ಬೆಂಗಳೂರು: ಗೃಹಬಳಕೆಯ ಸಿಲಿಂಡರ್ ಬುಕ್ಕಿಂಗ್ ಮಾಡಲು ಪ್ರಧಾನಮಂತ್ರಿ ಉಜ್ವಲ್ ಯೋಜನೆಯಡಿ ಹೊಸ ಮಾರ್ಗಸೂಚಿ ಪ್ರಕಟಿಸಲಾಗಿದೆ. ಸಿಲಿಂಡರ್ ಬುಕ್ಕಿಂಗ್ 45 ದಿವಸಗಳ ಕಾಲಾವಕಾಶ ನೀಡಲಾಗಿದೆ. ಒಂದು ಸಿಲಿಂಡರ್ ಇರುವವರು 25 ದಿನಗಳ ನಂತರ ಸಿಲಿಂಡರ್ ಬುಕ್ ಮಾಡಬೇಕಿದೆ. 2 ಸಿಲಿಂಡರ್ ಇರುವವರು 35 ದಿನಗಳ ಬಳಿಕ ಸಿಲಿಂಡರ್ ಬುಕ್ ಮಾಡಲು ಅವಕಾಶ ಕಲ್ಪಿಸಲಾಗಿದೆ. ಐದು ಕೆಜಿ ಗ್ಯಾಸ್ ಸಿಲಿಂಡರ್ ಬುಕ್ಕಿಂಗ್ಗೂ ಹೊಸ ಮಾರ್ಗ ಸೂಚಿ ಹೊರಡಿಸಲಾಗಿದೆ. 5 ಕೆ.ಜಿ ಸಿಲಿಂಡರ್ ಗ್ಯಾಸ್ ಪಡೆಯಲು 9ರಿಂದ 16ದಿನಗಳ ಕಾಲ ಅಂತರವಿರಬೇಕು. 10 ಕೆಜಿ ಸಿಲಿಂಡರ್ಗೆ 18ರಿಂದ 32ದಿನಗಳ ಅಂತರವಿರಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ಈ ಎಲ್ಲದರ ನಡುವೆಯೂ ರಾಜ್ಯದ ಪ್ರಮುಖಗಳಲ್ಲಿ ನಗರಗಳಲ್ಲಿ ಗೃಹಬಳಕೆಯ ಗ್ಯಾಸ್ ಸಮಸ್ಯೆ ಎದುರಾಗುತ್ತಿದೆ. ಗ್ಯಾಸ್ ವಿತರಕರ ಅಂಗಡಿಗಳ ಎದುರು ಗ್ಯಾಸ್ಗಾಗಿ ಜನರು ಸಾಲುಗಟ್ಟಿ ನಿಂತಿರುವ ದೃಶ್ಯ ಕಾಣಬರುತ್ತಿದೆ.
ಹೊಸ ಮಾರ್ಗಸೂಚಿ ಗೃಹಬಳಕೆ ಸಿಲಿಂಡರ್ ಬುಕ್ಕಿಂಗ್ ಹೊಸ ನಿಯಮ ಜಾರಿ



