ಚಳ್ಳಕೆರೆ: ಮದ್ಯ ಕರ್ನಾಟಕದ ಬುಡಕಟ್ಟು ಸಂಸ್ಕೃತಿ ಸಮುದಾಯ ಗಳ ಆರಾಧ್ಯ ದೈವ ಐತಿಹಾಸಿಕ ಹಿನ್ನೆಲೆ ಯ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೊಡ್ಡ ರಥೋತ್ಸವ ವು ಲಕ್ಷಾಂತರ ಭಕ್ತರ ಮದ್ಯ ಅದ್ದೂರಿ ವಿಜೃಂಭಣೆ ಯಿಂದ ನಡೆಯಿತು.ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ನಾಯಕನ ಹಟ್ಟಿಯಲ್ಲಿ ನೆಲೆಸಿರುವ “ಮಾಡಿದಷ್ಟು ನೀಡಿಬಿಕ್ಷೆ” ಎಂಬ ಕಾಯಕ ತತ್ವವನ್ನು ಜನರಿಗೆ ಬೋಧಿಸಿದ ಕಾಯಕ ಯೋಗಿ ಶ್ರೀ ಗುರು ತಿಪ್ಪೇಸ್ವಾಮಿಯವರ ಜಾತ್ರೆ ಪ್ರತಿವರ್ಷ ಚಿತ್ತ ನಕ್ಷತ್ರದಲ್ಲಿ ಧಾರ್ಮಿಕ ವಿಧಿ ವಿಧಾನ ದೊಂದಿಗೆ ರಥೋತ್ಸವ ನಡೆಯಿತು.
ಬೆಳಗ್ಗೆ ಯಿಂದಲೇ ಲಕ್ಷಾಂತರ ಭಕ್ತರು ಚಿತ್ರದುರ್ಗ ಜಿಲ್ಲೆ ಸೇರಿದಂತೆ ದಾವಣಗೆರೆ, ಬಳ್ಳಾರಿ,ತುಮಕೂರು, ನೆರೆಯ ಸೀಮಾಂದ್ರಪ್ರದೇಶ ದಿಂದ ಲು ಭಕ್ತರು ಶ್ರದ್ಧೆ, ಭಕ್ತಿ ಯಿಂದ ಬಿಸಿಲು, ಗಾಳಿ ಲೆಕ್ಕಿಸದೆ. ನಾಯಕನಹಟ್ಟಿಗೆ ಬಂದು ಶ್ರೀ ಗುರು ತಿಪ್ಪೇ ಸ್ವಾಮಿಯ ಒಳಮಠ, ಹೊರ ಮಠಗಳಿಗೆ ಭೇಟಿಕೊಟ್ಟು. ದೇವರ ದರ್ಶನವನ್ನು ಭಕ್ತ ರು ಮಾಡಿ. ಜಾತ್ರೆಯಲ್ಲಿ ಭಾಗವಹಿಸಿ. ದೇವರ ಕೃಪೆಗೆ ಪಾತ್ರರಾದರು.
ಮಧ್ಯಾಹ್ನ 3:45ಕ್ಕೆ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಶ್ರೀ ಗುರು ತಿಪ್ಪೇರುದ್ರ ಸ್ವಾಮಿಯ ಉತ್ಸಹ ಮೂರ್ತಿಯ ನ್ನು ದೊಡ್ಡ ರಥದಲ್ಲಿ ಇರಿಸಿ. ರಥಕ್ಕೆ ಚಾಲನೆ ಕೊಟ್ಟರು. ಈ ದೊಡ್ಡ ರಥವನ್ನು ತೇರು ಬೀದಿ ಯಿಂದ ಹೊರಮಠ ದ ಪಾದಗಟ್ಟೆಯ ವರೆಗೂ ಎಳೆಯಲಾಯಿತು. ಈ ಸಂದರ್ಭದಲ್ಲಿ ಸುಮಾರು ನಾಲ್ಕೈದು ಲಕ್ಷ ಜನ ಭಾಗ ವಹಿಸಿದ್ದರು.ನಾಯಕನಹಟ್ಟಿಯಲ್ಲಿ ಎಲ್ಲಿ ನೋಡಿದರೂ ಜನಸಾಗರವೇ ಕಾಣುತ್ತಿತ್ತು. ಶ್ರೀ ಗುರು ತಿಪ್ಪೇಶನಿಗೆ ಜೈಕಾರವನ್ನು ಭಕ್ತಿಯಿಂದ ಜನರು ಮಾರ್ಧನಿಸುವಂತೆ ಕೂಗುತ್ತಿದ್ದರು.
ರಥೋತ್ಸವ ಪ್ರಾರಂಭವಾಗುವ ಮುಂಚೆ ಸ್ವಾಮಿಯ ಮುಕ್ತಿ ಬಾವುಟ ಹರಾಜ್ ಪ್ರಕ್ರಿಯೆ ನಡೆಯಿತು. ಮುಕ್ತಿ ಬಾವುಟ ಹರಾಜಿನಲ್ಲಿ ಯೋಜನೆ ಹಾಗೂ ಸಾಂಕಿಕ ಖಾತೆ ಸಚಿವ ಮತ್ತು ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಮಂತ್ರಿ ಡಿ.ಸುಧಾಕರ್ ಸ್ವತಹ ಭಾಗವಹಿಸಿ. 61 ಲಕ್ಷಕ್ಕೆ ಮುಕ್ತಿ ಬಾವುಟವನ್ನು ಕೂಗಿ ಅಂತಿಮವಾಗಿ ಪಡೆದರು.
ರಥಚಲಿಸುವ ಬೀದಿಯಲ್ಲಿ ಭಕ್ತರ ದಣಿವಾರಿಸಲು ಕೆಲವು ಸಂಘ ಸಂಸ್ಥೆಗಳು, ಉಚಿತ ನೀರು ಮಜ್ಜಿಗೆ ವಿತರಣೆ ಮಾಡುತ್ತಿದ್ದರು. ಈ ಜಾತ್ರೆಯಲ್ಲಿ ಚಳ್ಳಕೆರೆ, ಚಿತ್ರದುರ್ಗ ಕೆಎಸ್ಆರ್ಟಿಸಿ ಸಂಸ್ಥೆ ನೂರಾರು ವಿಶೇಷ ಬಸ್ಸುಗಳನ್ನು ಭಕ್ತರಿಗೆ ಅನುಕೂಲವಾಗಲೆಂದು ನಿಯೋಜಿಸಿದ್ದರು.ಜಾತ್ರೆಯಲ್ಲಿ ಯಾವುದೇ ಆಯಿತಕರ ಘಟನೆ ನಡೆದಂತೆ ಖುದ್ದಾಗಿ ಚಿತ್ರದುರ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರ ಕುಮಾರ್ ಮೀನಾ ರವರು ಬಂದೋಬಸ್ತ್ ಉಸ್ತುವಾರಿ ವಹಿಸಿದ್ದರು.ಸಂಪೂರ್ಣ ಜಾತ್ರೆಯ ಉಸ್ತು ವಾರಿಯನ್ನು ಸ್ವತಹ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ರವರ ನಿರ್ದೇಶನದಂತೆ ಯಶಸ್ವಿಯಾಗಿ ಜಾತ್ರೆಯು ನಡೆಯಿತು.
ಈ ಜಾತ್ರೆಯಲ್ಲಿ ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ, ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರದ ಶಾಸಕಎನ್.ವೈ.ಗೋಪಾಲಕೃಷ್ಣ, ದ್ರಾಕ್ಷಿ ಹಾಗೂ ದ್ರಾಕ್ಷಾ ರಸ ನಿಗಮದ ಅಧ್ಯಕ್ಷ ಯೋಗೀಶ್ ಬಾಬು, ಚಿತ್ರದುರ್ಗ ಜಿಲ್ಲಾಧಿಕಾರಿ ಟಿ,ವೆಂಕಟೇಶ್, ಅಪರ ಜಿಲ್ಲಾಧಿಕಾರಿ ಕುಮಾರಸ್ವಾಮಿ, ಚಳ್ಳಕೆರೆ ತಾಸಿಲ್ದಾರ್ ರೆಹನ್ ಪಾಷಾ, ಡಿ.ವೈ.ಎಸ್.ಪಿ ರಾಜಣ್ಣ, ಶ್ರೀ ತಿಪ್ಪೇರುದ್ರಸ್ವಾಮಿ ದೇವಾಲಯದ ಕಾರ್ಯನಿರ್ವ ಹಣಾಧಿಕಾರಿ ಗಂಗಾಧರ್, ದೇವಾಲಯ ಸಮಿತಿ ಅಧ್ಯಕ್ಷ ಎಂ.ವೈ.ಟಿ.ಸ್ವಾಮಿ ಇತರ ತಾಲ್ಲೂಕು ಮಟ್ಟದ ಅಧಿಕಾರಿ ಗಳು ಹಾಗೂ ಜನಪ್ರತಿನಿಧಿಗಳು ಭಾಗವಹಿಸಿದ್ದರು.