LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Sports News

ತೈಪೆ ಓಪನ್ ಬ್ಯಾಡ್ಮಿಂಟನ್ ಗೆದ್ದು ಇತಿಹಾಸ ಬರೆದ 17ರ ತನ್ವಿ ಶರ್ಮಾ


ತೈಪೆ: ಭಾರತದ 17 ವರ್ಷದ ಉದಯೋನ್ಮುಖ ಬ್ಯಾಡ್ಮಿಂಟನ್ ತಾರೆ ತನ್ವಿ ಶರ್ಮಾ ತೈಪೆ ಓಪನ್ ಟೂರ್ನಿಯಲ್ಲಿ ವಿಶ್ವದ 21ನೇ ಶ್ರೇಯಾಂಕಿತ ಆಟಗಾರ್ತಿ ನ್ಗುಯೆನ್ (ಓguಥಿeಟಿ) ಅವರನ್ನು 21-16, 21-16 ನೇರ ಸೆಟ್‌ಗಳಿಂದ ಮಣಿಸಿ ಐತಿಹಾಸಿಕ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.
ಕೇವಲ 36 ನಿಮಿಷಗಳಲ್ಲಿ ಪಂದ್ಯವನ್ನು ಗೆದ್ದುಕೊಂಡ ತನ್ವಿ ಕ್ರೀಡಾಲೋಕದಲ್ಲಿ ಹೊಸ ಸಂಚಲನ ಸೃಷ್ಟಿಸಿದ್ದಾರೆ. ತನ್ವಿ ಶರ್ಮಾ (17 ವರ್ಷ 222 ದಿನಗಳು) ತೈಪೆ ಓಪನ್ ಇತಿಹಾಸದಲ್ಲೇ ಪ್ರಶಸ್ತಿ ಗೆದ್ದ ಅತ್ಯಂತ ಕಿರಿಯ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಮೂಲಕ ಅವರು ತೈ ತ್ಸು ಯಿಂಗ್ ಅವರ ಹೆಸರಲ್ಲಿದ್ದ ದಾಖಲೆಯನ್ನು ಮುರಿದ್ದಾರೆ. 2008ರಲ್ಲಿ ಸೈನಾ ನೆಹ್ವಾಲ್ ಈ ಟ್ರೋಫಿ ಗೆದ್ದ ನಂತರ ತೈಪೆ ಓಪನ್ ಮಹಿಳಾ ಸಿಂಗಲ್ಸ್ ಪ್ರಶಸ್ತಿ ಜಯಿಸಿದ ಎರಡನೇ ಭಾರತೀಯ ಆಟಗಾರ್ತಿ ಎಂಬ ಕೀರ್ತಿಗೆ ತನ್ವಿ ಭಾಜನರಾಗಿದ್ದಾರೆ.
ಐತಿಹಾಸಿಕ ಗೆಲುವಿನ ಬಳಿಕ ಮಾತನಾಡಿದ ತನ್ವಿ, ಈ ಪ್ರಶಸ್ತಿ ಗೆದ್ದಿರುವುದು ನನಗೆ ತುಂಬಾ ಸಂತಸ ತಂದಿದೆ. ನಾನು ಪ್ರಶಸ್ತಿ ಗೆಲ್ಲುತ್ತೇನೆ ಎಂದು ಅಂದುಕೊAಡಿರಲಿಲ್ಲ, ಆದರೆ ಪ್ರತಿ ಪಂದ್ಯದಲ್ಲೂ ನನ್ನ 100% ಶ್ರಮ ನೀಡಬೇಕೆಂದುಕೊAಡಿದ್ದೆ. ಪಂದ್ಯದಿAದ ಪಂದ್ಯಕ್ಕೆ ಹಂತ ಹಂತವಾಗಿ ಸಾಗಿದೆ ಎಂದು ಹಂಚಿಕೊAಡಿದ್ದಾರೆ.  ಗುವಾಹಟಿಯ ನ್ಯಾಷನಲ್ ಸೆಂಟರ್ ಆಫ್ ಎಕ್ಸಲೆನ್ಸ್ನಲ್ಲಿ ದಕ್ಷಿಣ ಕೊರಿಯಾದ ಪಾರ್ಕ್ ಟೇ-ಸಾಂಗ್ ಅವರ ಗರಡಿಯಲ್ಲಿ ತರಬೇತಿ ಪಡೆಯುತ್ತಿರುವ ತನ್ವಿ, ಇಡೀ ಟೂರ್ನಿಯುದ್ದಕ್ಕೂ ಕೇವಲ ಒಂದೇ ಒಂದು ಗೇಮ್ ಅನ್ನು ಸೋತು ಅದ್ಭುತ ನಿಯಂತ್ರಣ ಪ್ರದರ್ಶಿಸಿದರು. ಗೆಲುವಿನ ನಂತರ ತನ್ವಿ ತಮಗೆ ಸಿಕ್ಕ ಚಿನ್ನದ ಪದಕವನ್ನು ತಮ್ಮ ಕೋಚ್ ಪಾರ್ಕ್ ಟೇ-ಸಾಂಗ್ ಅವರ ಕೊರಳಿಗೆ ಹಾಕಿ ಗೌರವ ಸಲ್ಲಿಸಿದ್ದು ವಿಶೇಷವಾಗಿತ್ತು.ಪಂಜಾಬ್‌ನ ಹೊಷಿಯಾರ್‌ಪುರ ಮೂಲದ ತನ್ವಿ, ಮಾಜಿ ರಾಷ್ಟ್ರೀಯ ವೊಲಿಬಾಲ್ ಆಟಗಾರ್ತಿಯಾಗಿರುವ ತಮ್ಮ ತಾಯಿ ಮೀನಾ ಶರ್ಮಾ ಅವರಿಂದ ಬ್ಯಾಡ್ಮಿಂಟನ್ ತರಬೇತಿ ಪಡೆದ್ದರು. ಈ ಹಿಂದೆ ವಿಶ್ವ ಜೂನಿಯರ್ ಚಾಂಪಿಯನ್‌ಷಿಪ್‌ನಲ್ಲಿ ಪದಕ ಹಾಗೂ ಏಷ್ಯನ್ ಟೀಮ್ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆದ್ದಿದ್ದ ತನ್ವಿ, ಈಗ ಹಿರಿಯರ ವಿಭಾಗದಲ್ಲೂ ತಮ್ಮ ಛಾಪು ಮೂಡಿಸುತ್ತಿದ್ದಾರೆ. ತನ್ವಿ ಅವರ ಈ ಐತಿಹಾಸಿಕ ಸಾಧನೆಗೆ ಭಾರತದ ಪ್ರಮುಖ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು ಅಭಿನಂದನೆ ಸಲ್ಲಿಸಿದ್ದಾರೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST