ನವದೆಹಲಿ/ಬೆಂಗಳೂರು: ಈ ಭಾರಿ ಲೋಕಸಭಾ ಚುನಾವಣಾ ಮತ ಎಣಿಕೆ ನಡೆದು ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿ ಕೂಟ ಹೆಚ್ಚಿನ ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದರೆ ಕಾಂಗ್ರೆಸ್ ನೇತೃತ್ವದ ಇಂಡಿಯಾ ಕೂಟ ಪ್ರಬಲ ಸ್ಪರ್ಧೆ ನೀಡಿರುವುದು ಮಧ್ಯಾಹ್ನದ ಮತ ಎಣಿಕೆಯವರೆಗೂ ಕಂಡುಬಂದಿದೆ.
ಒಟ್ಟು 543 ಸ್ಥಾನಗಳ ಪೈಕಿ ಎನ್ಡಿಎ 289 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದರೆ, ಇಂಡಿಯಾ ಒಕ್ಕೂಟ 233 ಸ್ಥಾನಗಳಲ್ಲಿ ಹಾಗೂ ಇತರರು 21 ಸ್ಥಾನಗಳಲ್ಲಿ ಮುನ್ನಡೆಯಲ್ಲಿದ್ದಾರೆ.ಮಧ್ಯಪ್ರದೇಶದಲ್ಲಿ ಎಲ್ಲಾ ಸ್ಥಾನಗಳಲ್ಲೂ ಬಿಜೆಪಿ ಅಭ್ಯರ್ಥಿಗಳು ಜಯದ ಹಾದಿಯತ್ತ ಸಾಗಿದ್ದಾರೆ.
ಉತ್ತರಪ್ರದೇಶ, ಮಹಾರಾಷ್ಟ್ರ, ಕೇರಳ ತಮಿಳುನಾಡಿನಲ್ಲಿ ಇಂಡಿಯಾ ಒಕ್ಕೂಟದ ಅಭ್ಯರ್ಥೀಗಳ ಹೆಚ್ಚಿನ ಸ್ಥಾನಗಳಲ್ಲಿ ಮುಂದಿದ್ದಾರೆ.ಬಿಹಾರದಲ್ಲಿ ಎನ್ಡಿಎ ಪಾಲುದಾರರಾಗಿರುವ ಜೆಡಿಯುನ ಅಭೈರ್ಥೀಗಳು ಹೆಚ್ಚು ಸ್ಥಾನಗಳಿಸಿದ್ದರೆ ರಾಜಸ್ಥಾನದಲ್ಲೂ ಸಹ ಬಿಜೆಪಿ ಅಭ್ಯರ್ಥಿಗಳು ಮುನ್ನಡೆಯತ್ತ ಸಾಗಿದ್ದಾರೆ.