LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Sports News

ರೋಕೊ ಭವಿಷ್ಯದ ಬಗ್ಗೆ ಹುಬ್ಬೇರಿಸಿದ ಪಾಕ್ ಕ್ರಿಕೆಟಿಗನ ಭವಿಷ್ಯ


ನವದೆಹಲಿ: 2027ರ ಏಕದಿನ ವಿಶ್ವಕಪ್‌ಗೆ ಇನ್ನೂ ಹಲವಾರು ತಿಂಗಳು ಬಾಕಿ ಇರುವಾಗಲೇ ಟೀಮ್ ಇಂಡಿಯಾದ ದಿಗ್ಗಜ ಆಟಗಾರರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರ ಎಂಟ್ರಿ ಕುರಿತು ಈಗಾಗಲೇ ಸಾಕಷ್ಟು ಚರ್ಚೆಗಳು ಆರಂಭವಾಗಿದೆ. ಹಲವರು ಇವರಿಬ್ಬರಿಗೆ ಅವಕಾಶ ಸಿಗುವುದು ಬಹುತೇಕ ಅನುಮಾನ ಎಂದೆಲ್ಲ ಮಾತನಾಡುತ್ತಿದ್ದಾರೆ. ಈ ಮಧ್ಯೆ, ಪಾಕಿಸ್ತಾನದ ಮಾಜಿ ಹಿರಿಯ ಆಟಗಾರನ ಅಚ್ಚರಿ ಹೇಳಿಕೆಯೊಂದು ಸದ್ಯ ರೋಕೊ ಜೋಡಿಯ ಅಭಿಮಾನಿಗಳ ಹುಬ್ಬೇರಿಸಿದೆ. ಏಷ್ಯನ್ ಬ್ರಾಡ್‌ಮನ್' ಎಂದೇ ಖ್ಯಾತಿ ಪಡೆದಿರುವ ಜಹೀರ್ ಅಬ್ಬಾಸ್ ಮಾತನಾಡಿ, ಕೊಹ್ಲಿ ಮತ್ತು ರೋಹಿತ್‌ಗೆ ಎಂದಿಗೂ ವಯಸ್ಸು ಮಾನದಂಡ ಆಗಬಾರದು. ಇವರಿಬ್ಬರಿಗೆ ವಯಸ್ಸು ಯಾವ ಲೆಕ್ಕ. ಇಬ್ಬರೂ ಸಖತ್ ಫಿಟ್ ಆಗಿದ್ದಾರೆ ಮತ್ತು ಏಕದಿನ ಪಂದ್ಯಗಳಲ್ಲಿ ರನ್ ಕಲೆಹಾಕುತ್ತಿದ್ದಾರೆ. ಇದನ್ನೆಲ್ಲ ನೋಡಿದಾಗ, ರೋಕೊ ಜೋಡಿ ಖಂಡಿತವಾಗಿ ಮುಂಬರುವ ವಿಶ್ವಕಪ್‌ನಲ್ಲಿ ಆಡಬೇಕು ಎಂದು ಹೇಳಿದರು.
ಪಾಕ್‌ನ ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತು ಮುಂದುವರಿಸಿದ ಅವರು, ರೋಹಿತ್ ಮತ್ತು ಕೊಹ್ಲಿ ಇಬ್ಬರೂ ಅದ್ಭುತ ಕೌಶಲ್ಯ ಹೊಂದಿರುವ ಕ್ರಿಕೆಟಿಗರು. ಅವರ ಅನುಭವ ಭಾರತಕ್ಕೆ ದೊಡ್ಡ ಶಕ್ತಿಯಾಗಿದೆ. ಇಂದಿಗೂ ಸಹ ಇಬ್ಬರು ಫಿಟ್ ಆಗಿದ್ದಾರೆ. ಸತತವಾಗಿ ರನ್ ಗಳಿಸುತ್ತಿರುವ ದಿಗ್ಗಜ ಕ್ರಿಕೆಟಿಗರಿಗೆ ವಯಸ್ಸು ಸಮಸ್ಯೆಯೇ ಅಲ್ಲ. ವಿಶ್ವಕಪ್‌ನಲ್ಲಿ ಇವರಿಬ್ಬರೂ ಟೀಮ್ ಇಂಡಿಯಾ ಪರ ಆಡಬೇಕು ಎಂದರು. ರೋಹಿತ್‌ಗೆ ಕಿವಿಮಾತು: ರೋಹಿತ್ ಶರ್ಮಾ ಬಗ್ಗೆ ಮಾತನಾಡಿದ ಜಹೀರ್ ಅಬ್ಬಾಸ್, ಟೀಮ್ ಇಂಡಿಯಾದ ಮಾಜಿ ಕ್ಯಾಪ್ಟನ್ ತಮ್ಮ ಫಿಟ್ನೆಸ್ ಬಗ್ಗೆ ಇನ್ನಷ್ಟು ಗಮನ ಹರಿಸಬೇಕು. ಉಳಿದಂತೆ ಅವರ ಬ್ಯಾಟಿಂಗ್ ಬಗ್ಗೆ ಯಾವುದೇ ಅನುಮಾನವಿಲ್ಲ. ಇನ್ನು, ವಿರಾಟ್ ಕೊಹ್ಲಿ ಈಗಾಗಲೇ ಉತ್ತಮ ಫಿಟ್ನೆಸ್ ಹಾಗೂ ಫಾರ್ಮ್ನಲ್ಲಿದ್ದಾರೆ. ಇಂಗ್ಲೆAಡ್ ವಿರುದ್ಧ ಲಾರ್ಡ್್ಸ ಅಂಗಳದಲ್ಲಿ ರೋಹಿತ್ ಆಡಿದ 138 ರನ್‌ಗಳ ಆಕರ್ಷಕ ಇನ್ನಿಂಗ್ಸ್ ನನಗೆ ಬಹಳ ಖುಷಿ ನೀಡಿತು ಎಂದು ಅಬ್ಬಾಸ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ,(ಏಜೆನ್ಸೀಸ್).

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST