This is the title of the web page
This is the title of the web page

ಗಿಡಗಳನ್ನು ನೆಡುವ ಮೂಲಕ ಸರಳ ಹುಟ್ಟುಹಬ್ಬ ಆಚರಿಸಿದ ನೀಲೇರಿ ಅಂಬರೀಶ್‍ಗೌಡ

ದೇವನಹಳ್ಳಿ: ಸಮಾಜ ಸೇವೆಯಲ್ಲಿ ತನ್ನದೇ ಆದ ಛಾಪು ಮೂಡಿಸಿಕೊಂಡಿರುವ ದೇವನಹಳ್ಳಿ ಟೌನ್ 10ನೇ ವಾರ್ಡ್‍ನಲ್ಲಿ ವಾಸವಾಗಿರುವ ಕ.ರ.ವೇ ರಾಜ್ಯ ಉಪಾಧ್ಯಕ್ಷ ಹಾಗೂ ಸಮಾಜ ಸೇವಕ, ಬಿಜೆಪಿ ಕಾರ್ಮಿಕ ಪ್ರಕೋಷ್ಠದ ಜಿಲ್ಲಾ ಮುಖಂಡ ನೀಲೇರಿ ಅಂಬರೀಶ್‍ಗೌಡ ಅವರು ತಮ್ಮ ಹುಟ್ಟುಹಬ್ಬವನ್ನು ಸರಳವಾಗಿ ಗಿಡಗಳನ್ನು ನೆಡುವ ಮೂಲಕ ಆಚರಿಸಿಕೊಂಡರು.

ಈ ಸಮಯದಲ್ಲಿ ಹಾಜರಿದ್ದ ಗೋಕರೆ ಸತೀಶ್ ಮಾತನಾಡಿ ಹಿರಿಯ ನಟ ದಿ|| ಅಂಬರೀಶ್ ಸಮಾಜ ಸೇವೆಯಲ್ಲಿ ಕೊಡುಗೈ ದಾನಿ ಎನಿಸಿಕೊಂಡಿದ್ದರು, ಅದೇರೀತಿ ನೀಲೇರಿ ಅಂಬರೀಶ್‍ಗೌಡ ತಾಲ್ಲೂಕಿನ ಬಡ ಜನರಿಗೆ ಸಹಾಯ ಹಸ್ತ ನೀಡಿ ಹೆಸರುವಾಸಿಯಾಗಿದ್ದಾರೆ, ಅವರು ಬಡಜನರಿಗೆ ತಮ್ಮ ಕೈಲಾದ ಸಹಾಯ ಮಾಡುತ್ತಾ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ,

ಕರವೇ ನಾರಾಯಣಗೌಡರ ಬಣದ ರಾಜ್ಯ ಉಪಾಧ್ಯಕ್ಷರಾಗಿಯೂ ಕನ್ನಡದ ಉಳಿವಿಗೆ ಹೋರಾಟಗಳನ್ನು ಮಾಡಿದಂತಹವರು ಅವರು ತಮ್ಮ ಹುಟ್ಟುಹಬ್ಬವನ್ನು ಗಿಡಗಳನ್ನು ನೆಡುವ ಮೂಲಕ ಸರಳವಾಗಿ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ ಅವರಿಗೆ ನಾವು ಶುಭ ಹಾರೈಸುತ್ತಿದ್ದೇವೆ ಎಂದರು.

ಈ ಸಮಯದಲ್ಲಿ ಅಂಬರೀಶ್‍ಗೌಡ ಮಾತನಾಡಿ ಅದ್ದೂರಿಯಾಗಿ ಹುಟ್ಟುಹಬ್ಬ ಆಚರಿಸುವುದು ನನಗೆ ಇಷ್ಟವಿಲ್ಲ, ಗೆಳೆಯರ ಒತ್ತಾಯದ ಮೇರೆಗೆ ಸರಳವಾಗಿ ಆಚರಿಸಿಕೊಳ್ಳುತ್ತಿದ್ದೇನೆ, ಇತ್ತೇಚೆಗೆ ಪರಿಸರ ದಿನಾಚರಣೆಆಚರಿಸುವ ಈ ಸಂಧರ್ಭ ನಮ್ಮ ಗ್ರಾಮದಲ್ಲಿ ಗಿಡಗಳನ್ನು ನೆಟ್ಟು ನೀರೆರೆಯುವುದರ ಮೂಲಕ ಮುಂದಿನ ಪೀಳಿಗೆಗೆ ಪರಿಸರವನ್ನು ಸಮತೋಲನದಲ್ಲಿಟ್ಟುಕೊಳ್ಳಬೇಕು,

ಆದ್ದರಿಂದ ಪ್ರತಿಯೊಬ್ಬರೂ ಹುಟ್ಟಿದ ಹಬ್ಬದಂದು ದುಂದುವೆಚ್ಚ ಮಾಡುವ ಬದಲು ಗಿಡಗಳನ್ನು ನೆಡುವ ಮೂಲಕ ಪರಿಸರದ ಉಳಿವಿಗೆ ಸಹಕರಿಸಿ, 130ಕೋಟಿಗೂ ಅಧಿಕ ಜನಸಂಖ್ಯೆಯಿರುವ ಭಾರತದಲ್ಲಿ ಪರಿಸರ ರಕ್ಷಣೆ ಕ್ರಮೇಣ ಇಳಿಮುಖವಾಗುತ್ತಿದೆ, ಹಸಿರೇ-ಉಸಿರು ಮರಗಿಡಗಳ ನಾಶದಿಂದ ಆಮ್ಲಜನಕದ ಕೊರತೆ ಉಂಟಾಗಿ ಜನ ಅನೇಕ ಖಾಯಿಲೆಗಳಿಗೆ ತುತ್ತಾಗಬಹುದು ಎಂದು ತಿಳಿಸಿದರು.
ಈ ಸಮಯದಲ್ಲಿ ಕರವೇ ಜಿಲ್ಲಾ ಪ್ರ. ಸಂಚಾಲಕ ಲೋಕೇಶ್, ತಾಲೂಕು ಕರವೇ ಅಧ್ಯಕ್ಷ ಅನಿಲ್, ಉಪಾಧ್ಯಕ್ಷ ಶ್ರೀನಿವಾಸ್, ಯುವ ಘಟಕದ ಅಧ್ಯಕ್ಷ ಸತೀಶ್ ಗೋಕರೆ, ಅನಿಲ್, ಶಿವಕುಮಾರ್ ಸೇರಿದಂತೆ ಅನೇಕ ಗೆಳೆಯರು, ಕುಟುಂಬದವರು ಉಪಸ್ಥಿತರಿದ್ದರು.