ಬ್ಲೋಮ್ಫಾಂಟೇನ್: ಐಸಿಸಿ ಅಂಡರ್-19 ವಿಶ್ವಕಪ್ ಕ್ರಿಕೆಟ್ ಕೂಟದ ಬಣ ಒಂದರ ಸೂಪರ್ ಸಿಕ್ಸ್ ಹಂತದ ಕೊನೆಯ ಪಂದ್ಯದಲ್ಲಿ ಭಾರತವು ಶುಕ್ರವಾರ ನೇಪಾಳ ತಂಡವನ್ನು ಎದುರಿಸಲಿದೆ.
ಭರ್ಜರಿ ಗೆಲುವಿ ನೊಂದಿಗೆ ಸೆಮಿಫೈನಲ್ ಹಂತಕ್ಕೇರಲು ಯೋಚಿಸುತ್ತಿದೆ. ಸೂಪರ್ ಸಿಕ್ಸ್ ಹಂತದಲ್ಲಿ ಆಡಿದ ಮೂರು ಪಂದ್ಯಗಳಲ್ಲಿ ಜಯ ದಾಖಲಿಸಿ ಆರಂಕ ಪಡೆದಿರುವ ಭಾರತ ಬಣ ಒಂದರಲ್ಲಿ ಅಗ್ರಸ್ಥಾನ ಪಡೆದಿದೆ. ಪಾಕಿಸ್ತಾನ ಕೂಡ ಆರಂಕ ಪಡೆದಿದ್ದರೂ ಉತ್ತಮ ರನ್ ಧಾರಣೆಯ ಆಧಾರದಲ್ಲಿ ಭಾರತವೇ ಮೊದಲ ಸ್ಥಾನದಲ್ಲಿದೆ.
ಶನಿವಾರ ಪಾಕಿಸ್ತಾನವು ತನ್ನ ಅಂತಿಮ ಪಂದ್ಯದಲ್ಲಿ ನಾಲ್ಕಂಕ ಹೊಂದಿರುವ ಬಾಂಗ್ಲಾವನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ಒಂದು ವೇಳೆ ಬಾಂಗ್ಲಾ ಗೆದ್ದರೂ ಉತ್ತಮ ರನ್ ಧಾರಣೆಯ ಆಧಾರದಲ್ಲಿ ಪಾಕಿಸ್ತಾನ ಸೆಮಿಫೈನಲ್ ತಲುಪಲಿದೆ.ಪ್ರತಿ ಬಣದ ಎರಡು ತಂಡಗಳು ಸೆಮಿಫೈನಲಿಗೇರಲಿವೆ.
ಫೆ. 6 ಮತ್ತು 8ರಂದು ಸೆಮಿಫೈನಲ್ಸ್ ನಡೆಯಲಿದ್ದರೆ ಫೆ. 11ರಂದು ಫೈನಲ್ ಪಂದ್ಯ ಜರಗಲಿದೆ. ಲೀಗ್ ಹಾಗೂ ಸೂಪರ್ ಸಿಕ್ಸ್ ಹಂತದಲ್ಲಿ ಅಮೋಘ ನಿರ್ವಹಣೆ ದಾಖಲಿಸಿದ ಮುಂಬಯಿಯ ಸಫ್ಸರಾಜ್ ಅವರ ಸಹೋಹರ ಮುಶೀರ್ ಖಾನ್ 2 ಶತಕ ಸಹಿತ ಸರಾಸರಿ 81ರಂತೆ 325 ರನ್ ಗಳಿಸಿ ಬ್ಯಾಟಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.