ಪ್ಯಾರಿಸ್ನಲ್ಲಿ ಜರುಗುವ ಒಲಿಂಪಿಕ್ಸ್ಗೆ ಮುನ್ನವೇ 90 ಮೀಟರ್ ದೂರ ಎಸೆಯುವುದಾಗಿ ದಾಟುವ ವಿಶ್ವಾಸ ಇದೆ ಎಂದು ಭಾರತದ ಸ್ಟಾರ್ ಜಾವೆಲಿನ್ ಥ್ರೋ ಪಟು ಹಾಗೂ ಟೋಕಿಯೊ ಒಲಿಂಪಿಕ್ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಸಾಧನೆ ಮಾಡಲು ನಾನು ತುಂಬಾ ಕಠಿಣ ತರಬೇತಿ ಪಡೆಯುತ್ತಿದ್ದೇನೆ ಎಂದು ಚೋಪ್ರಾ ತಿಳಿಸಿದ್ದಾರೆ.
89.94 ಮೀಟರ್ ದೂರ ಎಸೆದಿರುವುದೇ ನೀರಜ್ ಚೋಪ್ರಾ ಅವರ ಶ್ರೇಷ್ಠ ನಿರ್ವಹಣೆಯಾಗಿದೆ. ಇದನ್ನು 2022ರ ಸ್ಟಾಕ್ಹೋಮ್ ಡೈಮಂಡ್ ಲೀಗ್ನಲ್ಲಿ ಎಸೆದು ದಾಖಲೆ ಬರೆದಿದ್ದರು. ಅಭ್ಯಾಸ ಮಾಡುವ ಸಂದರ್ಭದಲ್ಲಿ ಚೋಪ್ರಾ ಅನೇಕ ಬಾರಿ 90 ಮೀಟರ್ ಗಡಿಯನ್ನು ದಾಟಿದ್ದಾರೆ. ಆದರೆ ಟೂರ್ನಮೆಂಟ್ ಮತ್ತು ಸ್ಪರ್ಧೆ ಗಳಲ್ಲಿ ಈ ದಾಖಲೆ ಬರೆಯಲು ಸಾಧ್ಯವಾಗಿಲ್ಲ. ಈ ಸಲ ಅದನ್ನು ಸಾಧಿಸಿಯೇ ತೀರುತ್ತೇನೆ ಎಂದು ಜಾವೆಲಿನ್ ಪಟು ಆತ್ಮ ವಿಶ್ವಾಸ ವ್ಯಕ್ತಪಡಿಸಿದ್ದಾರೆ.