ಸತೀಶ್ ಜಾರಕಿಹೋಳಿ ಮನೆ ಮೇಲೆ ಇಡಿ ದಾಳಿ ಪ್ರಕರಣ.
ಬರೋಬ್ಬರಿ 178 ಕೋಟಿ ಅಬಕಾರಿ ಅಕ್ರಮ ಪತ್ತೆ.
ಇಡಿ ಅಧಿಕಾರಿಗಳಿಎ ಅಬಕಾರಿ ಅಕ್ರಮದಲ್ಲಿ ಕೋಟ್ಯಂತರ ಅಕ್ರಮದ ಬಗ್ಗೆ ಮಾಹಿತಿ.
ಕೋಟ್ಯಂತರ ವಿದೇಶಿ ಹಣ ರ‍್ಗಾವಣೆ ಕೂಡ ಆಗಿದೆ
ಇಡಿ ಅಧಿಕಾರಿಗಳ ಪ್ರಾಥಮಿಕ ತನಿಖೆ ವೇಳೆ ಬಯಲು
ಗೋವಾದಲ್ಲೂ ಇಡಿ ಅಧಿಕಾರಿಗಳ ದಾಳಿ
ಮಂಜುನಾಥ್ ಗೆ ಸಂಬಂಧಿಸಿದ ಕಚೇರಿಗಳ ಮೇಲೆ ದಾಳಿ
ದಾಳಿ ನಡೆಸಿ ಇಡಿ ಅಧಿಕಾರಿಗಳಿಂದ ದಾಖಲೆಗಳ ಪರಿಶೀಲನೆ
ಸತೀಶ್ ಜಾರಕಿಹೊಳಿ ಹಾಗೂ ಮಗಳು ಪ್ರಿಯಾಂಕಾ ಜಾರಕಿಹೊಳಿಗೆ ಸೇರಿದ ಸ್ಥಳಗಳಲ್ಲಿ ದಾಳಿ
ದಾಳಿ ನಡೆಸಿ ಪರಿಶೀಲನೆ ನಡೆಸ್ತಿರುವ ಇ.ಡಿ ಟೀಂ
ಅಕ್ರಮ ಹಣ ರ‍್ಗಾವಣೆ ಆರೋಪ ಸಂಬಂಧ ದಾಳಿ
ಒಟ್ಟು ಹದಿನೆಂಟು ಕಡೆ ದಾಳಿ ನಡೆಸಿ ಪರಿಶೀಲನೆ.
ಸತೀಶ್ ಜಾರಕಿಹೊಳಿ ಹಾಗೂ ಮಗಳ ಮನೆ ಮೇಲೆ ಇಡಿ ದಾಳಿ ಕೇಸ್.
ಕಳೆದ ಎರಡು ಗಂಟೆಯಿಂದ ಮುಂದುವರೆದ ಅಧಿಕಾರಿಗಳ ದಾಳಿ..
ಬೆಂಗಳೂರಿನ ಒಟ್ಟು ಆರು ಕಡೆ ದಾಳಿ ನಡೆಸಿ ಪರಿಶೀಲನೆ..
ಮೊದಲು ಡಾರ‍್ಸ್ ಕಾಲೋನಿಯ ಮನೆಗೆ ದಾಳಿ..
ಡಾರ‍್ಸ್ ಕಾಲೋನಿಯ ಮನೆಯಲ್ಲಿ ಅವ್ರು ಇರಲಿಲ್ಲ..
ರ‍್ಕಾರಿ ನಿವಾಸಲ್ಲಿದ್ದ ಕಾರಣ..
ಕ್ರಸೆಂಟ್ ರಸ್ತೆಯ ರ‍್ಕಾರಿ ನಿವಾಸಕ್ಕೆ ಬಂದಿರುವ ಇ.ಡಿಯ ಒಂದು ತಂಡ..
ಈಗಾಗಲೇ ಸಚಿವರ ವಿದೇಶಿ ವ್ಯವಹಾರಗಳ ಬಗ್ಗೆ ಮಾಹಿತಿ ಕಲೆ..
ಸಚಿವ ಸತೀಶ್ ಜಾರಕಿಹೊಳಿ ಹಾಗೂ ಕುಟುಂಬಸ್ಥರ ವ್ಯವಹಾರದ ಬಗ್ಗೆ ಮಾಹಿತಿ ಕಲೆ..
ಈ ಬಗ್ಗೆ ಸಚಿವ ಸತೀಶ್ ಜಾರಕಿಹೊಳಿ ವಿಚಾರಣೆ.
ಯಾವ್ಯಾವ ದೇಶಗಳಲ್ಲಿ, ಯಾವ್ಯವಾ ಕಂಪನಿಗೆ ಹೂಡಿಕೆ ಮಾಡಲಾಗಿದೆ..?
ಎಷ್ಟು ಮೊತ್ತದ ಹೂಡಿಕೆ ಮಾಡಲಾಗಿದೆ..?
ಆದಾಯ ಎಷ್ಟು..? ಎಲ್ಲದರ ದಾಖಲೆ ಸರಿ ಇದ್ಯಾ..?
ಎಷ್ಟು ರ‍್ಷಗಳಿಂದ ವ್ಯವಹಾರದಲ್ಲಿ ತೊಡಗಿದ್ದೀರಾ..?
ಹೀಗೆ ಹಲವು ಪ್ರಶ್ನೆಗಳಿಗೆ ಉತ್ತರ ಕೇಳ್ತಿರುವ ಇ.ಡಿ ಟೀಂ..
ಕೆಲ ಪ್ರಮುಖ ದಾಖಲೆಗಳನ್ನ ಮುಂದಿಟ್ಟು ಪ್ರಶ್ನೆ..
ಸತೀಶ್ ಜಾರಕಿಹೊಳಿ ಮೇಲೆ ಇಡಿ ದಾಳಿ ಪ್ರಕರಣ.ದಾಳಿ ಸಂಬಂಧ ಇಡಿ ಮೂಲಗಳ ಮಾಹಿತಿ.
ಲೋಕೋಪಯೋಗಿ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿಗೆ ಇಡಿ ಅಧಿಕಾರಿಗಳು ಶಾಕ್ ಕೊಟ್ಟಿದ್ದಾರೆ. ಬೆಂಗಳೂರು, ಬೆಳಗಾವಿ ಹಾಗೂ ಮಹಾರಾಷ್ಟ್ರ ಸೇರಿದಂತೆ ಅವರ ಮನೆಗಳು ಹಾಗೂ ಸಚೇರಿಗಳ ಮೇಲೆ ಇಂದು ಬೆಳಿಗ್ಗೆ 5:30 ರ ಸುಮಾರಿಗೆ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ಬೆಂಗಳೂರಿನ ಕ್ರೆಸೆಂಟ್ ರಸ್ತೆಯಲ್ಲಿರುವ ಅವರ ರ‍್ಕಾರಿ ನಿವಾಸ, ಡಾರ‍್ಸ್‌ಕಾಲೋನಿ ನಿವಾಸ, ಬೆಳಗಾವಿಯ ದೂರದರ್ಶನ ಕೇಂದ್ರದ ಬಳಿಯಿರುವ ನಿವಾಸ, ಗೋಕಾಕ್ ನಗರದಲ್ಲಿರುವ ನಿವಾಸ, ಮಹಾರಾಷ್ಟ್ರದ ಕೊಲ್ಹಾಪುರದಲ್ಲಿರುವ ನಿವಾಸ, ಯಮಕನಮರಡಿ ಕ್ಷೇತ್ರದ ಶಾಸಕರ ಕಚೇರಿ ಸೇರಿದಂತೆ ಒಟ್ಟು 15 ಕಡೆಗಳಲ್ಲಿ ದಾಳಿ ನಡೆಸಿದ್ದಾರೆ. ಇನ್ನು ಸಚಿವ ಸತೀಶ್ ಜಾರಕಿಹೊಳಿಗೆ ಇದೇ ಮೊದಲ ಬಾರಿಗೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದು, ಸಚಿವ ಸಂಪುಟ ಸಭೆಯಲ್ಲಿ ಭಾಗಿಯಾಗುವ ನಿಟ್ಟಿನಲ್ಲಿ ಬೆಂಗಳೂರಿನ ರ‍್ಕಾರಿ ನಿವಾಸದಲ್ಲಿ ವಾಸ್ತವ್ಯ ಹೂಡಿದ್ದ ಸತೀಶ್ ಜಾರಕಿಹೊಳಿಗೆ 10 ಮಂದಿ ಅಧಿಕಾರಿಗಳ ತಂಡ ಶಾಕ್ ಕೊಟ್ಟಿದೆ. ಇತ್ತ ಡಾಲರ್ಸ್ ಕಾಲೋನಿಯ ನಿವಾಸದ ಬಳಿ 8 ಮಂದಿ ಅಧಿಕಾರಿಗಳ ತಂಡದ ದಾಳಿ ನಡೆಸಿದ್ದು, ದಾಳಿ ಮುಂದುವರೆದಿದೆ. ಬೆಳಗಾವಿಯ ದೂರದರ್ಶ ನ ಕೇಂದ್ರದ ನಿವಾಸ, ಗೋಕಾಕ್‌ನ ನಿವಾಸದಲ್ಲಿಯೂ ಇದೇ ವಾತಾವರಣ ನಿರ್ಮಾಣ ಆಗಿದೆ.ಸಂಬಂಧಿ ಹಾಗೂ ಅಬಕಾರಿ ಇಲಾಖೆಯ ಅಧಿಕಾರಿಯಾಗಿರುವ ವೈ. ಮಂಜುನಾಥ್ ಅವರ ಮೇಲೆ ಕಳೆದ ಜೂನ್ 24 ರಂದು ದಾಳಿ ನಡೆದಿತ್ತು. ಆ ದಾಳಿಯಲ್ಲಿ ವೈ. ಮಂಜುನಾಥ್ ಅಕ್ರಮವಾಗಿ ಅಬಕಾರಿ ಇಲಾಖೆಯಲ್ಲಿ ಬಾರ್ ಲೈಸನ್ಸ್‌ಗಳನ್ನು ಮಾಡಿಕೊಡುವ ಡೀಲ್ ಒಪ್ಪಿಕೊಂಡಿದ್ದ ಮಾಹಿತಿ ಲಭ್ಯವಾಗಿತ್ತು. ಇದರ ಜೊತೆಗೆ ವಿದೇಶದಲ್ಲಿ ಅಂದರೆ ಆಫ್ರಿಕಾದಲ್ಲಿ ಅಕ್ರಮ ಗಣಿಗಾರಿಕೆಗೆ ಹೂಡಿಕೆ ಮಾಡಿರುವ ವಿಚಾರ ಬಯಲಾಗಿತ್ತು. ವೈ. ಮಂಜುನಾಥ್ ಅವರ ಪತ್ನಿ ಹಾಗೂ ಸಚಿವ ಸತೀಶ್ ಜಾರಕಿಹೊಳಿ ಅವರ ಪುತ್ರ ರಾಹುಲ್ ಜಾರಕಿಹೊಳಿ ಹೆಸರಿನಲ್ಲಿ ಹೂಡಿಕೆ ಮಾಸಿರುವ ದಾಖಲಾತಿಗಳು ಲಭ್ಯವಾಗಿತ್ತು.
ಈಗ ಸಚಿವ ಸತೀಶ್ ಜಾರಕಿಹೊಳಿ ನಿವಾಸಗಳ ಮೇಲೆ ದಾಳಿ ಆಗಿರುವುದನ್ನು ನೋಡಿದ್ರೆ, ಅದಕ್ಕೂ ಇದಕ್ಕೂ ಏನಾದ್ರೂ ಸಂಬಂಧವಿದೆಯೇ? ಎಂಬ ಅನುಮಾನಗಳು ವ್ಯಕ್ತವಾಗುತ್ತಿದೆ. ಬೆಳಿಗ್ಗೆ 5:30 ರ ಸುಮಾರಿಗೆ ಆರಂಭವಾಗಿರುವ ದಾಳಿ ಈಗಲೂ ಮುಂದುವರೆದಿದ್ದು, ದಾಳಿ ವೇಳೆ ಅಧಿಕಾರಿಗಳು ಯಾವೆಲ್ಲಾ ಮಾಹಿತಿಯನ್ನು ಸಂಗ್ರಹಿಸಿದ್ದಾರೆ ಎಂಬುದು ತಿಳಿಯಬೇಕಿದೆ.
ಪ್ರತ್ಯೇಕ ಪ್ರಕರಣ ಸಂಬಂಧ ಸತೀಶ್ ಜಾರಕಿಹೊಳಿಗೆ ಸಂಬಂಧಿಸಿದ 18 ಕಡೆ ದಾಳಿಯಾಗಿದೆ. ಸತೀಶ್ ಜಾರಕಿಹೊಳಿ ಪ್ರಿಯಾಂಕಾ ಜಾರಕಿಹೊಳಿ
ಹಾಗೂ ಮಂಜುನಾಥ್ ರಿಗೆ ಸಂಬಂಧಿಸಿದ 18 ಕಡೆ ದಾಳಿಯಾಗಿದೆ. ಈ ದಾಳಿ ಅಬಕಾರಿ ಇಲಾಖೆಯ ಹಗರಣ ಸಂಬಂಧ ನಡೆದಿರೋ ದಾಳಿಯಲ್ಲ.ಅಬಕಾರಿ ಹಗರಣಕ್ಕೂ ಈ ದಾಳಿಗೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ ಇಡಿ ಕಚೇರಿ.
ವಿದೇಶಿ ಹೂಡಿಕೆ ಸಂಬಂಧ ದಾಳಿ ನಡೆಸಿರುವ ಇಡಿ. ಫೆಮಾ ಫಾರಿನ್ ಎಕ್ಸ್'ಚೇಂಜ್ ಮ್ಯಾನೇಜ್ಮೆಂಟ್ ಆಕ್ಟ್ ನಡಿ ಕೇಸ್ ದಾಖಲಿಸಿರುವ ಇಡಿ.ಆಫ್ರಿಕಾ ಖಂಡದಲ್ಲಿ ಮೈನಿಂಗ್ ಇಂಡಸ್ಟ್ರಿಗಳಲ್ಲಿ ಹೂಡಿಕೆ ಮಾಡಿರುವ ಜಾರಕಿಹೊಳಿ ಕುಟುಂಬ. ಫೆಮಾ ಕಾಯ್ದೆ ಉಲ್ಲಂಘನೆ ಮಾಡಿರೋ ಶಂಕೆ ಹಿನ್ನಲೆ ದಾಳಿ ನಡೆಸಿರುವ ಇಡಿ.