ಬೆಂಗಳೂರು : ಕುಮಾರಸ್ವಾಮಿ ಲೇಔಟ್ ಪೊಲೀಸರು ಪ್ರತಾಪ್ @ ನೇಪಾಳಿ(೩೩) ಎಂಬ ವ್ಯಕ್ತಿಯನ್ನು ಬಂಧಿಸಿ ಅಂದಾಜು ೯ ಲಕ್ಷ ರೂಪಾಯಿ ಬೆಲೆಬಾಳುವ ಚಿನ್ನಾಭರಣ ಮೋಟರ್ ಸೈಕಲ್ ವಶಪಡಿಸಿಕೊಂಡಿರುತ್ತಾರೆ.
ಈತನು ಸುಮಾರು ೧೫ ವರ್ಷಗಳಿಂದ ಮನೆ ಕಳ್ಳತನ ದ್ವಿಚಕ್ರ ವಾಹನ ಕಳ್ಳತನ ಪ್ರಕರಣಗಳಲ್ಲಿ ಬೆಂಗಳೂರು ನಗರ ಕುಮಾರಸ್ವಾಮಿ ಲೇಔಟ್ ಕೋಡನಕುಂಟೆ ಸುಬ್ರಮಣ್ಯಪುರ ಸೇರಿದಂತೆ ಕನಕಪುರ ಚನ್ನಪಟ್ಟಣ ಟೌನ್ ಕೊಳ್ಳೇಗಾಲ ಈ ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲಿಯೂ ಸಹ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿ ಕೆಲವು ಪ್ರಕರಣಗಳಲ್ಲಿ ಶಿಕ್ಷೆಯು ಆಗಿ ಮತ್ತು ೧೦ ಪ್ರಕರಣಗಳಲ್ಲಿ ಜಾಮೀನು ಪಡೆದು ತಲೆಮರೆಸಿಕೊಂಡಿದ್ದನ್ನು ಕುಮಾರಸ್ವಾಮಿ ಲೇಔಟ್ ಪೊಲೀಸರು ಬಂಧಿಸಿರುತ್ತಾರೆ.