ಧಾರವಾಡ; ನನ್ನ ಮಗನಿಗೆ ತಕ್ಕ ಶಿಕ್ಷೆ ಆಗಬೇಕು, ನನ್ನ ಮಗ ಮಾಡಿರುವ ತಪ್ಪಿಗೆ ರಾಜ್ಯದ ಜನರ ಮುಂದೆ ಕ್ಷಮೆಯಾಚಿಸುತ್ತೇನೆ ಎಂದು ಆರೋಪಿ ಫಯಾಜ್ ತಾಯಿ ಹೇಳಿದ್ದಾರೆ.ಹುಬ್ಬಳ್ಳಿಯ ವಿದ್ಯಾರ್ಥಿನಿ ನೇಹಾ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿ ಫಯಾಜ್ ತಾಯಿ ಮಾಧ್ಯಮದವರೊಂದಿಗೆ ಮಾತನಾಡಿ, ಮೃತ ನೇಹ ನನ್ನ ಮಗನಿಗೆ ಪ್ರಪೋಸ್ ಮಾಡಿದ್ದಳು. ನನ್ನ ಬಳಿ ಈ ವಿಷಯವನ್ನು ಮಗ ಹೇಳಿದಾಗ ಲವ್ ಬೇಡ ಅಂತ ಹೇಳಿದ್ದೆ ಎಂದಿದ್ದಾರೆ.
ಮಗ ಕೆಎಎಸ್ ಅಧಿಕಾರಿ ಆಗಬೇಕೆಂದು ಕನಸು ಕಂಡಿದ್ದೆ. ಆದರೆ, ಈ ರೀತಿ ಆಗಿದ್ದಕ್ಕೆ ಬಹಳ ಸಂಕಟ ಆಗುತ್ತೆ. ನೇಹಾ ಸಹ ತುಂಬಾ ಒಳ್ಳೆಯ ಹುಡುಗಿ. ಫಯಾಜ್-ನೇಹಾ ಮದುವೆ ಆಗಬೇಕು ಅಂತ ಇದ್ದರು. ತಪ್ಪು ಮಾಡಿದವರಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಹೇಳಿದ್ದಾರೆ.ಗುರುವಾರ ಮಧ್ಯಾಹ್ನ ಹುಬ್ಬಳ್ಳಿಯ ಬಿವಿಬಿ ಕಾಲೇಜು ಆವರಣದಲ್ಲಿ ನಡೆದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸದಸ್ಯ ನಿರಂಜನ ಹಿರೇಮಠ ಅವರ ಪುತ್ರಿ ವಿದ್ಯಾರ್ಥಿನಿ ನೇಹಾ ಕೊಲೆ ರಾಜ್ಯವನ್ನು ಬೆಚ್ಚಿ ಬೀಳಿಸಿದೆ.
ಈ ಕೊಲೆ ಮಾಡಿದ ಆರೋಪಿ ಫಯಾಜ್ನನ್ನು ಗಲ್ಲಿಗೆ ಏರಿಸಬೇಕು ಅಥವಾ ಶೂಟ್ಔಟ್ ಮಾಡಬೇಕೆಂಬ ಕೂಗು ಕೇಳಿ ಬರುತ್ತಿದೆ. ಪ್ರೀತಿ ನಿರಾಕರಿಸಿದ್ದಕ್ಕಾಗಿ ನೇಹಾಳನ್ನು ಕೊಲೆ ಮಾಡಲಾಗಿದೆ ಎಂದು ಮೇಲ್ನೋಟಕ್ಕೆ ಕಂಡು ಬಂದಿದೆ. ಆದರೆ ಬಿಜೆಪಿ ಮತ್ತು ಹಿಂದೂ ಸಂಘಟನೆಗಳು ಇದು ಲವ್ ಜಿಹಾದ್ ಎಂದು ಹೇಳುತ್ತಿವೆ. ಆದರೆ ಈ ಕೊಲೆ ವೈಯಕ್ತಿಕ ಕಾರಣಕ್ಕೆ ಆಗಿದೆ ಅಂತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದರೇ, ಗೃಹ ಸಚಿವ ಜಿ ಪರಮೇಶ್ವರ ಅವರು “ಫಯಾಜ್ ಮತ್ತು ನೇಹಾ ಪ್ರೀತಿಸುತ್ತಿದ್ದರು. ನಂತರ ನೇಹಾ ಫಯಾಜ್ನಿಂದ ದೂರವಾಗಲು ಯತ್ನಿಸಿದ್ದಾಳೆ.
ಹೀಗಾಗಿ ಕೊಲೆ ನಡೆದಿದೆ” ಎಂದು ಹೇಳಿದ್ದರು.ಪ್ರಕರಣ ಸಂಬಂಧ ನೇಹ ತಾಯಿ ಗೀತಾ ಹೇಳಿಕೆ ನೀಡಿ, ಲವ್ವು ಇಲ್ಲ ಏನೂ ಇಲ್ಲ ಫಯಾಜ್ ತಾಯಿ ಕ್ಷಮೆ ಯಾರಿಗೆ ಬೇಕು ಕೊಲೆ ಮಾಡಿದವನಿಗೆ ಶಿಕ್ಷೆಯಾಗಬೇಕು ಎಂದು ಆಕ್ರೋಶ ಹೊರ ಹಾಗಿ ನನ್ನು ಮಗಳು ಬರುತ್ತಾಳಾ ಎಂದು ಕಾಯುತ್ತಿದ್ದೇನೆ ಎಂದಿದ್ದಾರೆ.