ವೆಲ್ಲಿಂಗ್ಟನ್: ನ್ಯೂಜಿಲೆಂಡ್ ಕ್ರಿಕೆಟ್ ತಂಡದ ವೇಗದ ಬೌಲರ್ ನೀಲ್ ವ್ಯಾಗ್ನರ್ ಟೆಸ್ಟ್ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ. ದಕ್ಷಿಣ ಆಫ್ರಿಕಾ ಮೂಲದ ವ್ಯಾಗ್ನರ್ ನ್ಯೂಜಿಲೆಂಡ್ಗಾಗಿ 64 ಟೆಸ್ಟ್ಗಳನ್ನು ಆಡಿದ್ದಾರೆ ಮತ್ತು ನ್ಯೂಜಿಲೆಂಡ್ನ ಸಾರ್ವಕಾಲಿಕ ಟೆಸ್ಟ್ನಲ್ಲ್ಲಿ 37 ರ ಸರಾಸರಿಯಲ್ಲಿ 260 ವಿಕೆಟ್ ಪಡೆದಿದ್ದಾರೆ ವಿಶ್ವ ಟೆಸ್ಟ್ ಕ್ರಿಕೆಟ್ನಲ್ಲಿ ಐದನೇ ಸ್ಥಾನದಲ್ಲಿದ್ದಾರೆ.
ಗುರುವಾರ ವೆಲ್ಲಿಂಗ್ಟನ್ನಲ್ಲಿ ಆರಂಭವಾಗಲಿರುವ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ಗಾಗಿ ನ್ಯೂಜಿಲೆಂಡ್ನ ತಂಡದಿಂದ ಕೈಬಿಡಲಾಗಿತ್ತು. ವ್ಯಾಗ್ನರ್ 2012 ರಲ್ಲಿ ಅವರು ಟೆಸ್ಟ್ ಪಾದಾರ್ಪಣೆ ಮಾಡಿದರು ಮತ್ತು ನ್ಯೂಜಿಲೆಂಡ್ನ ಅತ್ಯಂತ ಯಶಸ್ವಿ ಯುಗಗಳಲ್ಲಿ ಪ್ರಮುಖ ಆಟಗಾರರಾಗಿದ್ದರು. 2022 ರಲ್ಲಿ ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಗೆಲ್ಲಲು ತಂಡಕ್ಕೆ ಇವರು ಆಸರೆಯಾಗಿದ್ದರು.