ಬೆಂಗಳೂರು; ಮಾಳಗಾಳದ ಭಾರತೀಯ ಸಂಸ್ಕöÈತಿ ವಿದ್ಯಾಪೀಠದಲ್ಲಿ `ಡಾ. ಕೆ. ನಾಗೇಶ ಹತ್ವಾರ ಅವರ ಜನ್ಮ ಶತಮಾನೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಗುರುವಂದನಾ ಕಾರ್ಯಕ್ರಮವು ವಿಶೇಷ ಮಹತ್ವ ಪಡೆದುಕೊಂಡಿತು. ಅವರ ಸ್ಮರಣೆ ಹಾಗೂ ಶಿಕ್ಷಣ ಕ್ಷೇತ್ರದ ಮೌಲ್ಯಗಳನ್ನು
ನೆನಪಿಸಿಕೊಳ್ಳುವ ಜೊತೆಗೆ, ಗುರು-ಶಿಷ್ಯ ಪರಂಪರೆಯ ಮಹತ್ವವನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ಪ್ರಯತ್ನ ಕಂಡುಬಂತು.
ವಿದ್ಯಾರ್ಥಿಗಳು ವಿವಿಧ ಸಾಂಸ್ಕೃ ತಿಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿ ಕಾರ್ಯಕ್ರಮಕ್ಕೆ ಮೆರುಗು ತಂದರು. ವಿದ್ಯಾರ್ಥಿಗಳ ಪ್ರತಿಭೆ, ಶಿಸ್ತು ಮತ್ತು ಆತ್ಮವಿಶ್ವಾಸವನ್ನು ಕಂಡ ಪೋಷಕರು ಸಂತಸ ವ್ಯಕ್ತಪಡಿಸಿದರು. ಮಕ್ಕಳ ಪ್ರತಿಭೆಯನ್ನು ಬೆಳೆಸುವಲ್ಲಿ ಶಾಲೆ ಮತ್ತು ಪೋಷಕರು ಒಟ್ಟಾಗಿ ಕೆಲಸ ಮಾಡಬೇಕಾದ ಅಗತ್ಯವನ್ನು ಕಾರ್ಯಕ್ರಮ ಮತ್ತೊಮ್ಮೆ ಸಾರಿತು.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಶಿವಕುಮಾರ ನಾಗರನವಿಲೆ ಅವರು ಮಾತನಾಡಿ, ಶಿಕ್ಷಕರು ಕೇವಲ ಪಾಠ ಬೋಧಿಸುವವರಲ್ಲ; ಅವರು ವಿದ್ಯಾರ್ಥಿಗಳ ಬದುಕಿಗೆ ದಿಕ್ಕು ತೋರಿಸುವ ಮಾರ್ಗದರ್ಶಕರು ಎಂದು ಹೇಳಿದರು. ಒಬ್ಬ ವಿದ್ಯಾರ್ಥಿಯ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಮಾತು, ಮಾರ್ಗದರ್ಶನ ಹಾಗೂ ಪ್ರೋತ್ಸಾಹ ಮಹತ್ವದ ಪಾತ್ರ ವಹಿಸುತ್ತದೆ. ಆದ್ದರಿಂದ ಶಿಕ್ಷಕರಿಗೆ ನೀಡುವ ಗೌರವವು ವಾಸ್ತವವಾಗಿ ಜ್ಞಾನಕ್ಕೆ, ಶಿಕ್ಷಣಕ್ಕೆ ಮತ್ತು ಸಮಾಜ ನಿರ್ಮಾಣದ ಮಹತ್ತರ ಕಾರ್ಯಕ್ಕೆ ನೀಡುವ ಗೌರವವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು. ಶಾಲೆಯ ಅಭ್ಯುದಯಕ್ಕೆ ಶಿಕ್ಷಕರು ಶ್ರಮಿಸುತ್ತಿದ್ದು; ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಿರುವುದು ಪ್ರಶಂಸನೀಯವಾಗಿದೆ.
ಸರಳತೆ, ಸಂಸ್ಕಾರ ಮತ್ತು ಆತ್ಮೀಯತೆಯಿಂದ ಕೂಡಿದ್ದ ಈ ಕಾರ್ಯಕ್ರಮವು ಭಾಗವಹಿಸಿದ್ದ ಪ್ರತಿಯೊಬ್ಬರ ಮನದಲ್ಲೂ ಶಿಕ್ಷಕರ ಮೇಲಿನ ಗೌರವವನ್ನು ಮತ್ತಷ್ಟು ಹೆಚ್ಚಿಸಿತು. ಗುರುವನ್ನು ಗೌರವಿಸುವ ಸಂಸ್ಕöÈತಿ ಉಳಿದಾಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂಬ ಸಂದೇಶದೊಂದಿಗೆ ಕಾರ್ಯಕ್ರಮ ಅರ್ಥಪೂರ್ಣವಾಗಿ ಸಂಪನ್ನಗೊಂಡಿತು. ಬಿಎಸ್ ವಿಪಿ ಇನ್ಸ್ ಟ್ಯೂಟ್ ನ ಸಹ ಸಂಸ್ಥಾಪಕಿ ಕೆ.ಎನ್.ಪುಟ್ಟಮ್ಮ, ಪ್ರಧಾನ ಕಾರ್ಯದರ್ಶಿ
ಡಾ.ಕೆ.ಎನ್.ಪುಷ್ಪಲತಾ, ಜಂಟಿ ಕಾರ್ಯದರ್ಶಿ ಉಶಾ ಆಚಾರ್ಯ, ಅಕಾಡೆಮಿಕ್ ಕೋ-ಆರ್ಡಿನೇಟರ್ ಕೆ.ಆರ್.ಕೃಷ್ಣಮೂರ್ತಿ, ಬಿಎಸ್ ವಿ ಪಬ್ಲಿಕ್ ಶಾಲೆಯ ಪ್ರಿನ್ಸಿಪಾಲ್ ಪುನೀತ್ ಕುಮಾರ್ ಎಸ್.ಜೆ. ಕಾರ್ಯಕ್ರಮದಲ್ಲಿ ಹಾಜರಿದ್ದರು.