ಬೆಂಗಳೂರು: ಹೊಸ ವರ್ಷ ಆಚರಣೆಗೆ ಬೆಂಗಳೂರು ನಗರದಲ್ಲಿ ಹೇಗೆ ಪೊಲೀಸ್ ಕಟ್ಟೆಚರ ವಹಿಸಿರುವರೊ ಅದೇ ಮಾದರಿಯಲ್ಲಿ ನಮ್ಮ 6 ಜಿಲ್ಲೆಗಳ ಲ್ಲಿಯು ಸಹ ಕೂಟಗಳು ನಡೆಯುವ ಸ್ಥಳಗಳಲ್ಲಿ ಪೊಲೀಸ್ ಕಟ್ಟೆಚ್ಚರ ವಹಿಸಲು ಎಲ್ಲಾ ಜಿಲ್ಲಾ ಎಸ್ ಪಿ ಗಳ ಸಭೆ ಕರೆದು ತಿಳಿಸಲಾಗಿದೆ ಎಂದು ಕೇಂದ್ರವಲಯ ಐಜಿಪಿ ರವಿಕಾಂತೇಗೌಡ ವಿಶೇಷವಾಗಿ ಇಂದು ಸಂಜೆ ಪತ್ರಿಕೆಗೆ ತಿಳಿಸಿದರು.
ಬೆಂಗಳೂರು ಗ್ರಾಮಾಂತರ, ಕೋಲಾರ, ಕೆಜಿಫ್, ತುಮಕೂರು, ಚಿಕ್ಕಬಳ್ಳಾಪುರ ಹಾಗು ರಾಮನಗರ ಜಿಲ್ಲೆಗಳಲ್ಲಿ ಬರುವ ಹೋಟೆಲ್ ಗಳು, ಕ್ಲಬ್ಗಳು, ರೆಸಾರ್ಟ್ಗಳು, ಸ್ಟಾರ್ ಹೋಟೆಲ್ಗಳು ಸೇರಿದಂತೆ ಇತರೆ ಸ್ಥಳಗಳಲ್ಲಿ ನಡೆಯುವ ಹೊಸ ವರ್ಷಾಚರಣೆ ಕಾರ್ಯಕ್ರಮದಲ್ಲಿ ಹೆಚ್ಚಿನ ನಿಗಾ ವಹಿಸಬೇಕೆಂದು ಎಲ್ಲಾ ಜಿಲ್ಲಾ ಎಸ್ ಪಿ ಗಳಿಗೆ ಆದೇಶ ನೀಡಲಾಗಿದೆ ಎಂದು ತಿಳಿಸಿದರು.
ವಿಶೇಷವಾಗಿ ಯಾವುದೇ ಕಾರಣಕ್ಕೂ ಡ್ರಗ್ಸ್ ಮಾರಾಟ ಮಾಡುವುದು ಅಥವಾ ಸೇವನೆ ಮಾಡುವುವವರ ವಿರುದ್ಧ ಕಾನುನು ಕ್ರಮ ಕೈಗೊಳ್ಳಲು ಆದೇಶ ನೀಡಲಾಗಿದೆ ಎಂದರು.ಮಹಿಳೆ ಮತ್ತು ಮಕ್ಕಳಿಗೆ ವಿಶೇಷವಾಗಿ ವ್ಯವಸ್ಥೆ ಕಲ್ಪಿಸಬೇಕೆಂದು ಆಯಾ ಹೋಟೆಲ್ ಮಾಲೀಕರಿಗೆ ನಮ್ಮ ಅಧಿಕಾರಿಗಳು ಸಭೆ ನಡೆಸಿ ಎಚ್ಚರಿಕೆ ನೀಡಲು ಹೇಳಿದೆನೆ.
ಮಧ್ಯರಾತ್ರಿ ಒಂದು ಗಂಟೆಯ ತನಕ ಮಾತ್ರ ಪರವಾನಗಿ ನೀಡಲಾಗಿದೆ. ಆರು ಜಿಲ್ಲೆಗಳಲ್ಲಿ ಬರುವ ಪ್ರೇಕ್ಷಣೀಯ ಸ್ಥಳಗಳು, ಬೆಟ್ಟ ಗುಡ್ಡಗಳು, ಜಲಪಾತಗಳು ಹಾಗೂ ಇತರೆ ಸ್ಥಳಗಳಲ್ಲಿ ಪೊಲೀಸ್ ಕಟ್ಟೆಚರ ವಹಿಸಲಾಗಿದೆ. ವಾಹನಗಳನ್ನು ಚಲಾಯಿಸೊರನು ತಪಾಸಣೆಗೆ ಗುರಿಪಡಿಸಿ ಮಧ್ಯಪಾನ ಮಾಡಿ ವಾಹನಾ ಚಾಲನೆ ಮಾಡಿ ಕಂಡುಬಂದಲ್ಲಿ ಕ್ರಮ ಕೈಗೊಳ್ಳಲು ಆದೇಶ ನೀಡಲಾಗಿದೆ.
ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ಬರುವ ಮೇಲೆಸೇತುವೆಗಳಿಗೆ ಬ್ಯಾರಿ ಗೇಟ್ ಅಳವಡಿಸಿ ಅತಿ ವೇಗ ಮತ್ತು ದ್ವಿಚಕ್ರ ವಾಹನಗಳಲ್ಲಿ ವೀಲಿಗಳನ್ನು ಮಾಡುಲು ಅವಕಾಶ ನೀಡಬಾರದೆಂದು ಆದೇಶಿಸಲಾಗಿದೆ ಎಂದು ತಿಳಿಸಿದರು.
ರಾಜ್ಯ ಹಾಗೂರಾಷ್ಟೀಯ ಹೆದ್ದಾರಿಗಳಲ್ಲಿ ಅಗ್ನಿಶಾಮಕ ಪಡೆ ಮತ್ತು ಕ್ರೇನ್ ಗಳನ್ನು ಜಮಾಸಿಡಲು ತಿಳಿಸಿದ್ದೇವೆ,ಕಾರಣ ಅಪಘಾತ ಸಂಭವಿಸಿದರೆ ತಕ್ಷಣ ಪರಿಹಾರ ಕಂಡುಕೊಳ್ಳಲು ಈ ಕ್ರಮ ಜರುಗಿಸಲಾಗಿದೆ. ವಿಶೇಷವಾಗಿ ರಾಮನಗರ, ಮೈಸೂರು ರಸ್ತೆ ತುಮಕೂರು ರಸ್ತೆ, ಬಳ್ಳಾರಿ ರಸ್ತೆ, ಹೊಸೂರ್ ರಸ್ತೆ, ಹಾಗೂ ಇನ್ನು ಅತಿ ಸೂಕ್ಷ್ಮ ಜಂಕ್ಷನ್ ಗಳಲ್ಲಿ ಈ ವ್ಯವಸ್ಥೆ ಮಾಡಲಾಗಿದೆ.ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳಲ್ಲಿ ವಿಶೇಷ ಪೊಲೀಸ್ ಗಸ್ತುನು ಮಾಡಲಾಗಿದೆ ಎಂದು ತಿಳಿಸಿದರು.
ವಾಸುಮೂರ್ತಿ. ಸಿ