ್ಲಿ ಹೆಚ್ಚು ಪ್ರಸಿದ್ದರಾಗಿ ನೂರಾರು ರಾಜ್ಯ, ರಾಷ್ಟ್ರಮಟ್ಟದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿರುವ,
ನಾಟ್ಯ ತರಂಗ ತಂಡದ ಪ್ರತಿಭೆಗಳಾದ ಸಮುದ್ಯತ, ಸಮನ್ವಿತಾ, ಚಂದನ, ಅರಭಿ, ಸ್ನೇಹ, ಭವಾನಿ, ಭವ್ಯ, ಜನಾರ್ಧನ ಹಾಗೂ ವರಧಾಂಭಿಕ ಇವರು ಭರತನಾಟ್ಯ ಪ್ರದರ್ಶನಕ್ಕೆ ಆಯ್ಕೆಯಾಗಿದ್ದು, ಇವರಿಗೆ ವಿಶ್ವ ಕನ್ನಡ ಹಬ್ಬದ ಸರ್ವಾಧ್ಯಕ್ಷ ಡಾ. ಸಿ. ಸೋಮಶೇಖರ್ ರವರು ಆದೇಶ ಪತ್ರ ನೀಡಿ ಅಭಿನಂದನೆಗಳನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಅಧ್ಯಕ್ಷ ಶಿವಕುಮಾರ್ ನಾಗರ ನವಿಲೆ ದಿನೇಶ್ ಜೋಶಿ, ಶ್ರೀ ಹರ್ಷ ಅಶೋಕ್ ನೀಲಾಪಂತ, ಗಾಯಕ ಮೋಹನ್ ಕೃಷ್ಣ, ನಟಿ ರೂಪಿಕಾ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.