ಹುಬ್ಬಳ್ಳಿ: ರಾಷ್ಟçಗೀತೆಯಾದ ವಂದೇ ಮಾತರಂ ೧೫೦ನೇ ವರ್ಷಾಚರಣೆಯ ಅಂಗವಾಗಿ, ಕರ್ನಾಟಕ್ ೨೮ನೇ ಎನ್ಸಿಸಿ ಬ್ಯಾಟಾಲಿಯನ್ವು ಕರ್ನಲ್ ಜಸ್ದೀಪ್ ಸಿಂಗ್ ಅವರ ನೇತೃತ್ವದಲ್ಲಿ, ಹುಬ್ಬಳ್ಳಿಯ ವಿದ್ಯಾನಗರದಲ್ಲಿರುವ ಕೆಎಲ್ಇ ಸಂಸ್ಥೆಯ ಜಗದ್ಗುರು ಗಂಗಾಧರ ವಾಣಿಜ್ಯ ಮಹಾವಿದ್ಯಾಲಯದ ಮೈದಾನದಲ್ಲಿ ಇಂಟರ್ ಕಂಪನಿ ಕ್ರೀಡಾ ಕೂಟವನ್ನು ಆಯೋಜಿಸಿತು.
ಈ ಕ್ರೀಡಾಕೂಟದಲ್ಲಿ ವಿವಿಧ ಕಾಲೇಜುಗಳ ಎನ್ಸಿಸಿ ಕ್ಯಾಡೆಟ್ಗಳು ಉತ್ಸಾಹಭರಿತವಾಗಿ ಪಾಲ್ಗೊಂಡು, ವಾಲಿಬಾಲ್ ಮತ್ತು ಟಗ್ ಆಫ್ ವಾರ್ (ಹಗ್ಗಜಗ್ಗಾಟ) ಸ್ಪರ್ಧೆಗಳಲ್ಲಿ ತಮ್ಮ ತಂಡಭಾವನೆ, ಶಿಸ್ತು ಮತ್ತು ಕ್ರೀಡಾಸ್ಫೂರ್ತಿಯನ್ನು ಪ್ರದರ್ಶಿಸಿದರು. ಒಟ್ಟಾರೆ ಅಂಕಗಳ ಪೈಪೋಟಿಯಲ್ಲಿ ಜಿ.ಜಿ. ವಾಣಿಜ್ಯ ಮಹಾವಿದ್ಯಾಲಯ, ಹುಬ್ಬಳ್ಳಿ ೨೦ ಅಂಕಗಳೊAದಿಗೆ ಚಾಂಪಿಯನ್ ಪಟ್ಟವನ್ನು ಗಿಟ್ಟಿಸಿತು. ಕೆ.ಎಸ್.ಎಸ್. ಕಾಲೇಜು, ಹುಬ್ಬಳ್ಳಿ ೧೮ ಅಂಕಗಳೊAದಿಗೆ ದ್ವಿತೀಯ ಸ್ಥಾನ ಹಾಗೂ ಕೆ.ಆರ್.ಸಿ.ಇ.ಎಸ್. ಕಾಲೇಜು, ಬೈಲಹೊಂಗಲ ೧೬ ಅಂಕಗಳೊAದಿಗೆ ತೃತೀಯ ಸ್ಥಾನ ಪಡೆದವು.
ಕರ್ನಲ್ ಜಸ್ದೀಪ್ ಸಿಂಗ್ ಅವರು ಕ್ಯಾಡೆಟ್ಗಳ ಉತ್ಸಾಹ ಮತ್ತು ಶ್ರಮವನ್ನು ಶ್ಲಾಘಿಸಿ, ದೆಶಸೇವೆಯೆಂಬ ಗುರಿಯೊಂದಿಗೆ ಸದಾ ಮುಂದುವರಿಯಿರಿ ಎಂದು ಅವರಿಗೆ ಪ್ರೇರಣೆ ನೀಡಿದರು.
ಕಾರ್ಯಕ್ರಮದ ಅಂತ್ಯದಲ್ಲಿ ದೇಶಭಕ್ತಿಯ ಉತ್ಸಾಹ ಮತ್ತು ಘೋಷಣೆಗಳ ಮಧ್ಯೆ ವಂದೇ ಮಾತರಂಗೆ ಗೌರವ ಸಲ್ಲಿಸಲಾಯಿತು ಹಾಗೂ ಎನ್ಸಿಸಿಯ ಆತ್ಮಸ್ಫೂರ್ತಿಗೆ ನಮನಗಳೊಂದಿಗೆ ಕಾರ್ಯಕ್ರಮ ಯಶಸ್ವಿಯಾಗಿ ಮುಕ್ತಾಯವಾಯಿತು.



