LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Bangalore Urban

ನನ್ನ ಮಗನಿಗೆ ಕಣ್ಣು ಬಂದರೆ ದೇವರು ಮೈಮೇಲೆ ಬರುವುದು ಸತ್ಯ ಎಂದು ನಂಬುತ್ತೇನೆ: ಹುಲಿಕಲ್ ನಟರಾಜ್


ಡಾ. ಹುಲಿಕಲ್ ನಟರಾಜ್ ಅವರು ಮೊದಲಿನಿಂದಲೂ ವೈಜ್ಞಾನಿಕ ಮನೋಭಾವ ಉಳ್ಳವರು. "ವಿಜ್ಞಾನದ ಕಡೆಗೆ ನಮ್ಮ ನಡಿಗೆ" ಎಂದು ಹೇಳುತ್ತಾ ಬಂದವರು ಹಾಗೂ ಡಾ. ಎಚ್. ನರಸಿಂಹಯ್ಯನವರ 'ಪ್ರಶ್ನಿಸದೆ ಒಪ್ಪಬೇಡಿ' ಎನ್ನುವ ಮಾತನ್ನು ಚಾಚೂತಪ್ಪದೆ ಪಾಲಿಸುತ್ತಾ ಬಂದವರು.
ನಾನು ಕೂಡ ನ್ಯಾಷನಲ್ ಹೈಸ್ಕೂಲ್ ಹಾಗೂ ನ್ಯಾಷನಲ್ ಕಾಲೇಜಿನಲ್ಲಿಯೇ ಓದಿದವನಾಗಿರುವುದರಿಂದ, ಎಚ್. ನರಸಿಂಹಯ್ಯನವರ "ಪ್ರಶ್ನಿಸದೆ ಒಪ್ಪಬೇಡಿ" ಎಂಬ ಈ ಮಾತು ನನ್ನ ಎದೆಯಲ್ಲೂ ಗಟ್ಟಿಯಾಗಿ ಬೇರೂರಿದೆ.ಇತ್ತೀಚೆಗೆ ಒಬ್ಬ ದೇವಮಾನವ, ಡಾ. ಹುಲಿಕಲ್ ನಟರಾಜ್ ಅವರ ಬಳಿ ಬಂದು, "ನನಗೆ 41 ದಿನಗಳ ಸಮಯ ಕೊಡಿ, ನಿಮ್ಮ ಮಗನಿಗೆ ಕಣ್ಣು ಬರುವಂತೆ ಮಾಡುತ್ತೇನೆ" ಎಂದು ಹೇಳಿದ್ದ. ಅದಕ್ಕೆ ಒಪ್ಪಿದ ನಟರಾಜ್ ಅವರು, ತಮ್ಮ ಮಗನನ್ನು ಆ ಸವಾಲಿಗೆ ಕಳುಹಿಸಿಕೊಟ್ಟಿದ್ದಾರೆ. ವೈಜ್ಞಾನಿಕವಾಗಿ ಕಳೆದುಕೊಂಡ ಕಣ್ಣು ಮತ್ತೆ ಆ ರೀತಿಯಾಗಿ ಬರಲು ಸಾಧ್ಯವಿಲ್ಲ ಎಂಬುದು ಅವರಿಗೂ ಚೆನ್ನಾಗಿ ಗೊತ್ತು. ಆದರೆ, ಸಮಾಜಕ್ಕೆ ಮತ್ತು ಜನರಿಗೆ ಎಲ್ಲವನ್ನೂ ಪ್ರಾಕ್ಟಿಕಲ್ ಆಗಿಯೇ ಸಾಬೀತುಪಡಿಸಬೇಕು ಎನ್ನುವ ಕಾರಣಕ್ಕೆ ಅವರು ಈ ದಿಟ್ಟ ಹೆಜ್ಜೆ ಇಟ್ಟಿದ್ದಾರೆ."ಕೇಳಿದ್ದು ಸುಳ್ಳಾಗಬಹುದು, ನೋಡಿದ್ದು ಸುಳ್ಳಾಗಬಹುದು, ಪ್ರತಿಯೊಂದನ್ನೂ ಕೂಲಂಕಷವಾಗಿ ಪರೀಕ್ಷಿಸಬೇಕು" ಎಂಬುದನ್ನು ಕೇವಲ ಮಾತಿನಲ್ಲಿ ಹೇಳದೆ, ತಮ್ಮದೇ ಬದುಕಿನ ಉದಾಹರಣೆಯ ಮೂಲಕ ಅವರು ಸಮಾಜಕ್ಕೆ ತೋರಿಸಿಕೊಡುತ್ತಿದ್ದಾರೆ. ಸತ್ಯವನ್ನು ಹುಡುಕುವ ಮತ್ತು ಮೂಢನಂಬಿಕೆಗಳನ್ನು ಪ್ರಶ್ನಿಸುವ ಅವರ ಈ ಮಾರ್ಗ, ಮುಂಬರುವ ಪೀಳಿಗೆಗೆ ನಿಜಕ್ಕೂ ಒಂದು ದೊಡ್ಡ ಮಾರ್ಗದರ್ಶಕವಾಗಿದೆ.ನಾಳೆ ಅಂದ್ರೆ 9/9/2026 ರಂದು ಎರಡೂ ಕಣ್ಣು ಗಳು ಕಾಣದ ನನ್ನ ಮಗನಿಗೆ ಕಣ್ಣು ಬರುವಂತೆ ಮಾಡುತ್ತೇನೆಂದು ರಾಜ ಮಹಾರಾಜಾ ಶ್ರೀನಿವಾಸ ಸನ್ನಿದಿಯವರು 41 ದಿನಗಳ ಕಾಲ ನನ್ನ ಮಗನಿಂದ ನಾನು ದೂರ ಇರಬೇಕು ಮತ್ತು ನಾನು ಹೇಳಿದ ರೀತಿ ಕೇಳಬೇಕು, ಎಂದು ತನ್ನ ಮೇಲೆ ಮಹಾಕಾಳಿ ಮೈಮೇಲೆ ಬಂದು ಹೇಳಿದ್ದಾರೆ ಎಂಬAತೆ ನನ್ನನ್ನು ಮತ್ತು ನನ್ನ ಕುಟುಂಬವನ್ನು ನಂಬಿಸಿ ಅವರು ಹೇಳಿದಂತೆ ನಾಳೆ 41 ದಿನಗಳು ಮುಕ್ತಾಯವಾಗಿರುತ್ತದೆ. ಈ ಸಂಬAಧ ನಮ್ಮ ಯೌಟ್ಯೂಬ್ ಚಾನೆಲ್ ಮತ್ತು ನನ್ನ ಬಳಿ ಅವರನ್ನು ಕರೆತಂದಿದ್ದ ಸ್ವದೇಸಿ ಮೀಡಿಯಾ ದವರೂ ಸಹ ಸಾಕಷ್ಟು ಸರಣಿ ರೂಪದಲ್ಲಿ ಲಕ್ಷಾಂತರ ಸಾರ್ವಜನಿಕರಿಗೆ ಪ್ರಸಾರವಾಗಿರುತ್ತದೆ. ಅಲ್ಲದೆ ನ್ಯಾಯ ಮಾಧ್ಯಮ ಚಾನೆಲ್ ನಲ್ಲಿಯೂ ಸಹ ಪ್ರಸಾರವಾಗಿದೆ. ಸದರಿ ಸನ್ನಿವೇಶವನ್ನ ನೋಡಲು ಬಹಳಷ್ಟು ಮಂದಿ ಕಾತುರದಿಂದ ಕಾಯುತ್ತಿದ್ದಾರೆ. ಹೀಗಾಗಿರುವಾಗ್ಗೆ ಶ್ರೀನಿವಾಸ ಸನ್ನಿದಿಯವರು ಕಾರಣಾತರದಿಂದ ನಾಳೆ ಬರಲು ಸಾಧ್ಯವಾಗುತ್ತಿಲ್ಲ, 12 ನೇ ತಾರೀಕಿಗೆ ಬರ್ತೇನೆ, ವೈದ್ಯರನ್ನ ಕರೆಸಿ ಅವರ ಸಮ್ಮುಖದಲ್ಲೇ ಆ ಪವಾಡ ಮಾಡಿ ತೋರಿಸ್ತೇನೆ ಎಂದು ಹೇಳಿದ್ದಾರೆ. ಈಗ ನಾನು ಹೇಳುವುದೇನೆಂದರೆ, ಈ ಸನ್ನಿವೇಶದಿಂದ ನನ್ನ ಮಗನ ಕಣ್ಣುಗಳು ಕಾಣಿಸುವಂತೆ ಮಾಡಿದರೆ ನನ್ನಷ್ಟು ಸಂತೋಷ ಪಡುವ ವ್ಯಕ್ತಿ ಬೇರೆ ಯಾರೂ ಇಲ್ಲ. ನಾನು ಇಲ್ಲಿಯತನಕ ಮೌಢ್ಯಚಾರಣೆ ವಿರುದ್ಧವಾಗಿ ಹೋರಾಟ ಮಾಡುತ್ತಿರುವುದನ್ನ ಆ ಕ್ಷಣದಲ್ಲೇ ನಿಲ್ಲಿಸಿಬಿಡುತ್ತೇನೆ. ಇಂತಹ ಸನ್ನಿವೇಶಕ್ಕೆ ನಾನು ನೀವು ಎಲ್ಲಾ ಲಕ್ಷಾಂತರ ಜನ ಕಾಯ್ತಾ ಇದ್ದಾರೆ. ಅವರೆಲ್ಲರಿಗೂ ಕ್ಷಮೆ ಕೇಳುತ್ತೇನೆ. ರಾಜ ಶ್ರೀನಿವಾಸ ಸನ್ನಿಧಿಯವರು ನಾಳೆ ಬರಲು ಕಾರಣಾತರದಿಂದ ಸಾಧ್ಯವಾಗಿಯಿಲ್ಲವಂತೆ. 12 ನೇ ತಾರೀಕು ಬರ್ತಾರಂತೆ, ಅಲ್ಲಿಯವರೆಗೂ ತಾಳ್ಮೆಯಿಂದ ನಾವು ಕಾಯೋಣ, ಒಂದುವೇಳೆ 12 ನೇ ತಾರೀಖಿಗೂ ಬರದಿದ್ಜರೆ ಇನ್ನು ಒಂದು ವಾರ ಸಮಯವಕಾಶ ಕೊಡೋಣ, ಒಟ್ಟಿನಲ್ಲಿ ನಮ್ಮ ಜನರಿಗೆ ಯಾವತ್ತೂ ಸತ್ಯವನ್ನ ಹೇಳಬೇಕು, ನಿಜಾಂಶ ಗೊತ್ತಾಗಬೇಕು ಎಂಬುದು ನನ್ನ ಅನಿಸಿಕೆ. 
- ಶ್ರೀನಿಧಿ, ಕನ್ನಡ ಚಲನಚಿತ್ರ ಬರಹಗಾರ ಹಾಗೂ ನಿರ್ದೇಶಕ, ಬೆಂಗಳೂರು

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST