ಬೆಂಗಳೂರು: ಜಾನಪದ ನಮ್ಮ ನಾಡಿನ ಅಸ್ಮಿತೆ, ಸಂಸ್ಕöÈತಿ ಮತ್ತು ಬದುಕಿನ ಅವಿಭಾಜ್ಯ ಅಂಗವಾಗಿದೆ. ಜಾನಪದವನ್ನು ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ. ಹುಟ್ಟಿನಿಂದ ಸಾವಿನವರೆಗೂ ಜಾನಪದ ನಮ್ಮೊಂದಿಗೆ ಇರುತ್ತದೆ. ಜಾನಪದ ಕಲೆ ಮತ್ತು ಕಲಾವಿದರ ಬದುಕನ್ನು ಸಂರಕ್ಷಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ವಿಧಾನ ಪರಿಷತ್ ಉಪಸಭಾಪತಿ ಉಮಾಶ್ರೀ ಹೇಳಿದರು.
ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಕನ್ನಡ ಜಾನಪದ ಪರಿಷತ್ ಘಟಕದ ವತಿಯಿಂದ ಬೆಂಗಳೂರಿನ ಮೂಡಲಪಾಳ್ಯ ಕಲ್ಯಾಣನಗರದ ಜ್ಞಾನಸೌಧ ಸಭಾಂಗಣದಲ್ಲಿ* ಆಯೋಜಿಸಿದ್ದ *ಪ್ರಥಮ ಮಹಿಳಾ ಜಾನಪದ ಸಮ್ಮೇಳನವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಜಾನಪದ ಕಲಾವಿದರು ತಮ್ಮ ಇಡೀ ಜೀವನವನ್ನು ಕಲೆ, ಸಂಸ್ಕöÈತಿ ಮತ್ತು ಪರಂಪರೆಯ ಉಳಿವಿಗಾಗಿ ಮುಡಿ ಪಾಗಿಟ್ಟಿದ್ದಾರೆ. ಅನೇಕ ಕಲಾವಿದರು ವಯೋವೃದ್ಧರಾದ ನಂತರವೂ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಅವರಿಗೆ ನೀಡಲಾಗುತ್ತಿರುವ ಮಾಶಾಸನವನ್ನು ಹೆಚ್ಚಿಸುವ ಅಗತ್ಯವಿದೆ. ಅಲ್ಲದೆ, ಮಾಶಾಸನ ಪಡೆಯಲು ಇರುವ ವಯೋಮಿತಿಯನ್ನು ಕಡಿಮೆ ಮಾಡುವ ಕುರಿತು ಕೂಡ ಚಿಂತನೆ ನಡೆಸಬೇಕಾಗಿದೆ. ಈ ಎರಡೂ ವಿಷಯಗಳ ಬಗ್ಗೆ *ಮುಖ್ಯಮಂತ್ರಿಗಳೊAದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲು ಪ್ರಯತ್ನಿಸುವುದಾಗಿ* ಉಮಾಶ್ರೀ ಭರವಸೆ ನೀಡಿದರು.
ಜಾನಪದ ಕಲೆ ಕೇವಲ ಮನರಂಜನೆಯ ಸಾಧನವಲ್ಲ. ಅದು ನಮ್ಮ ಪೂರ್ವಿಕರ ಬದುಕು, ಅನುಭವ, ಜ್ಞಾನ, ಆಚರಣೆ, ನಂಬಿಕೆ ಮತ್ತು ಜೀವನ ಪದ್ಧತಿಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ಅಮೂಲ್ಯ ಪರಂಪರೆಯಾಗಿದೆ. ಜಾನಪದ ಕಲಾವಿದರನ್ನು ಗುರುತಿಸಿ ಗೌರವಿಸುವುದರ ಜೊತೆಗೆ ಅವರ ಬದುಕಿಗೆ ಭದ್ರತೆ ಕಲ್ಪಿಸುವ ಕೆಲಸವೂ ನಡೆಯಬೇಕು ಎಂದರು.
ಮಹಿಳೆಯರು ಜಾನಪದ ಪರಂಪರೆಯ ಸಂರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ತಲೆತಲಾಂತರಗಳಿAದ ಬಂದಿರುವ ಅನೇಕ ಜಾನಪದ ಕಲೆಗಳು ಮಹಿಳೆಯರ ಮೂಲಕವೇ ಉಳಿದುಕೊಂಡಿವೆ. ಇಂತಹ ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಇನ್ನಷ್ಟು ವ್ಯಾಪಕವಾಗಿ ನಡೆಯಬೇಕು ಎಂದು ಉಮಾಶ್ರೀ ಹೇಳಿದರು.
ಜಾನಪದವನ್ನು ಮುಂದಿನ ಪೀಳಿಗೆಗೆ ವರ್ಗಾಯಿಸಬೇಕು: ಡಾ. ಪದ್ಮಾ ನಾಗರಾಜ್
ಸಮ್ಮೇಳನದ ಸರ್ವಾಧ್ಯಕ್ಷೆ ಡಾ. ಪದ್ಮಾ ನಾಗರಾಜ್ ಮಾತನಾಡಿ, ಜಾನಪದದ ಎಲ್ಲ ಆಯಾಮಗಳನ್ನು ಸಮಗ್ರವಾಗಿ ಗುರುತಿಸಿ ಸಂರಕ್ಷಿಸುವ ಅಗತ್ಯವಿದೆ. ಜಾನಪದ ಕೇವಲ ಒಂದು ಕಲೆ ಅಥವಾ ಮನರಂಜನೆಯ ಕ್ಷೇತ್ರವಲ್ಲ; ಅದು ನಮ್ಮ ಸಾಮಾಜಿಕ, ಸಾಂಸ್ಕöÈತಿಕ ಮತ್ತು ಜೀವನ ಪರಂಪರೆಯ ಪ್ರತಿಬಿಂಬವಾಗಿದೆ ಎಂದು ಹೇಳಿದರು.
ಜಾನಪದದ ಹಾಡು, ಕಥೆ, ಗಾದೆ, ಒಗಟು, ಆಚರಣೆ, ಸಂಪ್ರದಾಯ, ನೃತ್ಯ, ವಾದ್ಯ, ಕರಕುಶಲ, ಗ್ರಾಮೀಣ ಜ್ಞಾನ ಹಾಗೂ ಜನಪದ ನಂಬಿಕೆಗಳನ್ನು ದಾಖಲಿಸಿ ಸಂರಕ್ಷಿಸುವ ಕಾರ್ಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಹಿರಿಯ ಕಲಾವಿದರಲ್ಲಿರುವ ಅಪಾರ ಜ್ಞಾನ ಮತ್ತು ಅನುಭವವನ್ನು ದಾಖಲಿಸಿ ಮುಂದಿನ ಪೀಳಿಗೆಗೆ ತಲುಪಿಸುವ ಅಗತ್ಯವಿದೆ ಎಂದರು.
ಜಾನಪದವನ್ನು ಮುಂದಿನ ಪೀಳಿಗೆಗೆ ವರ್ಗಾಯಿಸುವುದು ನಮ್ಮೆಲ್ಲರ ಕರ್ತವ್ಯ. ಹಿರಿಯರು ತಮ್ಮ ಅನುಭವ ಮತ್ತು ಜ್ಞಾನವನ್ನು ಯುವಜನತೆಗೆ ಹಂಚಬೇಕು. ಯುವಜನತೆ ಜಾನಪದವನ್ನು ಕೇವಲ ಹಿಂದಿನ ಕಾಲದ ಪರಂಪರೆ ಎಂದು ನೋಡದೆ, ಅದನ್ನು ತಮ್ಮ ಬದುಕಿನ ಭಾಗವನ್ನಾಗಿ ಮಾಡಿಕೊಂಡು ಮುಂದುವರಿಸಬೇಕು ಎಂದು ಡಾ. ಪದ್ಮಾ ನಾಗರಾಜ್ ಕರೆ ನೀಡಿದರು.
ಜಾನಪದ ಸಂರಕ್ಷಣೆಯಲ್ಲಿ ಮಹಿಳೆಯರ ಕೊಡುಗೆ ಅಪಾರವಾಗಿದೆ. ಗ್ರಾಮೀಣ ಮಹಿಳೆಯರು ಹಾಡು, ಹಬ್ಬ, ಆಚರಣೆ, ಸಂಪ್ರದಾಯ ಹಾಗೂ ವಿವಿಧ ಜನಪದ ಕಲೆಗಳ ಮೂಲಕ ತಲೆಮಾರುಗಳಿಂದ ಜಾನಪದವನ್ನು ಜೀವಂತವಾಗಿಟ್ಟಿದ್ದಾರೆ. ಮಹಿಳಾ ಜಾನಪದ ಕಲಾವಿದರಿಗೆ ಹೆಚ್ಚಿನ ಅವಕಾಶ, ತರಬೇತಿ ಮತ್ತು ವೇದಿಕೆಗಳನ್ನು ಒದಗಿಸುವ ಅಗತ್ಯವಿದೆ ಎಂದರು.
ಜಾನಪದವನ್ನು ಉಳಿಸುವ ಕಾರ್ಯ ಕೇವಲ ಸರ್ಕಾರ ಅಥವಾ ಒಂದು ಸಂಸ್ಥೆಯ ಜವಾಬ್ದಾರಿಯಲ್ಲ. ಸಮಾಜ, ಶಿಕ್ಷಣ ಸಂಸ್ಥೆಗಳು, ವಿಶ್ವವಿದ್ಯಾಲಯಗಳು, ಸಂಘ-ಸAಸ್ಥೆಗಳು ಹಾಗೂ ಯುವಜನತೆ ಒಟ್ಟಾಗಿ ಕೆಲಸ ಮಾಡಿದಾಗ ಮಾತ್ರ ಜಾನಪದ ಪರಂಪರೆಯನ್ನು ಬಲವಾಗಿ ಮುಂದುವರಿಸಲು ಸಾಧ್ಯ ಎಂದು ಅವರು ಹೇಳಿದರು.
ಕನ್ನಡ ಜಾನಪದ ಪರಿಷತ್ ಕಾರ್ಯ ಶ್ಲಾಘನೀಯ: ಡಾ. ಸಿ. ಸೋಮಶೇಖರ್; ಕಾರ್ಯಕ್ರಮದಲ್ಲಿ ಮಾತನಾಡಿದ ಡಾ. ಸಿ. ಸೋಮಶೇಖರ್, ಐಎಎಸ್, ಕನ್ನಡ ಜಾನಪದ ಪರಿಷತ್ ರಾಜ್ಯದಾದ್ಯಂತ ಜಾನಪದ ಕಲೆ, ಕಲಾವಿದರು ಹಾಗೂ ಜಾನಪದ ಸಂಸ್ಕöÈತಿಯ ಸಂರಕ್ಷಣೆಗೆ ನಿರಂತರವಾಗಿ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯವಾಗಿದೆ. ಇಂತಹ ಸಂಸ್ಥೆಗಳು ಇತರ ಸಂಘ-ಸAಸ್ಥೆಗಳಿಗೆ ಅನುಕರಣೀಯ ಹಾಗೂ ಮಾದರಿಯಾಗಿವೆ ಎಂದು ಹೇಳಿದರು.
ಡಾ. ಜಾನಪದ ಎಸ್. ಬಾಲಾಜಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಜಾನಪದ ಕಲೆ ಮತ್ತು ಕಲಾವಿದರ ಸಂರಕ್ಷಣೆ, ಜಾನಪದ ದಾಖಲಾತಿ ಹಾಗೂ ಯುವಜನತೆಯಲ್ಲಿ ಜಾನಪದದ ಬಗ್ಗೆ ಅರಿವು ಮೂಡಿಸುವ ಅಗತ್ಯದ ಕುರಿತು ಮಾತನಾಡಿದರು.
ಡಾ. ಸಮತಾ ದೇಶ್ಮನೆ ಅವರು ಸಮ್ಮೇಳನದ ಸರ್ವಾಧ್ಯಕ್ಷೆ ಡಾ. ಪದ್ಮಾ ನಾಗರಾಜ್ ಅವರ ಪರಿಚಯ ಮಾಡಿಕೊಟ್ಟರು. ಆರ್. ನರಸಿಂಹಮೂರ್ತಿ ಸ್ವಾಗತಿಸಿದರು. ಮಹಿಳಾ ಘಟಕದ ಅಧ್ಯಕ್ಷೆ ಸವಿತಾ ಕುಮಾರ್ ವಂದಿಸಿದರು.
ವಿಜಯನಗರ ಶಾಸಕರ ಪುತ್ರ ಶ್ರೀ ಪ್ರದೀಪ್ ಕೃಷ್ಣಪ್ಪ ಅವರು ಸನ್ಮಾನ ಸ್ವೀಕರಿಸಿದರು. ಕಾರ್ಯಕ್ರಮದಲ್ಲಿ ಸುಮಾರು 41 ಮಂದಿ ಜಾನಪದ ಸಾಧಕರನ್ನು ವಿವಿಧ ಪ್ರಶಸ್ತಿ, ಗೌರವ ಹಾಗೂ ಬಿರುದುಗಳೊಂದಿಗೆ ಸನ್ಮಾನಿಸಿ ಅಭಿನಂದಿಸಲಾಯಿತು.
ಸಮ್ಮೇಳನದಲ್ಲಿ ಖ್ಯಾತ ಜಾನಪದ ಗಾಯಕ ಶ್ರೀ ಗುರುರಾಜ ಹೊಸಕೋಟೆ, ಶ್ರೀಮತಿ ಶರ್ಮವಂಗಲ ಸೋಮಶೇಖರ್, ಡಾ. ನಿರ್ಮಲಾ ಎಳಿಗಾರ್, ಡಾ. ಮಂಜುಳಾ ಮಹದೇವಪ್ಪ, ಶ್ರೀ ಅಜಿತ್ ಸಾಗರ್ ಹಾಗೂ ಶ್ರೀ ಜಯಪ್ರಕಾಶ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಜಾನಪದ ಕಲೆ, ಸಾಹಿತ್ಯ, ಸಂಸ್ಕೃತಿ ಮತ್ತು ಪರಂಪರೆಯ ಸಂರಕ್ಷಣೆಯ ಜೊತೆಗೆ ಮಹಿಳಾ ಜಾನಪದ ಕಲಾವಿದರಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಹಾಗೂ ಜಾನಪದವನ್ನು ಮುಂದಿನ ಪೀಳಿಗೆಗೆ ತಲುಪಿಸಬೇಕು ಎಂಬ ಸಂದೇಶದೊAದಿಗೆ ಪ್ರಥಮ ಮಹಿಳಾ ಜಾನಪದ ಸಮ್ಮೇಳನ ಅರ್ಥಪೂರ್ಣವಾಗಿ ನಡೆಯಿತು.